For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 26, 'ಲವ್‌ ಮಾಕ್ಟೈಲ್' ನಾಯಕಿ ಮಿಲನ-ಡಿಬಾಸ್ ಪಾಲಿಗೆ ವಿಶೇಷ ದಿನ

  |

  'ಲವ್‌ ಮಾಕ್ಟೈಲ್' ಚಿತ್ರದ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ ಮಿಲನ ನಾಗರಾಜ್‌ಗೆ ಇಂದು (ಸೆಪ್ಟೆಂಬರ್ 26) ವಿಶೇಷ ದಿನ. ಕೇವಲ ಮಿಲನ ಅವರಿಗೆ ಮಾತ್ರವಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ಇದು ಸ್ಮರಿಸುವ ದಿನ.

  ಈ ಕುರಿತು ನಟಿ ಮಿಲನ ನಾಗರಾಜ್ ಟ್ವಿಟ್ಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದು, ಏಳು ವರ್ಷದ ಜರ್ನಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಮತ್ತೊಂದೆಡೆ ದರ್ಶನ್ ಅವರ ಅಭಿಮಾನಿಗಳು ಸಹ ಈ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಅಷ್ಟಕ್ಕೂ, ಏನಿದು ಸೆಪ್ಟೆಂಬರ್ 26ರ ವಿಶೇಷ? ಮುಂದೆ ಓದಿ....

  ಆದಿ-ನಿಧಿಮಾ 'ಮಿಲನ'ಕ್ಕೆ ಆರು ವರ್ಷ: ಖುಷಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣಆದಿ-ನಿಧಿಮಾ 'ಮಿಲನ'ಕ್ಕೆ ಆರು ವರ್ಷ: ಖುಷಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

  'ಬೃಂದಾವನ' ಚಿತ್ರಕ್ಕೆ ಏಳು ವರ್ಷ

  'ಬೃಂದಾವನ' ಚಿತ್ರಕ್ಕೆ ಏಳು ವರ್ಷ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮಿಲನ ನಾಗರಾಜ್, ಕಾರ್ತಿಕ ನಾಯರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬೃಂದಾವನ ಚಿತ್ರ ಬಿಡುಗಡೆಯಾಗಿ ಇಂದಿಗೆ ಏಳು ವರ್ಷ ಪೂರೈಸಿದೆ. 2013 ಸೆಪ್ಟೆಂಬರ್ 26 ರಂದು ಈ ಚಿತ್ರ ತೆರೆಕಂಡಿತ್ತು. ಇಂದಿಗೆ ಏಳು ವರ್ಷ ಆಗಿದೆ.

  ಇದು ಎಂತಹ ಜರ್ನಿ

  ಇದು ಎಂತಹ ಜರ್ನಿ

  ''ಇದು ಎಂತಹ ಜರ್ನಿಯಾಗಿದೆ! ಪ್ರತಿ ಹೊಸ ಚಿತ್ರ, ಹೊಸ ಸೆಟ್, ಹೊಸ ಜನರು ನಾನು ಬಲವಾಗಲು ಮತ್ತು ಉತ್ತಮ ವ್ಯಕ್ತಿಯಾಗಲು ಕಲಿಸಿದ್ದಾರೆ. ನನ್ನ ಜರ್ನಿಯಲ್ಲಿ ಅದ್ಭುತ ಬೆಂಬಲ ನೀಡಿದ ನನ್ನ ಎಲ್ಲ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಮತ್ತು ಸಹ ನಟರಿಗೆ ಪ್ರೀತಿಯ ಧನ್ಯವಾದಗಳು'' ಎಂದು ನಟಿ ಟ್ವೀಟ್ ಮಾಡಿದ್ದಾರೆ.

  ಬ್ರೇಕ್‌ ಬಳಿಕ ಅಖಾಡಕ್ಕೆ ಸಜ್ಜಾದ ಡಿ ಬಾಸ್: ಹೊಸ ಲುಕ್, ಹೊಸ ಸ್ಟೈಲ್!ಬ್ರೇಕ್‌ ಬಳಿಕ ಅಖಾಡಕ್ಕೆ ಸಜ್ಜಾದ ಡಿ ಬಾಸ್: ಹೊಸ ಲುಕ್, ಹೊಸ ಸ್ಟೈಲ್!

  ಮಿಲನಗೆ ಬ್ರೇಕ್ ಕೊಟ್ಟ ಚಿತ್ರ!

  ಮಿಲನಗೆ ಬ್ರೇಕ್ ಕೊಟ್ಟ ಚಿತ್ರ!

  ಮಿಲನ ನಾಗರಾಜ್‌ಗೆ ಬೃಂದಾವನ ಎರಡನೇ ಸಿನಿಮಾ. ಅದಕ್ಕೂ ಮುಂಚೆ 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದಲ್ಲಿ ಚೊಚ್ಚಲ ಬಾರಿಗೆ ನಟಿಸಿದ್ದರು. ಈ ಚಿತ್ರದ ಬಳಿಕ ದರ್ಶನ್ ಜೊತೆ ನಾಯಕಿಯಾಗಿ ನಟಿಸಿದ ಮಿಲನಗೆ ಇದು ದೊಡ್ಡ ಚಿತ್ರ ಆಗಿತ್ತು. ಅದಾದ ಬಳಿಕ ಚಾರ್ಲಿ, ಜಾನಿ ಹಾಗೂ ಒಂದು ಮಲಯಾಳಂ ಚಿತ್ರ ಮಾಡಿದರೂ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. 2020 ರಲ್ಲಿ ತೆರೆಕಂಡ 'ಲವ್‌ ಮಾಕ್ಟೈಲ್' ಮೂಲಕ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.

  ನನ್ನ ಮಾತು ಕೇಳಲೇ ಇಲ್ಲ ನೀನು ಎಂದ್ರು ಇಳಯರಾಜ | Filmibeat Kannada
  ತೆಲುಗಿನ ರೀಮೇಕ್ ಬೃಂದಾವನ

  ತೆಲುಗಿನ ರೀಮೇಕ್ ಬೃಂದಾವನ

  ಅಂದ್ಹಾಗೆ, ಕನ್ನಡದ ಬೃಂದಾವನ ತೆಲುಗಿನ ಬೃಂದಾವನಂ ಚಿತ್ರದ ರೀಮೇಕ್. ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್ ನಾಯಕರಾಗಿದ್ದರು. ಈ ಚಿತ್ರವನ್ನು ಕನ್ನಡದಲ್ಲಿ ದರ್ಶನ್ ಮಾಡಿದ್ದು, ಕಾರ್ತಿಕ ನಾಯರ್ ಮತ್ತು ಮಿಲನ ನಾಯಕಿಯರಾಗಿ ನಟಿಸಿದ್ದರು. ಸಾಯಿ ಕುಮಾರ್, ಸಂಪತ್ ರಾಜ್, ಕುರಿ ಪ್ರತಾಪ್, ದೊಡ್ಡಣ್ಣ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದರು. ಕೆ ಮಾದೇಶ್ ಈ ಚಿತ್ರ ನಿರ್ದೇಶಿಸಿದ್ದರು.

  English summary
  7 Years Of Brindavana: Actress Milana Nagaraj Recalls Memories of working in the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X