71st National Film Awards: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ, ಅತ್ಯುತ್ತಮ ನಟ, ನಟಿ ಯಾರು?

2023ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ನವ ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ವಿಜೇತರ ಹೆಸರುಗಳನ್ನು ಪ್ರಕಟಿಸಿಲಾಗಿದೆ. ಅತ್ಯುತ್ತಮ ತೆಲುಗು ಸಿನಿಮಾ ಆಗಿ ಭಗವಂತ್ 'ಕೇಸರಿ' ಆಯ್ಕೆ ಆಗಿದೆ. 'ಪಾರ್ಕಿಂಗ್' ಅತ್ಯುತ್ತಮ ತಮಿಳು ಸಿನಿಮಾ ಎನಿಸಿಕೊಂಡಿದೆ.

'ಉಲ್ಲೋಳುಕ್ಕು' ಅತ್ಯುತ್ತಮ ಮಲಯಾಳಂ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. 'ಕಂದೀಲು' ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದಿದೆ.

71st National Film Awards 2024 Full Winners List

'ಕಥಲ್' ಅತ್ಯುತ್ತಮ ಹಿಂದಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 'ಹನುಮಾನ್' ಚಿತ್ರದ ಸಾಹಸ ಸಂಯೋಜನೆಗಾಗಿ ನಂದು ಹಾಗೂ ಪೃಥ್ವಿ ಪ್ರಶಸ್ತಿ ಪಡೆದಿದ್ದಾರೆ. 'ಅನಿಮಲ್' ಚಿತ್ರಕ್ಕಾಗಿ ಸಚಿನ್ ಮತ್ತು ಹರಿಹರನ್ ಅತ್ಯುತ್ತಮ ಸೌಂಡ್ ಡಿಸೈನ್ ಪ್ರಶಸ್ತಿ ಸ್ವೀಕರಿಸಿದ್ದಾರೆ. 'ವಾಥಿ' ಚಿತ್ರಕ್ಕಾಗಿ ಜಿವಿ ಪ್ರಕಾಶ್ ಕುಮಾರ್ ಅತ್ತುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ.

ಗಾಂಧಿ ತಾತ ಚೆಟ್ಟು ಚಿತ್ರದ ನಟನೆಗಾಗಿ ಸುಕೃತಿ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ತೆಲುಗಿನ 'ಬಳಗಂ' ಚಿತ್ರದ 'ಊರು ಪಲ್ಲೆಟೂರು' ಹಾಡಿಗೆ ಅತ್ಯುತ್ತಮ ಸಾಹಿತ್ಯ ರಾಷ್ಟ್ರಪ್ರಶಸ್ತಿಗೆ ಕಾಸರ್ಲಾ ಶ್ಯಾಮ್ ಭಾಜನರಾಗಿದ್ದಾರೆ. ವಿಜಯ ರಾಘವನ್(ಪೂಕಾಲಂ) ಹಾಗೂ ಎಂ. ಎಸ್ ಭಾಸ್ಕರ್(ಪಾರ್ಕಿಂಗ್) ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ.

'ಜವಾನ್' ಚಿತ್ರದ ನಟನೆಗಾಗಿ ಶಾರುಖ್ ಖಾನ್ ಹಾಗೂ '12th ಫೇಲ್' ಚಿತ್ರಕ್ಕಾಗಿ ವಿಕ್ರಾಂತ್ ಮೆಸ್ಸಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. 'Mrs. ಚಟರ್ಜಿ vs ನಾರ್ವೆ' ಚಿತ್ರದ ನಟನೆಗಾಗಿ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇನ್ನುಳಿದ ವಿಜೇತರ ಪಟ್ಟಿ ಮುಂದೆ ಇದೆ ಓದಿ.

* ಅತ್ಯುತ್ತಮ ಪೋಷಕ ನಟಿ - ಊರ್ವಶಿ ('ಉಲ್ಲೋಳುಕ್ಕು')
* ಜಾನಕಿ ಬೋಡಿವಾಲ(ವಶ್)

* ಅತ್ಯುತ್ತಮ ಸಿನಿಮಾ - 12th ಫೇಲ್(ಹಿಂದಿ)

* ಅತ್ಯುತ್ತಮ ನಿರ್ದೇಶನ - ಸುದಿಪೋ ಸೇನ್(ದಿ ಕೇರಳ ಸ್ಟೋರಿ)

* ಅತ್ಯುತ್ತಮ ಗುಜರಾತಿ ಚಿತ್ರ: ವಾಶ್

* ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್

* ಅಸ್ಸಾಮೀಸ್‌ನಲ್ಲಿ ಅತ್ಯುತ್ತಮ ಚಿತ್ರ: ರಂಗತಪು 1982

* ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

* ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ)

* ಅತ್ಯುತ್ತಮ ಚಿತ್ರಕಥೆ: ಬೇಬಿ (ತೆಲುಗು), ಪಾರ್ಕಿಂಗ್ (ತಮಿಳು)

* ಅತ್ಯುತ್ತಮ ಛಾಯಾಗ್ರಹಣ: ದಿ ಕೇರಳ ಸ್ಟೋರಿ (ಹಿಂದಿ)

* ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ

* ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ

* ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ

ನಾನ್ ಫೀಚರ್ ಫಿಲ್ಮ್

* ಅತ್ಯುತ್ತಮ ಸ್ಕ್ರಿಪ್ಟ್ - Sunflowers Were the First Ones to Know(ಕನ್ನಡ)

* ಅತ್ಯುತ್ತಮ ಸಿನಿಮಾ- ಫ್ಲೋರಿಂಗ್ ಮ್ಯಾನ್

More from Filmibeat

English summary
70th National Film Awards 2025: Complete List Of Winners
Read more about: award bollywood national award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X