ದರ್ಶನ್-ನಾರಾಯಣ್ ಒಗ್ಗಟ್ಟಿಗೆ ಅಂಬಿ 'ಫೆವಿಕಾಲ್'

ಒಮ್ಮೆಫೊನ್ ಸಂಭಾಷಣೆಯ ವೇಳೆ ಅದೇನಾಯಿತೋ, ಒಟ್ಟಿನಲ್ಲಿ ನಂತರ ದರ್ಶನ್ ವಿರುದ್ಧ ಎಸ್ ನಾರಾಯಣ್ ಉರಿದುರಿದು ಬೀಳುತ್ತಿದ್ದರು. ಇದಕ್ಕೆ ಕಾರಣ, ನಾರಾಯಣ್ ಹೇಳಿದಂತೆ "ನಾನು ದರ್ಶನ್‌ಗೆ ಫೋನ್ ಮಾಡಿದ್ದೆ. ಆಗ ಕರೆ ಸ್ವೀಕರಿಸಿದ್ದ ವ್ಯಕ್ತಿ, ಅಣ್ಣ ಇಲ್ಲ ಎಂದು ಹೇಳಿದ್ದಾರೆ. ಆದರೆ ನನ್ನ ಪ್ರಕಾರ ಹಾಗೆ ಹೇಳಿದ್ದು ಬೇರೆ ಯಾರೂ ಅಲ್ಲ, ಸ್ವತಃ ದರ್ಶನ್.
ನನ್ನ ಮನೆಯ ಮುಂದಿನ ಬೀದಿ ದೀಪದ ಅಡಿಯಲ್ಲಿ ಕಾಯುತ್ತಿದ್ದವರೆಲ್ಲ ಇಂದು ಹೀರೋಗಳಾಗಿದ್ದಾರೆ. ದರ್ಶನ್ ಈಗ ತನ್ನನ್ನು 'ಅಣ್ಣ' ಎಂದೇ ಸಂಬೋಧಿಸಬೇಕೆಂದು ಬಯಸುತ್ತಿದ್ದಾರೆ, ಆದರೆ ನಾನು ಹಾಗೆಲ್ಲ ಕರೆಯೋದಿಲ್ಲ " ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈಗ ಅವರಿಗೇ ಸಿನಿಮಾ ಮಾಡುತ್ತಿದ್ದಾರೆ.
ಆದರೆ ಬಲ್ಲ ಮೂಲಗಳ ಪ್ರಕಾರ ಮತ್ತೆ ಒಂದಾಗಲು ಕಾರಣ ರೆಬೆಲ್ ಸ್ಟಾರ್ ಅಂಬರೀಷ್. 'ನಾರಾಯಣ್ ಚಿತ್ರ ವೀರ ಪರಂಪರೆ' ವೇಳೆಯಲ್ಲೇ ಅವರಿಬ್ಬರಲ್ಲಿದ್ದ ಭಿನ್ನಾಭಿಪ್ರಾಯ ತೊಲಗಿಸಿ ಮತ್ತೆ ಒಂದಾಗಿಸುವ ಸಾಹಸಕ್ಕೆ ಕೈಹಾಕಿದ್ದರಂತೆ ಅಂಬಿ. ಈಗ ಅವರಿಬ್ಬರೂ ಒಟ್ಟಾಗಿ ಚಿತ್ರಮಾಡುವುದಕ್ಕೆ ಕಾರಣ ಕೂಡ ಅಂಬರೀಷ್ ಅಂತೆ.
ಒಟ್ಟಿನಲ್ಲಿ ಪ್ರತಿಭಾವಂತ ನಟರು, ನಿರ್ದೆಶಕರೆಲ್ಲರೂ ವೈಯಕ್ತಿಕ ಪ್ರತಿಷ್ಠೆ ಬದಿಗಿಟ್ಟು ಸಿನಿಪ್ರೇಕ್ಷಕರಿಗೆ ಒಳ್ಳೊಳ್ಳೆಯ ಕೊಡಲಿ ಎಂಬುದು ಕನ್ನಡ ಸಿನಿಅಭಿಮಾನಿಗಳ ಕೂಗು. ಅದನ್ನು ಕೇಳಿಸಿಕೊಂಡು ಮತ್ತೆ ಒಟ್ಟಾಗಿ ಚಿತ್ರ ನೀಡುತ್ತಿರುವ ದರ್ಶನ್ ಹಾಗೂ ನಾರಾಯಣ್ ಚಿತ್ರಕ್ಕಾಗಿ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











