For Quick Alerts
  ALLOW NOTIFICATIONS  
  For Daily Alerts

  ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ ಉಪೇಂದ್ರ-ಆರ್.ಚಂದ್ರು ಚಿತ್ರ 'ಕಬ್ಜ'

  |
  7 famous villains from different languages have signed for Upendra starrer Kabja

  ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಮತ್ತು ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಸದ್ದು ಮಾಡಿದ್ಮೇಲೆ ಅದೇ ಟ್ರೆಂಡ್ ನ ಮುಂದುವರೆಸಲು ಆರ್.ಚಂದ್ರು ಮನಸ್ಸು ಮಾಡಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸದ್ದು ಮಾಡಲು ಆರ್.ಚಂದ್ರು ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಕೈಜೋಡಿಸಿದ್ದಾರೆ.

  'ಐ ಲವ್ ಯು' ಚಿತ್ರದ ಬಳಿಕ ನಿರ್ದೇಶಕ ಆರ್.ಚಂದ್ರು ಮತ್ತು ಉಪೇಂದ್ರ ಮತ್ತೊಂದು ಬಾರಿ ಒಂದಾಗಿದ್ದಾರೆ. ಅಂದು ಲವ್ ಸ್ಟೋರಿ ಹೇಳಿದ್ದ ಈ ಜೋಡಿ ಇಂದು 'ಕಬ್ಜ' ಮೂಲಕ ಓರ್ವ ಡಾನ್ ಕಥೆಯನ್ನ ಹೇಳಲು ಹೊರಟಿದ್ದಾರೆ. ಹಾಗಂತ 'ಕಬ್ಜ' ಮಾಮೂಲಿ ರೌಡಿಸಂ ಕಥೆ ಅಂತ ಮೂಗು ಮುರಿಯಬೇಡಿ. 'ಕಬ್ಜ' ಮೂಲಕ ಹೊಸ ದಾಖಲೆ ಬರೆಯಲು ನಿರ್ದೇಶಕ ಆರ್.ಚಂದ್ರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

  'ಕಬ್ಜ' ಚಿತ್ರದಲ್ಲಿ ವಿವಿಧ ಭಾಷೆಯ ಏಳು ಜನಪ್ರಿಯ ಖಳನಟರು ಅಭಿನಯಿಸಲಿದ್ದಾರೆ. ಸಾಲದಕ್ಕೆ ಐನೂರು ಜನ ಗ್ಯಾಂಗ್ ಸ್ಟಾರ್ ಗಳು 'ಕಬ್ಜ' ಚಿತ್ರದಲ್ಲಿ ಇರಲಿದ್ದಾರೆ. 'ಕಬ್ಜ' ಪ್ಯಾನ್ ಇಂಡಿಯಾ ಚಿತ್ರವಾಗಲಿದ್ದು, ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿದೆ. ನಾಲ್ಕು ರಾಜ್ಯಗಳಲ್ಲಿ 'ಕಬ್ಜ' ಚಿತ್ರೀಕರಣಗೊಳ್ಳಲಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ 'ಕಬ್ಜ' ಹೊಸ ರೆಕಾರ್ಡ್ ಮಾಡಲು ರೆಡಿ ಆಗಿದೆ. ಮುಂದೆ ಓದಿರಿ...

  ಏಳು ಮಂದಿ ಖಳನಟರು.!

  ಏಳು ಮಂದಿ ಖಳನಟರು.!

  ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಕುತೂಹಲ ಹೆಚ್ಚಿಸುವ ಸುದ್ದಿ ಇದೇ ನೋಡಿ. 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಎದುರಿಗೆ ಏಳು ಮಂದಿ ಖಳನಾಯಕರು ಘರ್ಜಿಸಲಿದ್ದಾರೆ. ಕನ್ನಡದ ಪ್ರಕಾಶ್ ರೈ, ತೆಲುಗಿನ ಜಗಪತಿ ಬಾಬು, ಹಿಂದಿಯ ನಾನಾ ಪಾಟೇಕರ್, ಪ್ರದೀಪ್ ರಾವತ್, ಮನೋಜ್ ಬಾಜ್ಪೇಯಿ, ತಮಿಳಿನ ಸಮುದ್ರಖಣಿ ಮತ್ತು ಜಯಪ್ರಕಾಶ್ ರೆಡ್ಡಿ.. ಹೀಗೆ ವಿವಿಧ ಭಾಷೆಯ ಏಳು ಮಂದಿ ಖಳನಾಯಕರು 'ಕಬ್ಜ' ಚಿತ್ರದಲ್ಲಿ ಮಿಂಚಲಿದ್ದಾರೆ.

  ಹಿಂದಿ ದಿವಸ್ ದಿನವೇ ಕನ್ನಡ ಚಿತ್ರಕ್ಕೆ ಹಿಂದಿ ಟೈಟಲ್ಹಿಂದಿ ದಿವಸ್ ದಿನವೇ ಕನ್ನಡ ಚಿತ್ರಕ್ಕೆ ಹಿಂದಿ ಟೈಟಲ್

  ಎಲ್ಲರೂ ವಿಲನ್.?

