ರಕ್ಷಿತ್ ಶೆಟ್ಟಿ '777 ಚಾರ್ಲಿ' 100 ಕೋಟಿ ಗಳಿಕೆಸೋದು ಯಾವಾಗ: 15 ದಿನದ ಕಲೆಕ್ಷನ್ ಎಷ್ಟು?

ನಟ ರಕ್ಷಿತ್ ಅಭಿನಯದ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದೆ. ಜೂನ್ 10ರಂದು ತೆರೆಕಂಡ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಂದಗತಿಯಲ್ಲಿ ಸಾಗುತ್ತಿತ್ತು. '777 ಚಾರ್ಲಿ' ಅಬ್ಬರದ ಕಮರ್ಷಿಯಲ್ ಸಿನಿಮಾ ಅಲ್ಲ. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಭಾವನೆಗಳ ಮೂಲಕ ಹಿಡಿದಿಡುತ್ತದೆ.

ರಿಲೀಸ್‌ ಬಳಿಕ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿವೆ. ಇನ್ನು ರಿಲೀಸ್‌ಗೂ ಮುನ್ನ '777 ಚಾರ್ಲಿ' ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ವಿಭಿನ್ನವಾಗಿ ಗಮನ ಸೆಳೆದಿದೆ '777 ಚಾರ್ಲಿ', ಮಂದಗತಿಯಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿದೆ.

ಮೊದಲ ದಿನವೇ ಬಿಗ್ ಓಪನಿಂಗ್ ಪಡೆದ ಚಾರ್ಲಿ ಬಾಕ್ಸಾಫೀಸ್ ಬೇಟೆ ಮುಂದುವರೆದಿದೆ. '777 ಚಾರ್ಲಿ' ಕಲೆಕ್ಷನ್‌ನಲ್ಲಿ ವಾರಾಂತ್ಯದಲ್ಲಿ ಏರಿಕೆ ಕಾಣುತ್ತದೆ. ಕಲೆಕ್ಷನ್ ಮೊತ್ತವನ್ನು ಹೆಚ್ಚು ಮಾಡುತ್ತಿದೆ. ಇನ್ನು 15 ದಿನಕ್ಕೆ ಈ ಸಿನಿಮಾ ಗಳಿಸಿದ್ದೆಷ್ಟು ಎನ್ನುವುದನ್ನು ಮುಂದೆ ಓದಿ...

100 ಕೋಟಿ ಮಾಡುತ್ತಾ ಚಾರ್ಲಿ!

100 ಕೋಟಿ ಮಾಡುತ್ತಾ ಚಾರ್ಲಿ!

ಕನ್ನಡ ಸಿನಿಮಾಗಳು ಈಗ 100 ಕೋಟಿ ಗಳಿಕೆಯನ್ನು ಬಾಕ್ಸಾಫೀಸ್‌ನಲ್ಲಿ ಗಳಿಸುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ಬಂದರೆ 100 ಕೋಟಿಯನ್ನು ಸುಲಭವಾಗಿ ಗಳಿಸಬಹುದು. ರಕ್ಷಿತ್ ಶೆಟ್ಟಿ ಸಿನಿಮಾ 777 ಚಾರ್ಲಿ ಕೂಡ ಈಗ ನೂರು ಕೋಟಿ ಗಳಿಕೆಯತ್ತ ದಾಪುಗಾಲಿಟ್ಟಿದೆ. ಮಂದಗತಿಯಲ್ಲಿ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿರುವ ಚಾರ್ಲಿ ಇನ್ನೂ 2 ವಾರಗಳ ಚಿತ್ರಮಂದಿರದಲ್ಲಿ ಇದ್ದರೆ 100 ಕೋಟಿಯನ್ನು ಬಾಕ್ಸಾಫಿಸ್‌ನಲ್ಲೆ ಗಳಿಸ ಬಹುದು.

15 ದಿನಕ್ಕೆ ಚಾರ್ಲಿ 79 ಕೋಟಿ!

15 ದಿನಕ್ಕೆ ಚಾರ್ಲಿ 79 ಕೋಟಿ!

