ಶಿವಣ್ಣನ 'ಟಗರು' ನೋಡೋಕು ಮುಂಚೆ ಈ 7 ಸಂಗತಿ ತಿಳಿದಿರಿ

By Bharath Kumar

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರವನ್ನ ನೋಡಲು ಫಸ್ಟ್ ಡೇ ಫಸ್ಟ್ ಶೋಗೆ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಬರ್ತಿದ್ದಾರೆ. ದುಬೈಯಿಂದ ಅಭಿಮಾನಿಗಳು ಸಿನಿಮಾ ನೋಡಲು ಬರ್ತಿದ್ದಾರೆ. 'ಟಗರು' ಹಾಡಿಗೆ ಬೆಂಗಳೂರಿನ ಮಹಿಳೆಯರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ತಿಂಗಳುಗಳ ಹಿಂದೆಯೇ ಚಿತ್ರಮಂದಿರ, ಮಲ್ಟಿಫ್ಲೆಕ್ಸ್ ಗಳಲ್ಲಿ 'ಟಗರು' ಸ್ವಾಗತಿಸಲು ಕಟೌಟ್ ಗಳನ್ನ ಹಾಕಿ ಕಾದು ಕುಂತಿದ್ದಾರೆ.

'ಟಗರು' ಚಿತ್ರದ ಬಗ್ಗೆ ಬಹು ದೊಡ್ಡ ಕ್ರೇಜ್ ನಿರ್ಮಾಣವಾಗಿದೆ. ಅದರಲ್ಲೂ ಶಿವಣ್ಣನ ಅಪ್ಪಟ ಅಭಿಮಾನಿಗಳಂತೂ ಟಿಕೆಟ್ ಬುಕ್ ಮಾಡಿ ಗುರುವಾರ ರಾತ್ರಿಯೇ ಚಿತ್ರಮಂದಿರದ ಮುಂದೆ ಜಮಾಯಿಸುವ ಸೂಚನೆ ಕೊಟ್ಟಿದ್ದಾರೆ.

Recommended Video

Tagaru first day first show celebration at Urvasi | Filmibeat Kannada

ಹೀಗೆ, 'ಟಗರು' ಸಿನಿಮಾದ ಬಗ್ಗೆ ಇಷ್ಟೊಂದು ಹೈಪ್ ಉಂಟಾಗಲು ಕಾರಣವೇನು? 'ಟಗರು' ಸಿನಿಮಾವನ್ನ ನೋಡಲೇಬೇಕು ಅಂತ ಕಾಯ್ತಿರುವ ಪ್ರೇಕ್ಷಕರ ಮನಸ್ಸಿನಲ್ಲಿ ಏನಿದೆ? ಯಾವ ಉದ್ದೇಶಕ್ಕಾಗಿ ಶಿವಣ್ಣ 'ಟಗರು' ನೋಡಲು ಮುಂದಾಗಿದ್ದಾರೆ. ಇಲ್ಲಿದೆ ನೋಡಿ 7 ಪ್ರಮುಖ ಅಂಶಗಳು. ಈ 7 ಕಾರಣಗಳು ಸಾಕು ಟಗರು ನೋಡೋಕೆ. ಮುಂದೆ ಓದಿ....

ಶಿವಣ್ಣನ ಸಿನಿಮಾ

ಶಿವಣ್ಣನ ಸಿನಿಮಾ

ಟಗರು ಶಿವರಾಜ್ ಕುಮಾರ್ ಸಿನಿಮಾ ಎನ್ನುವುದೇ ಮುಖ್ಯ ಕಾರಣ. ಸೆಂಚುರಿ ಸ್ಟಾರ್ ಸಿನಿಮಾ ಅಂದ್ರೆ ಎಂತಹ ಪ್ರೇಕ್ಷಕರು ಕೂಡ ಥಿಯೇಟರ್ ಗೆ ಬರ್ತಾರೆ. ಇನ್ನು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಹೀಗಾಗಿ, ಈ ಚಿತ್ರವನ್ನ ಮಿಸ್ ಮಾಡಿಕೊಳ್ಳೊಕೆ ಶಿವು ಫ್ಯಾನ್ಸ್ ಇಷ್ಟಪಡಲ್ಲ.