  ಎಲ್ಲರೂ ವಿಲನ್.?

  'ಕಬ್ಜ' ಚಿತ್ರದಲ್ಲಿ ವಿವಿಧ ಭಾಷೆಯ ಜನಪ್ರಿಯ ವಿಲನ್ ಗಳು ಬಣ್ಣ ಹಚ್ಚಲಿದ್ದಾರೆ ಎಂಬ ಗುಟ್ಟನ್ನ ಸದ್ಯಕ್ಕೆ ನಿರ್ದೇಶಕ ಆರ್.ಚಂದ್ರು ಬಿಟ್ಟುಕೊಟ್ಟಿದ್ದಾರೆ. ಆದ್ರೆ, 'ಕಬ್ಜ' ಚಿತ್ರದಲ್ಲಿ ಇವರೆಲ್ಲರೂ ಖಳನಟರಾಗಿಯೇ ಅಬ್ಬರಿಸುತ್ತಾರಾ ಎಂಬುದು ಇನ್ನೂ ಸಸ್ಪೆನ್ಸ್ ಆಗೇ ಉಳಿದಿದೆ. ಇದಲ್ಲದೇ 'ಕಬ್ಜ' ಚಿತ್ರದಲ್ಲಿ ಬರೋಬ್ಬರಿ ಐನೂರು ಜನ ಗ್ಯಾಂಗ್ ಸ್ಟರ್ ಆಗಿ ನಟಿಸಲಿದ್ದಾರೆ. ಪ್ರತಿ ಫ್ರೇಮ್ ನಲ್ಲೂ ಗ್ಯಾಂಗ್ ಸ್ಟರ್ ಗಳು ಇರಲಿದ್ದಾರೆ ಅಂತಾರೆ ಆರ್.ಚಂದ್ರು.

  ಬಹು ಭಾಷೆಯಲ್ಲಿ ತಯಾರಾಗಲಿದೆ 'ಕಬ್ಜ'

  ಬಹು ಭಾಷೆಯಲ್ಲಿ ತಯಾರಾಗಲಿದೆ 'ಕಬ್ಜ'

  ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ 'ಕಬ್ಜ' ಚಿತ್ರ ಬಹು ಭಾಷೆಯಲ್ಲಿ ತಯಾರಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಭಾಷೆಯಲ್ಲಿ 'ಕಬ್ಜ' ಚಿತ್ರವನ್ನ ತೆರೆಗೆ ತರಲು ಸಕಲ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ನಾಲ್ಕು ರಾಜ್ಯಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆ. ನವೆಂಬರ್ 15 ರಿಂದ 'ಕಬ್ಜ' ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಮುಂಬೈ, ಕಲ್ಕತ್ತ, ಹೈದರಾಬಾದ್, ಮದುರೈ, ಮಂಗಳೂರಿನಲ್ಲಿ ಶೂಟಿಂಗ್ ಶೆಡ್ಯೂಲ್ ಇರಲಿದೆ.

  ವರ್ಕೌಟ್ ನಲ್ಲಿ ಉಪೇಂದ್ರ ಬಿಜಿ.!

  ವರ್ಕೌಟ್ ನಲ್ಲಿ ಉಪೇಂದ್ರ ಬಿಜಿ.!

  'ಬುದ್ಧಿವಂತ-2' ಚಿತ್ರೀಕರಣ ಮುಗಿಸಿಕೊಟ್ಟಿರುವ ಉಪೇಂದ್ರ ಸದ್ಯಕ್ಕೆ 'ಕಬ್ಜ' ಚಿತ್ರಕ್ಕೆ ಮಾತ್ರ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಕಬ್ಜ' ಚಿತ್ರದಲ್ಲಿ ಅಂದಕಾಲತ್ತಿಲ್ ಡಾನ್ ಆಗಿ ಉಪೇಂದ್ರ ಕಾಣಿಸಿಕೊಳ್ಳಬೇಕು. ಹೀಗಾಗಿ ತಮ್ಮ ದೇಹವನ್ನ ಹುರಿಗೊಳಿಸಲು ಉಪೇಂದ್ರ ಪ್ರತಿ ದಿನ ಮಿಸ್ ಇಲ್ಲದೇ ವರ್ಕೌಟ್ ಮಾಡುತ್ತಿದ್ದಾರೆ. ಅಂದ್ಹಾಗೆ, ಉಪೇಂದ್ರಗೆ ಈ ಚಿತ್ರದಲ್ಲಿ ನಾಯಕಿ ಯಾರಾಗ್ತಾರೆ ಎಂಬುದಿನ್ನೂ ತಿಳಿದು ಬಂದಿಲ್ಲ. ಗೊತ್ತಾದ ಕೂಡಲೆ ನಿಮಗೆ ಹೇಳ್ತೀವಿ, ಹೆಚ್ಚಿನ ಅಪ್ ಡೇಟ್ಸ್ ಗಾಗಿ ಆಗಾಗ 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಿರಿ.

  English summary
  7 famous villains from different languages have signed for Real Star Upendra starrer R Chandru directorial Multi-Lingual Movie Kabja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X