70th Filmfare Awards South: 2024ನೇ ಸಾಲಿನ ಚಿತ್ರಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿ, ಕನ್ನಡ ನಾಮಿನೇಷನ್ಸ್ ಲಿಸ್ಟ್

ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲ್ಮ್‌ಫೇರ್ ಸೌತ್‌ ಪ್ರಶಸ್ತಿ ಕೂಡ ಒಂದು. 2024ನೇ ಸಾಲಿನಲ್ಲಿ ಬಿಡುಗಡೆಯಾದ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳ ಜೊತೆ ಆಯಾ ಭಾಷೆಗಳ ಸಿನಿಮಾಗಳನ್ನು ಹೋಲಿಸಿ ವಿಜೇತರನ್ನು ಗುರ್ತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಫೆಬ್ರವರಿ 21ರಂದು 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ.

2024ರಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳಲ್ಲಿ ಯಾರಿಗೆಲ್ಲಾ ಫಿಲ್ಮ್‌ಫೇರ್ ಗರಿ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ. ಸದ್ಯ ಆಯಾ ಭಾಷೆಗಳ ಸಿನಿಮಾಗಳಲ್ಲಿ ಅತ್ಯುತ್ತಮ ಚಿತ್ರಗಳ ನಾಮಿನೇಷನ್ ಪಟ್ಟಿ ಕೂಡ ಬಿಡುಗಡೆಯಾಗಿದೆ. ಒಟ್ಟು 10 ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲು ಸಿದ್ಧತೆ ನಡೆದಿದೆ.

70th Filmfare Awards south 2024 Kannada Nominations Out Sudeep Shivanna and Ganesh Lead the Race

ಈ ಬಾರಿ ಕೇರಳ ಟೂರಿಸಂ ಸಹಭಾಗಿತ್ವದಲ್ಲಿ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ 'ಭೀಮ', 'ಶಾಖಾಹಾರಿ', 'ಬಘೀರ' ನಾಮಿನೇಟ್ ಆಗಿವೆ. ಅದೇ ರೀತಿ ಅತ್ಯುತ್ತಮ ನಟ ಪ್ರಶಸ್ತಿಗೆ ಶಿವಣ್ಣ, ದುನಿಯಾ ವಿಜಯ್, ಸುದೀಪ್ ಹಾಗೂ ಗಣೇಶ್ ಹೆಸರು ನಾಮಿನೇಷನ್ ಲಿಸ್ಟ್‌ನಲ್ಲಿದೆ. ಇನ್ನು ಅತ್ಯುತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ಅಜನೀಶ್ ಲೋಕನಾಥ್, ಅರ್ಜುನ್ ಜನ್ಯಾ ಹಾಗೂ ಅತ್ಯುತ್ತಮ ನಟಿ ವಿಭಾಗದಲ್ಲಿ ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅಕ್ಷತಾ ಪಾಂಡವಪುರ ಪೈಪೋಟಿ ನಡೆಸುತ್ತಿದ್ದಾರೆ. ಕಂಪ್ಲೀಟ್ ನಾಮಿನೇಷನ್ಸ್ ಲಿಸ್ಟ್ ಮುಂದೆ ಓದಿ.

ಅತ್ಯುತ್ತಮ ನಟ

ಸುದೀಪ್ (ಮ್ಯಾಕ್ಸ್)

ದುನಿಯಾ ವಿಜಯ್ (ಭೀಮ)

ಗಣೇಶ್ (ಕೃಷ್ಣಂ ಪ್ರಣಯ ಸಖಿ)

ರಂಗಾಯಣ ರಘು (ಶಾಖಾಹಾರಿ)

ಶಿವರಾಜ್‌ಕುಮಾರ್ (ಭೈರತಿ ರಣಗಲ್)

ಶ್ರೀಮುರಳಿ (ಬಘೀರ)

ಅತ್ಯುತ್ತಮ ನಟಿ

ಚೈತ್ರ ಆಚಾರ್ (ಬ್ಲಿಂಕ್)

ರೋಷಿಣಿ ಪ್ರಕಾಶ್ (ಮರ್ಫಿ)

ರುಕ್ಮಿಣಿ ವಸಂತ್ (ಬಘೀರ)

ಅಕ್ಷತಾ ಪಾಂಡವಪುರ (ಕೋಳಿ ಎಸ್ರು)

ಅಂಕಿತ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)

ಬಿಂದು ಶಿವರಾಮ್ (ಕೆರೆಬೇಟೆ)

ಅತ್ಯುತ್ತಮ ಸಿನಿಮಾ

ಕೃಷ್ಣಂ ಪ್ರಣಯ ಸಖಿ

ಶಾಖಾಹಾರಿ

ಬಘೀರಾ

ಭೀಮಾ

ಬ್ಲಿಂಕ್

ಹದಿನೆಲೆಂಟು

ಅತ್ಯುತ್ತಮ ನಿರ್ದೇಶಕ

ರಾಜಗುರು ಬಿ (ಕೆರೆಬೇಟೆ)

ಸಂದೀಪ್ ಸುಂಕದ್ (ಶಾಖಾಹಾರಿ)

ದುನಿಯಾ ವಿಜಯ್ (ಭೀಮ)

ಪೃಥ್ವಿ ಕೋಣನೂರು (ಹದಿನೆಲೆಂಟು)

ಶ್ರೀನಿಧಿ ಬೆಂಗಳೂರು (ಬ್ಲಿಂಕ್)

ಉತ್ಸವ್ ಗೊನ್ವಾರ್ (ಫೋಟೋ)

ಅತ್ಯುತ್ತಮ ಪೋಷಕ ನಟ

ಪ್ರಭು ಮುಂಡ್ಕೂರ್ (ಮರ್ಯಾದೆ ಪ್ರಶ್ನೆ)