ಸದ್ಯ 777 ಚಾರ್ಲಿಯ 15 ದಿನದ ಗಳಿಕೆಯ ಲೆಕ್ಕಾಚಾರ ಹೊರ ಬಂದಿದೆ. ವರದಿಯ ಪ್ರಚಾರ ಚಾರ್ಲಿ ಹದಿನೈದು ದಿನದಲ್ಲಿ 79.4 ಕೋಟಿ ಗಳಿಸಿದೆ ಎನ್ನಲಾಗಿದೆ. ಅಂದರೆ ಬಹುತೇಕ 80 ಕೋಟಿ ಗಳಿಸಿದ ಹಾಗೆಯೇ ಲೆಕ್ಕ. 15 ದಿನದಲ್ಲಿ 80 ಕೋಟಿ ರೂ. ಗಳಿಸುವ ಚಾರ್ಲಿಗೆ ಇನ್ನು 2 ವಾರಗಳ ಅವಕಾಶ ಸಿಕ್ಕರೆ ನೂರು ಕೋಟಿ ಮಾಡಿ ದಾಖಲೆ ಬರೆಯುತ್ತದೆ ಎನ್ನುವುದರಲ್ಲಿ ಅನುಮಾನೇ ಇಲ್ಲ.

ಭಾರತದಲ್ಲಿ ಚಾರ್ಲಿ ಗಳಿಸಿದ್ದು ಎಷ್ಟು!

ಭಾರತದಲ್ಲಿ ಚಾರ್ಲಿ ಗಳಿಸಿದ್ದು ಎಷ್ಟು!

ವಿಶ್ವದಾದ್ಯಂತ ಚಾರ್ಲಿ 79.4 ಕೋಟಿ ರೂ ಕಲೆ ಹಾಕಿದೆ. ಇನ್ನು ಭಾರತದಲ್ಲಿ ಗಳಿಸಿದ್ದು ಎಷ್ಟು ಎನ್ನುವ ಲೆಕ್ಕಾ ನೋಡಿದೆ, ಭಾರತದಲ್ಲಿ 777 ಚಾರ್ಲಿ ಗಳಿಕೆ 65.2 ಕೋಟಿ ರೂ. ಆಗಿದೆ ಎಂದು ಅಂದಾಜಿಲಾಗಿದೆ. ಕರ್ನಾಟಕದಲ್ಲಿ ಉತ್ತಮ ಗಳಿಕೆ ಕಂಡಿರುವ ಚಾರ್ಲಿ ಬೇರೆ ಭಾಷೆಗಳಲ್ಲಿ ಅಷ್ಟಕಷ್ಟೆ ಎನ್ನುವಂತಿದೆ. ಹಿಂದಿಯಲ್ಲಿ 5 ಕೋಟಿ ರೂ. ಮತ್ತು ಮಲಯಾಳಂನಲ್ಲಿ 2.15 ಕೋಟಿ ರೂ. ಮಾತ್ರ ಗಳಿಸಿದೆ.

777 ಚಾರ್ಲಿ ಮುಂದಿನ ಹೆಜ್ಜೆ!

777 ಚಾರ್ಲಿ ಮುಂದಿನ ಹೆಜ್ಜೆ!

777 ಚಾರ್ಲಿ ನಟ ರಕ್ಷಿತ್ ಶೆಟ್ಟಿ ಸಿನಿಮಾ ಜರ್ನಿಯಲ್ಲಿ ಉತ್ತಮ ಬ್ಯುಸಿನೆಸ್ ಆದ ಸಿನಿಮಾ. ಹೆಚ್ಚು ಖರ್ಚು ಮಾಡಿ, ಮಾಡಿದ್ದ ಅವನೇ ಶ್ರೀಮನ್ ನಾರಾಯಣ ಸಿನಿಮಾ ಕೂಡ ಅಷ್ಟೇನು ಉತ್ತಮ ಗಳಿಕೆ ಕಾಣಲಿಲ್ಲ. ಆದರೆ ಚಾರ್ಲಿ ಉತ್ತಮ ಗಳೆಕೆಯಂತೂ ಕಂಡಿದೆ. ಇನ್ನು ಕೆಲವು ದಿನ ಚಿತ್ರಮಂದಿರದಲ್ಲಿ ಚಾರ್ಲಿ ಇದ್ದರೆ, 100 ಕೋಟಿ ಗಡಿ ಮುಟ್ಟಬಹುದು.

More from Filmibeat

English summary
777 Charlie Day 15 Box Office Collection World Wide Report, know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X