ಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕು

Recommended Video

Nata Sarvabhouma Movie: 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕು..! | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ತಮಿಳು ನಟಿ ಅನುಪಮಾ ಪರಮೇಶ್ವರನ್ ಅಭಿನಯದ ನಟಸಾರ್ವಭೌಮ ಸಿನಿಮಾ ಇದೇ ವಾರ (ಫೆಬ್ರವರಿ 7) ವರ್ಲ್ಡ್ ವೈಡ್ ತೆರೆಕಾಣುತ್ತಿದೆ.

ಅಂಜನಿಪುತ್ರದ ನಂತರ ಅಪ್ಪು ಅಭಿನಯದ ಸಿನಿಮಾ ಬರ್ತಿದ್ದು, ಈಗಾಗಲೇ ನಿರೀಕ್ಷೆ ಬೆಟ್ಟದಷ್ಟಿದೆ. ರಾಜ್ಯದ ಹಲವು ಕಡೆ ಮಿಡ್ ನೈಟ್ ಶೋಗಳು ಆಯೋಜನೆಯಾಗಿದ್ದು, ಬಹುದೊಡ್ಡ ಓಪನಿಂಗ್ ಪಡೆಯುವ ಸಾಧ್ಯತೆ ಇದೆ.

ಇನ್ನು ಟೈಟಲ್ ನಿಂದಲೇ ವಿಶೇಷವೆನಿಸಿಕೊಂಡಿರುವ ಈ ಸಿನಿಮಾದಲ್ಲಿ ಅಂತಹದ್ದೇನಿದೆ. ಪುನೀತ್ ಅವರ ರೆಗ್ಯುಲರ್ ಚಿತ್ರಗಳಿಗಿಂತ ನಟಸಾರ್ವಭೌಮ ಹೇಗೆ ಸ್ಪೆಷಲ್ ಎಂದು ನೋಡುವುದಾರೇ ನಮಗೆ ಪ್ರಮುಖವಾಗಿ ಏಳು ಅಂಶಗಳು ಮೊದಲು ಕಾಣುತ್ತೆ. ಯಾವುದು ಅದು, ಮುಂದೆ ಓದಿ.....

ನಟಸಾರ್ವಭೌಮ ಟೈಟಲ್

ನಟಸಾರ್ವಭೌಮ ಟೈಟಲ್

ನಟಸಾರ್ವಭೌಮ ಅಂದ್ರೆ ಡಾ ರಾಜ್ ಕುಮಾರ್. ಅವರ ಹೆಸರಿನಲ್ಲಿ ಸಿನಿಮಾ ಮಾಡೋದು ಅಂದ್ರೆ ಅದು ಹೆಚ್ಚಿನ ಜವಾಬ್ದಾರಿ. ಈ ಶೀರ್ಷಿಕೆಯೊಂದು ಸಾಕು ಅಭಿಮಾನಿಗಳನ್ನ ಥಿಯೇಟರ್ ಗೆ ಕರೆದುಕೊಂಡು ಬರಲು. ಟೈಟಲ್ ಗೆ ತಕ್ಕಂತೆ ಅಪ್ಪು ಅಭಿನಯ ಕೂಡ ಇದೆ. ಇದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಮೊದಲ ಹಾರರ್ ಸಿನಿಮಾ

ಮೊದಲ ಹಾರರ್ ಸಿನಿಮಾ

ನಟಸಾರ್ವಭೌಮ ಚಿತ್ರ ಹಾರರ್ ಕಾಮಿಡಿ ಥ್ರಿಲ್ಲರ್ ಅನ್ನೋದು ಅಧಿಕೃತವಾಗಿದೆ. ಇದೇ ಮೊದಲ ಸಲ ಹಾರರ್ ಚಿತ್ರದಲ್ಲಿ ಪುನೀತ್ ಅಭಿನಯಿಸಿದ್ದಾರೆ. ಚಿತ್ರದಲ್ಲಿ ದೆವ್ವ ಯಾರು, ಯಾರ ಮೈಮೇಲೆ ದೆವ್ವ ಬರುತ್ತೆ ಎಂಬುದು ಗೊತ್ತಿಲ್ಲ. ಆದ್ರೆ, ಅಪ್ಪು ಅಭಿನಯದ ನೋಡಿದ್ರೆ, ಫುಲ್ ಮಜಾ ಇದೆ ಅನ್ನೋದು ಪಕ್ಕಾ. ಈ ಎಂಟರ್ ಟೈನ್ಮೆಂಟ್ ಮಿಸ್ ಮಾಡಿಕೊಳ್ಳುವುದಕ್ಕೆ ಕನ್ನಡ ಅಭಿಮಾನಿಗಳು ಇಷ್ಟಪಡುವುದಿಲ್ಲ.