ಪ್ರಕಾಶ್ ರಾಜ್ (ಬಘೀರ)

ರಾಜ್ ಬಿ ಶೆಟ್ಟಿ (ರೂಪಾಂತರ)

ಗೋಪಾಲ ಕೃಷ್ಣ ದೇಶಪಾಂಡೆ (ಬ್ಲಿಂಕ್)

ಜಹಾಂಗೀರ್ (ಫೋಟೋ)

ಗೋಪಾಲ ಕೃಷ್ಣ ದೇಶಪಾಂಡೆ (ಶಾಖಾಹಾರಿ)

ನಾಗೇಂದ್ರ ಶಾ (ಮರ್ಯಾದೆ ಪ್ರಶ್ನೆ)

ಅತ್ಯುತ್ತಮ ಪೋಷಕ ನಟಿ

ಪ್ರಿಯಾ ಶತಮರ್ಶನ್ (ಭೀಮ)

ರೇಖಾ ಕೂಡ್ಲಿಗಿ (ಹದಿನೆಲೆಂಟು)

ಸಂಧ್ಯಾ ಅರಕೆರೆ (ಫೋಟೋ)

ಅಪೇಕ್ಷಾ ಚೋರನಹಳ್ಳಿ (ಕೋಳಿ ಎಸ್ರು)

ಹರಿಣಿ ಶ್ರೀಕಾಂತ್ (ಕೆರೆಬೇಟೆ)

ಲೇಖಾ ನಾಯ್ಡು (ರೂಪಾಂತರ)

ಅತ್ಯುತ್ತಮ ಸಂಗೀತ ನಿರ್ದೇಶನ

ವಿ ಹರಿಕೃಷ್ಣ (ಕರಟಕ ದಮನಕ)

ವೀರ್ ಸಮರ್ಥ್ (ಒಂದು ಸರಳ ಪ್ರೇಮ ಕಥೆ)

ಅಜನೀಶ್ ಲೋಕನಾಥ್ (ಮ್ಯಾಕ್ಸ್)

ಅನೂಪ್ ಸಿಳೀನ್ (ಕಾಲಾಪತ್ತರ್)

ಅರ್ಜುನ್ ಜನ್ಯಾ (ಕೃಷ್ಣಂ ಪ್ರಣಯ ಸಖಿ)

ಚರಣ್ ರಾಜ್ (ಭೀಮ)

ಅತ್ಯುತ್ತಮ ಗಾಯಕ

ಸೋನು ನಿಗಮ್ (ಹೇ ಗಗನ- ಕೃಷ್ಣಂ ಪ್ರಣಯ ಸಖಿ)

ವಿಜಯ್ ಪ್ರಕಾಶ್ (ಸಂಜೆ ಮೇಲೆ- ಮ್ಯಾಟ್ನಿ)

ಜಸ್ಕರನ್ ಸಿಂಗ್ (ದ್ವಾಪರ- ಕೃಷ್ಣಂ ಪ್ರಣಯ ಸಖಿ)

ಕಪಿಲ್ ಕಪಿಲನ್ (ಓ ಅನಾಹಿತಾ- ಇಬ್ಬನಿ ತಬ್ಬಿದ ಇಳೆಯಲಿ)

ಸಿದ್ಧಾರ್ಥ ಬೆಳ್ಮಣ್ಣು (ಸಖಿ- ಬ್ಲಿಂಕ್)

ಅತ್ಯುತ್ತಮ ಗೀತಸಾಹಿತ್ಯ

ಪ್ರಮೋದ್ ಮರವಂತೆ (ಸಖಿ-ಬ್ಲಿಂಕ್)

ವಿ. ನಾಗೇಂದ್ರ ಪ್ರಸಾದ್ (ದ್ವಾಪರ- ಕೃಷ್ಣಂ ಪ್ರಣಯ ಸಖಿ)

ಗೌಸ್ ಪೀರ್ (ಭುವನ ಹುಡುಕಿದೆ- ಕೆರೆಬೇಟೆ)

ಕವಿರಾಜ್ (ನಿನ್ನ ಹೆಗಲು- ಕೃಷ್ಣಂ ಪ್ರಣಯ ಸಖಿ)

ನಾಗಾರ್ಜುನ್ ಶರ್ಮಾ (ಡೋಂಟ್‌ ವರಿ ಬೇಬಿ ಚಿನ್ನಮ್ಮ- ಭೀಮ)

ಅತ್ಯುತ್ತಮ ಗಾಯಕಿ

ಶ್ರೀಲಕ್ಷ್ಮಿ ಬೆಳ್ಮಣ್ಣು (ರಾಧೆ- ಇಬ್ಬನಿ ತಬ್ಬಿದ ಇಳೆಯಲಿ)

ವೈಶ್ (ಐ ಲವ್ ಯು- ಭೀಮಾ)

ಇಂದು ನಾಗರಾಜ್ (ಚಿನ್ನಮ್ಮ- ಕೃಷ್ಣಂ ಪ್ರಣಯ ಸಖಿ)

ಶಿವಾನಿ ಸ್ವಾಮಿ (ಎಲ್ಲಾ ಮಾತನ್ನು ಒಂದೇ ಬಾರಿ-ಒಂದು ಸರಳ ಪ್ರೇಮ ಕಥೆ)

ಶ್ರುತಿ ಪ್ರಹ್ಲಾದ (ಹಿತ್ತಲಕ ಕರಿಬ್ಯಾಡ- ಕರಟಕ ದಮನಕ)

More from Filmibeat

Read more about: filmfare awards sandalwood awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X