ದುನಿಯಾ ಸೂರಿ ಸಿನಿಮಾ

ದುನಿಯಾ ಸೂರಿ ಸಿನಿಮಾ

ಶಿವರಾಜ್ ಕುಮಾರ್ ಎನ್ನುವ ಬ್ರ್ಯಾಂಡ್ ಈ ಚಿತ್ರಕ್ಕೆ ಹೇಗಿದ್ಯೋ, ಅದೇ ರೀತಿ ದುನಿಯಾ ಸೂರಿ ಸಿನಿಮಾ ಎಂಬ ಬ್ರ್ಯಾಂಡ್ ಕೂಡ ಇದೆ. ಯಾಕಂದ್ರೆ, ಇದಕ್ಕು ಮುಂಚೆ ಸೂರಿ ಸಿನಿಮಾಗಳು ಅಷ್ಟರ ಮಟ್ಟಿಗೆ ವಿಭಿನ್ನತೆ, ವಿಶೇಷತೆಗಳಿಂದ ಹೊಸ ಟ್ರೆಂಡ್ ಹುಟ್ಟಿಹಾಕಿದೆ. ದುನಿಯಾ ಚಿತ್ರದಿಂದ ಹಿಡಿದು ಇಂತಿ ನಿನ್ನ ಪ್ರೀತಿಯ, ಜಾಕಿ, ಕೆಂಡಸಂಪಿಗೆ, ಅಣ್ಣಾಬಾಂಡ್ ಹೀಗೆ ಪ್ರತಿಯೊಂದು ಚಿತ್ರವೂ ಹೊಸತನವನ್ನೇ ನೀಡಿದೆ. ಹೀಗಾಗಿ, 'ಟಗರು' ಕೂಡ ಹೊಸ ರೀತಿಯ ಸಿನಿಮಾ ಆಗಿರಲಿದೆ ಎಂಬ ಭರವಸೆ.

ಶಿವಣ್ಣ-ಸೂರಿ ಕಾಂಬಿನೇಷನ್

ಶಿವಣ್ಣ-ಸೂರಿ ಕಾಂಬಿನೇಷನ್

ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ 'ಟಗರು'. ಇದಕ್ಕು ಮೊದಲು 'ಕಡ್ಡಿಪುಡಿ' ಚಿತ್ರ ಇಬ್ಬರ ಜುಗಲ್ ಬಂದಿಯಲ್ಲಿ ತೆರೆಕಂಡಿತ್ತು. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡಿದ್ದಲ್ಲದೇ, ಇವರಿಬ್ಬರ ಕಾಂಬಿನೆಷನ್ ಮೇಲೆ ನಿರೀಕ್ಷೆ ಹೆಚ್ಚಿಸಿತ್ತು.

ಧನಂಜಯ್-ವಸಿಷ್ಠ ಕಾಂಬಿನೇಷನ್

ಧನಂಜಯ್-ವಸಿಷ್ಠ ಕಾಂಬಿನೇಷನ್

ಟಗರು ಚಿತ್ರದ ಇನ್ನೊಂದು ವಿಶೇಷ ಅಂದ್ರೆ ಸ್ಪೆಷಲ್ ಸ್ಟಾರ್ ಧನಂಜಯ. ಇದೇ ಮೊದಲ ಭಾರಿಗೆ ಧನಂಜಯ್ ವಿಲನ್ ಆಗಿ ಅಭಿನಯಿಸಿದ್ದಾರೆ. ಒಬ್ಬ ಯಶಸ್ವಿ ನಾಯಕನಾಗಿದ್ದ ಧನಂಜಯ್ ಶಿವಣ್ಣನ ಎದುರು ಖಳನಾಯಕನಾಗಿ ಕಾಣಿಸಿಕೊಂಡಿರುವುದು ಚಿತ್ರಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಧನಂಜಯ್ ಗೆ ವಸಿಷ್ಠ ಸಿಂಹ ಸಾಥ್ ಕೊಟ್ಟಿದ್ದಾರೆ.