ಫೋಟೋ ಜರ್ನಲಿಸ್ಟ್ ಪಾತ್ರ

ಫೋಟೋ ಜರ್ನಲಿಸ್ಟ್ ಪಾತ್ರ

ಹಾರರ್ ಸಿನಿಮಾ ಎನ್ನುವುದು ಎಷ್ಟು ಸ್ಪೆಷಲ್ ಆಗಿದ್ಯೋ ಅದೇ ರೀತಿ ಈ ಚಿತ್ರದಲ್ಲಿ ಪುನೀತ್ ಫೋಟೋ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿರುವುದು ವಿಶೇಷ. ಜರ್ನಲಿಸ್ಟ್ ಪಾತ್ರದಲ್ಲೂ ಅಪ್ಪು ಅಭಿನಯಿಸುತ್ತಿರುವುದು ಮೊದಲ ಸಲ. ಹಾಗಾಗಿ, ಜರ್ನಲಿಸ್ಟ್ ಆಗಿ ಸಮಾಜಕ್ಕೆ ಯಾವ ರೀತಿ ಮಾದರಿಯಾಗ್ತಾರೆ ಎನ್ನುವುದನ್ನ ನೋಡಲು ಥ್ರಿಲ್ ಆಗಿದೆ.

ಅಪ್ಪು-ರಚಿತಾ ರಾಮ್

ಅಪ್ಪು-ರಚಿತಾ ರಾಮ್

'ಚಕ್ರವ್ಯೂಹ' ಬಳಿಕ ಪುನೀತ್ ರಾಜ್ ಕುಮಾರ್ ಮತ್ತು ರಚಿತಾ ರಾಮ್ ಮತ್ತೆ ಒಂದಾಗಿದ್ದಾರೆ. ಆ ಚಿತ್ರಕ್ಕಿಂತ ಈ ಚಿತ್ರದಲ್ಲಿ ಮತ್ತಷ್ಟು ಮುದ್ದಾಗಿ ಕಾಣಿಸ್ತಿರುವ ಈ ಜೋಡಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಪವನ್ ಒಡೆಯರ್-ಅಪ್ಪು

ಪವನ್ ಒಡೆಯರ್-ಅಪ್ಪು

ಈ ಹಿಂದೆ ಪವನ್ ಒಡೆಯರ್ ಮತ್ತು ಪುನೀತ್ ಜೋಡಿಯಲ್ಲಿ ರಣವಿಕ್ರಮ ಸಿನಿಮಾ ಬಂದಿತ್ತು. ಆ ಚಿತ್ರದ ಬಳಿಕ ಈಗ ನಟಸಾರ್ವಭೌಮ ಬರ್ತಿದ್ದು, ಇವರಿಬ್ಬರ ಕಾಂಬಿನೇಷನ್ ಮೇಲೆಯೂ ಭರವಸೆ ಇದೆ.

ರಾಕ್ ಲೈನ್ ಸಿನಿಮಾ

ರಾಕ್ ಲೈನ್ ಸಿನಿಮಾ

ನಟಸಾರ್ವಭೌಮ ಚಿತ್ರವನ್ನ ನಿರ್ಮಾಣ ಮಾಡಿರುವುದು ರಾಕ್ ಲೈನ್ ವೆಂಕಟೇಶ್. ಹಾಗಾಗಿ, ಈ ಚಿತ್ರ ತುಂಬಾ ಅದ್ಧೂರಿಯಾಗಿ ಮೂಡಿಬಂದಿರುತ್ತೆ ಅನ್ನೋದ್ರಲ್ಲಿ ಯಾವುದು ಅನುಮಾನವಿಲ್ಲ. ದುಬಾರಿ ಸೆಟ್, ಲೋಕೇಶನ್, ಕಾಸ್ಟ್ಯೂಮ್, ಹಾಡುಗಳು, ಫೈಟ್ ಹೀಗೆ ಎಲ್ಲವೂ ರಿಚ್ ಆಗಿ ಬಂದಿರುತ್ತೆ. ಅಷ್ಟೇ ಅಲ್ಲದೇ ಮೌರ್ಯ ಮತ್ತು ಅಜಯ್ ಚಿತ್ರಗಳ ನಂತರ ರಾಕ್ ಲೈನ್ ಮತ್ತು ಪುನೀತ್ ಜೋಡಿಯಲ್ಲಿ ಬರ್ತಿರುವ ಸಿನಿಮಾ ಇದು.

ಡಿ ಇಮ್ಮಾನ್ ಸಂಗೀತ

ಡಿ ಇಮ್ಮಾನ್ ಸಂಗೀತ

ನಟಸಾರ್ವಭೌಮ ಚಿತ್ರದ ಆಡಿಯೋ ಹಿಟ್ ಆಗಿದೆ. ಡ್ಯಾನ್ಸ್ ವಿತ್ ಅಪ್ಪು ಅಂತಾ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಡಿ ಇಮ್ಮಾನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಮತ್ತಷ್ಟು ಜೋಶ್ ಹೆಚ್ಚಿಸಿದೆ. ಈ ಹಿಂದೆ ಕನ್ನಡದಲ್ಲಿ ಕೋಟಿಗೊಬ್ಬ 2 ಚಿತ್ರಕ್ಕೆ ಇಮ್ಮಾನ್ ಸಂಗೀತ ನೀಡಿದ್ದರು. ಇಷ್ಟೆಲ್ಲಾ ವಿಶೇಷತೆಗಳ ಜೊತೆಗೆ ಅನುಪಮಾ ಪರಮೇಶ್ವರನ್, ರವಿಶಂಕರ್ ನಟನೆ ಚಿತ್ರಕ್ಕೆ ಕಿಕ್ ನೀಡಿದೆ.

More from Filmibeat

English summary
Kannada actor Puneeth Rajkumar and rachita ram starrer 'Nata Sarvabhouma' movie will release on february 7th. 7 reason to watch nata sarvabhouma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X