For Quick Alerts
  ALLOW NOTIFICATIONS  
  For Daily Alerts

  ತಾರೆಯರಿಂದ ಬಂದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಸಂದೇಶ

  By Harshitha
  |

  ಇಂದು (ಆಗಸ್ಟ್ 15) ಭಾರತದೆಲ್ಲೆಡೆ 71ನೇ ಸ್ವಾತಂತ್ರ್ಯ ದಿನಾಚರಣೆಯ ಕಲರವ. ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಾಟ. ಭಾರತಾಂಬೆಯ ಜನ್ಮದಿನವಾದ ಈ ದಿನದಂದು ಭಾರತೀಯರೆಲ್ಲರೂ ದೇಶಭಕ್ತಿಯಿಂದ ಸ್ವಾತಂತ್ರ್ಯೋತ್ಸವವನ್ನ ಆಚರಿಸುತ್ತಿದ್ದಾರೆ.

  ಹಾಗೇ, ಸೆಲೆಬ್ರಿಟಿಗಳೂ ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನ ತಿಳಿಸಿದ್ದಾರೆ ಕನ್ನಡ ಚಿತ್ರರಂಗದ ನಟ-ನಟಿಯರು. ತಾರೆಯರ ಶುಭಾಶಯಗಳ ಸಂದೇಶಗಳು ಇಲ್ಲಿವೆ ನೋಡಿರಿ...

  ದೇಶಕ್ಕೆ ಸೆಲ್ಯೂಟ್ ಮಾಡಿದ ದರ್ಶನ್

  ದೇಶಕ್ಕೆ ಸೆಲ್ಯೂಟ್ ಮಾಡಿದ ದರ್ಶನ್

  ''ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ದೇಶಕ್ಕೆ ಸೆಲ್ಯೂಟ್ ಮಾಡೋಣ'' ಎಂಬ ಸಂದೇಶದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ.

  ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಪೇಂದ್ರ ಆಡಿರುವ ಮಾತಿದು...ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಪೇಂದ್ರ ಆಡಿರುವ ಮಾತಿದು...

  ಜೈ ಜವಾನ್, ಜೈ ಕಿಸಾನ್

  ಜೈ ಜವಾನ್, ಜೈ ಕಿಸಾನ್

  ''ಜೈ ಜವಾನ್, ಜೈ ಕಿಸಾನ್'' ಎಂದು ಯೋಧ ಹಾಗೂ ರೈತರಿಗೆ ಜೈಕಾರ ಹಾಕುತ್ತಾ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ ನಿರ್ದೇಶಕ ಪ್ರೇಮ್.

  ರಮೇಶ್-ಗಣೇಶ್ ರಿಂದ ಧೀರ ಯೋಧರಿಗೊಂದು ಬಹಿರಂಗ ಪತ್ರರಮೇಶ್-ಗಣೇಶ್ ರಿಂದ ಧೀರ ಯೋಧರಿಗೊಂದು ಬಹಿರಂಗ ಪತ್ರ

  ಸುಮಲತಾ ಅಂಬರೀಶ್

  ಸುಮಲತಾ ಅಂಬರೀಶ್

  ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಎಲ್ಲರಿಗೂ ನಟಿ ಸುಮಲತಾ ಅಂಬರೀಶ್ ತಿಳಿಸಿರುವುದು ಹೀಗೆ....

  ಕಿಚ್ಚ ಸುದೀಪ್

  ಕಿಚ್ಚ ಸುದೀಪ್

  ''ಸ್ವತಂತ್ರವಾಗಿ ಜೀವನವನ್ನ ನಡೆಸಿ'' ಎನ್ನುತ್ತಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ್ದಾರೆ ಕಿಚ್ಚ ಸುದೀಪ್

  ಸ್ವಾತಂತ್ರ್ಯೋತ್ಸವದ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳುಸ್ವಾತಂತ್ರ್ಯೋತ್ಸವದ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳು

  ಮಹಿಳೆಯರನ್ನ ಗೌರವಿಸಿ

  ಮಹಿಳೆಯರನ್ನ ಗೌರವಿಸಿ

  ''ಭಾರತ್ ಮಾತಾ ಕಿ ಜೈ'' ಎನ್ನುತ್ತಾ ''ಮಹಿಳೆಯರನ್ನ ಗೌರವಿಸಿ'' ಎಂಬ ಸಂದೇಶದೊಂದಿಗೆ ಪವನ್ ಒಡೆಯರ್ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

  ಶುಭಾಶಯಗಳ ಮಹಾಪೂರ

  ಶುಭಾಶಯಗಳ ಮಹಾಪೂರ

  ಇವರೆಲ್ಲರೊಂದಿಗೆ ನಟ ಜಗ್ಗೇಶ್, ಗಣೇಶ್, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಕಾಲಿವುಡ್, ಟಾಲಿವುಡ್, ಬಾಲಿವುಡ್ ನ ಅನೇಕ ತಾರೆಯರು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

  English summary
  Check out the Celebrities Tweet on the occasion of 71st Independence Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X