ಟಗರು ಹಾಡುಗಳ ಅಬ್ಬರ

ಟಗರು ಹಾಡುಗಳ ಅಬ್ಬರ

ಟಗರು ಸಿನಿಮಾ ಬಿಡುಗಡೆಗೂ ಮೊದಲು ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದೆ. ಅದರಲ್ಲೂ ಟೈಟಲ್ ಹಾಡಂತೂ ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸಿದೆ. ಪ್ರತಿಯೊಂದು ಹಾಡಿನಲ್ಲೂ ಒಂದು ಫೋರ್ಸ್ ಇದೆ. ಇದು ಸಿನಿಮಾ ಅಭಿಮಾನಿಗಳ ಕುತೂಹಲನ್ನೆ ಕೆರಳಿಸಿದೆ.

ಟೀಸರ್ ಹುಟ್ಟಿಹಾಕಿರುವ ಸೆನ್ಸಷ್ನಲ್

ಟೀಸರ್ ಹುಟ್ಟಿಹಾಕಿರುವ ಸೆನ್ಸಷ್ನಲ್

'ಟಗರು' ಚಿತ್ರದ ಟ್ರೈಲರ್ ರಿಲೀಸ್ ಆಗಿಲ್ಲ. ಆದ್ರೆ, ಮೇಕಿಂಗ್ ವಿಡಿಯೋ ಮತ್ತು ಟೀಸರ್ ತೆರೆಕಂಡಿತ್ತು. ಸುಕ್ಕ ಸೂರಿಯ ನಿರ್ದೇಶನದ ಸ್ಟೈಲ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಶಿವಣ್ಣನ ಸ್ಟಂಟ್ ಗೆ ಥ್ರಿಲ್ ಆಗಿದ್ದಾರೆ. ಧನಂಜಯ್ ರಾ ಲುಕ್ ಗೆ ನೋಡುಗರನ್ನ ಕೊಲ್ಲುವಂತಿದೆ.

ಮಾಸ್ ಎಲಿಮೆಂಟ್ಸ್

ಮಾಸ್ ಎಲಿಮೆಂಟ್ಸ್

ಟಗರು ಹೆಚ್ಚು ಸುದ್ದಿಯಾಗಿರುವುದೇ ಮಾಸ್ ಎಲಿಮೆಂಟ್ಸ್ ವಿಚಾರಕ್ಕೆ. ಲಾಂಗು ಮಚ್ಚುಗಳ ಅಬ್ಬರ ಜೋರಾಗಿದೆ. ರಕ್ತ ತುಂಬಿ ತುಳುಕುತ್ತಿದೆ. ಗನ್ ಗಳು ರಾರಾಜಿಸುತ್ತಿದೆ. ಕ್ರೌರ್ಯ ತುಂಬಿದೆ. ಹೀಗೆ, ಸಿನಿಮಾ ಪೂರ್ತಿ ಹೊಡಿಬಡಿ, ಚೇಸಿಂಗ್, ಫೈಟಿಂಗ್, ಕೊಲೆಯೇ ಹೆಚ್ಚಾಗಿದ್ದು, ಮಾಸ್ ಅಭಿಮಾನಿಗಳಿಗೆ ಇಷ್ಟವಾಗಲಿದೆ.

More from Filmibeat

English summary
7 Reason to Watch Shivarajkumar Tagaru Movie. movie releasing on this friday (february 23rd). the movie directed by duniya soori.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X