ಚಾರ್ಲಿ 777ಗೆ 1 ವರ್ಷ; ಚಿತ್ರದ ಬಜೆಟ್, ಮಾಡಿದ ಕಲೆಕ್ಷನ್ ಎಷ್ಟು?

ಜೂನ್ 10, 2022ರಂದು ಕನ್ನಡ ಚಿತ್ರರಂಗದಿಂದ ಭಾರತ ಸಿನಿಮಾ ಪ್ರೇಕ್ಷಕರು ಅನೇಕ ವರ್ಷಗಳ ಕಾಲ ಪ್ರೀತಿಸುವ ಹಾಗೂ ಸ್ಮರಿಸುವಂತಹ ಚಿತ್ರವೊಂದು ಬಿಡುಗಡೆಯಾಗಿತ್ತು. ಹೌದು, ಕಳೆದ ವರ್ಷ ಈ ದಿನ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ಸಿನಿ ರಸಿಕರ ಫೇವರಿಟ್ 777 ಚಾರ್ಲಿ ಚಿತ್ರ ತೆರೆಗೆ ಬಂದಿತ್ತು.

ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿ ಹಾಗೂ ತಂಗಿಯನ್ನು ಕಳೆದುಕೊಂಡು ಭಾವನೆಗಳ ಹಾಗೂ ಸಂಬಂಧಗಳ ಅನುಭವವೇ ತಿಳಿಯದೇ ಬೆಳೆದಿದ್ದ ಅನಾಥ ಧರ್ಮನನ್ನು ಕಟುಕನ ಕೈನಿಂದ ತಪ್ಪಿಸಿಕೊಂಡು ಬಂದಿದ್ದ ನಾಯಿಯೊಂದು ಆತ ತನ್ನ ಕಷ್ಟದ ಸಂದರ್ಭದಲ್ಲಿ ಮಾಡುವ ಸಹಾಯಕ್ಕೆ ಮನಸೋತು ಆತನ ಜತೆಯೇ ಇರಲು ಶುರು ಮಾಡುತ್ತದೆ.

777 Charlie celebrating 1st year anniversary; Movies budget and collection

ಮೊದಲಿಗೆ ಆ ನಾಯಿಯನ್ನು ದೂರ ಮಾಡಲು ಮುಂದಾದ ಧರ್ಮ ಬಳಿಕ ಅದೇ ನಾಯಿಗೆ ಚಾರ್ಲಿ ಎಂಬ ಹೆಸರಿಟ್ಟು ತನ್ನ ಕುಟುಂಬ ಸದಸ್ಯರ ಹಾಗೆ ನೋಡಿಕೊಳ್ಳುತ್ತಾನೆ, ಕೊನೆಯಲ್ಲಿ ಅದರ ಕಷ್ಟದ ದಿನಗಳಲ್ಲಿ ಅದರ ಜತೆ ಕಾಲ ಕಳೆದು ಪ್ರೀತಿಯ ವಿದಾಯ ಹೇಳ್ತಾನೆ. ಹೀಗೆ ಅನಾಥ ಧರ್ಮನ ಬಾಳಿನಲ್ಲಿ ಸಂತಸ ಮೂಡಿಸಿ ಹೊರಟ ಚಾರ್ಲಿಯ ಕಥೆಗೆ ಭಾರತ ಸಿನಿ ರಸಿಕರು ಮನಸೋತಿದ್ದರು.

ಇಂತಹ ಚಿತ್ರ ಇಂದು ತನ್ನ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಚಿತ್ರದ ನಿರ್ದೇಶಕ ಕಿರಣ್ ರಾಜ್ ಹಾಗೂ ನಟ ರಕ್ಷಿತ್ ಶೆಟ್ಟಿ ವಾರ್ಷಿಕೋತ್ಸವದ ಪೋಸ್ಟ್ ಹಂಚಿಕೊಂಡಿದ್ದಾರೆ. ನಿರ್ದೇಶಕ ಕಿರಣ್ ರಾಜ್ 'ಚಾರ್ಲಿಯನ್ನು ಅಪ್ಪಿ ಒಪ್ಪಿಕೊಂಡ ದಿನ. ಧನ್ಯವಾದಗಳು' ಎಂದು ಬರೆದುಕೊಂಡು ಚಾರ್ಲಿ ಹಾಗೂ ಧರ್ಮನ ಆನಿಮೇಟೆಡ್ ಫೋಟೊ ಹಂಚಿಕೊಂಡಿದ್ದಾರೆ.

ಈ ಆನಿಮೇಟೆಡ್ ಫೋಟೊದಲ್ಲಿ ಧರ್ಮ 'ಜನರು ನಿನ್ನ ಬಗ್ಗೆ ಇನ್ನೂ ಮಾತನಾಡುತ್ತಿದ್ದಾರೆ ಚಾರ್ಲಿ' ಎಂದು ಹೇಳುತ್ತಿದ್ದು, ಇದಕ್ಕೆ ಚಾರ್ಲಿಯ ಆತ್ಮ 'ನನಗೂ ಗೊತ್ತಿದೆ' ಎಂದು ಉತ್ತರಿಸಿದೆ. ಈ ಸುಂದರ ಫೋಟೊಗೆ ನೆಟ್ಟಿಗರು ಮನ ಸೋತಿದ್ದು, ವಾರ್ಷಿಕೋತ್ಸವದಂದು ಚಾರ್ಲಿಯನ್ನು ನೆನಪಿಸಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ 'ನಮ್ಮ ಚಿತ್ರ #777Charlie ಬಿಡುಗಡೆಯಾಗಿ ಇಂದಿಗೆ 1 ವರ್ಷ! ಚಿತ್ರಕ್ಕೆ ನೀವೆಲ್ಲರೂ ನೀಡಿರುವ ಬೆಂಬಲಕ್ಕೆ, ನೀಡುತ್ತಿರುವ ಪ್ರೀತಿಗೆ ನಾವು ಸದಾ ಕೃತಜ್ಞರು' ಎಂದು ವಾರ್ಷಿಕೋತ್ಸವದ ವಿಶೇಷ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ.

ಚಾರ್ಲಿ ಚಿತ್ರ 20 ಕೋಟಿ ಬಜೆಟ್‌ನಲ್ಲಿ ತಯಾರಾಗಿ 105 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು.

More from Filmibeat

English summary
777 Charlie celebrating 1st year anniversary; Movie's budget and collection. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X