ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಕಥೆಯೇನು? 7 ದಿನ ಗಳಿಸಿದ್ದೆಷ್ಟು?
ನಟ ರಕ್ಷಿತ್ ಅಭಿನಯದ '777 ಚಾರ್ಲಿ' ವಿಭಿನ್ನ ಕಥಾ ಹಂದರದೊಂದಿಗೆ ಬಂದ ಸಿನಿಮಾ. ದೇಶಾದ್ಯಂತ ರಿಲೀಸ್ ಅಗಿ ಉತ್ತಮ ಗಳಿಕೆ ಕಾಣುತ್ತಿದೆ. ಸದ್ಯ '777 ಚಾರ್ಲಿ' 50 ಕೋಟಿ ರೂ. ಗಳಿಕೆಯತ್ತ ದಾಪುಗಾಲಿಡುತ್ತಿದೆ. ಸಿನಿಮಾ 50 ಕೋಟಿ ರೂ. ಗಳಿಸಿದರೂ ಅದು ದಾಖಲೆಯೇ ಸರಿ.
ನಿಧಾನವಾಗಿ '777 ಚಾರ್ಲಿ'ಗಳಿಕೆ ಪಿಕಪ್ ಆಗುತ್ತಿದೆ. ಚಾರ್ಲಿ ಸಿನಿಮಾವನ್ನು ಎಲ್ಲಾ ವರ್ಗದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಬಂದ ಜನ ಚಾರ್ಲಿ ಬಗ್ಗೆ ಉತ್ತಮ ಪ್ರಶಂಸೆ ಕೊಟ್ಟಿದ್ದಾರೆ. ಅಲ್ಲೇ ಸಿನಿಮಾ ಅರ್ಥ ಗೆದ್ದು ಬಿಟ್ಟಿದೆ. ಇನ್ನೇನಿದ್ದರೂ ಗಳಿಕೆ ಲೆಕ್ಕಾಚಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಚಾರ್ಲಿ ಸಿನಿಮಾ ಕಂಟೆಂಟ್ ಮೂಲಕವೇ ಸದ್ದು ಮಾಡುತ್ತಿದೆ. ಚಿತ್ರಕ್ಕೆ ಹಲವು ಬಾಲಿವುಡ್ ತಾರೆಯರು ಕೂಡ ಮನ ಸೋತಿದ್ದಾರೆ. ಆದರೆ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಚಾರ್ಲಿ ಜಾದು ಮಾಡಲು ಇನ್ನೂ ಸಾಧ್ಯವಾಗಿಲ್ಲ.

'777 ಚಾರ್ಲಿ' ಬಾಕ್ಸಾಫೀಸ್ ಬೇಟೆ!
'777 ಚಾರ್ಲಿ' ಸಿನಿಮಾ ದೊಡ್ಡ ಮಟ್ಟದ ಓಪನಿಂಗ್ ಪಡೆದು ಮೊದಲು ಮೂರು ದಿನ ಉತ್ತಮ ಗಳಿಕೆಯನ್ನು ಕಾಯ್ದುಕೊಂಡಿದೆ. ಆದರೆ ಮೊದಲ ವಾರಾಂತ್ಯ ಬಳಿಕ ಕೊಂಡ ಇಳಿಕೆ ಕಂಡಿದ್ದು, ಸಿನಿಮಾದ ಒಟ್ಟಾರೆ ಗಳಿಕೆಯ ಮೇಲೆ ಪರಿಣಾಮ ಬೀರಿದೆ. ದಿನಕ್ಕೆ 3, 4 ಕೋಟಿ ರೂ ಗಳಿಕೆಯಲ್ಲೇ ಚಾರ್ಲಿ ಸೀಮಿತವಾಗಿದೆ. ಈ ಸಿನಿಮಾ ರಿಲೀಸ್ ಆಗಿ 7 ದಿನ ಆಯ್ತು. 7 ದಿನದ ಬಾಕ್ಸಾಫೀಸ್ ಲೆಕ್ಕಾಚಾರವೂ ಹೊರ ಬಿದ್ದಿದೆ.

7 ದಿನಕ್ಕೆ 38 ಕೋಟಿ ರೂ. ಮುಟ್ಟಿದ ಚಾರ್ಲಿ!
'777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗಿನಲ್ಲೂ ಸಿನಿಮಾ ತೆರೆಕಂಡಿದೆ. ಇನ್ನೂ ಈ ಎಲ್ಲಾ ಭಾಷೆಗಳ ಪ್ಯಾನ್ ಇಂಡಿಯ ಕಲೆಕ್ಷನ್ ಇನ್ನೂ 50 ಕೋಟಿ ರೂ ಮುಟ್ಟಿಲ್ಲ. ಸದ್ಯ ಲೆಕ್ಕಾಚಾರದ ಪ್ರಕಾರ ಚಾರ್ಲಿ 7 ದಿನದ ಒಟ್ಟಾರೆ ಗಳಿಕೆ 38.65 ಕೋಟಿ ರೂ. ಎನ್ನಲಾಗಿದೆ. ಇನ್ನು ಏಳನೇ ದಿನ ಚಾರ್ಲಿ ಗಳಿಸಿದ್ದು 3 ಕೋಟಿ ರೂ. ಮಾತ್ರ ಎನ್ನಲಾಗಿದೆ.

ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಚಾರ್ಲಿ!
'ಕೆಜಿಎಫ್ 2' ಸಿನಿಮಾ 1200 ಕೋಟಿ ರೂ.ಗೂ ಅಧಿಕ ಮೊತ್ತ ಕಲೆ ಹಾಕಿ ಅಚ್ಚರಿಗೆ ಕಾರಣ ಆಗಿತ್ತು. ಇದರಲ್ಲಿ ಬಾಲಿವುಡ್ ಬಾಕ್ಸಾಫೀಸ್ ಪಾಲು ಹೆಚ್ಚಿದೆ. ಉತ್ತರ ಭಾರತದಲ್ಲಿ 'ಕೆಜಿಎಫ್ 2' ಸಿನಿಮಾ ಅಬ್ಬರಿಸಿದೆ. ಹಾಗಾಗಿ ಚಾರ್ಲಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಚಾರ್ಲಿ ಸಿನಿಮಾ ಉತ್ತರದ ಪ್ರೇಕ್ಷಕರಿಗೆ ರುಚಿಸಿಲ್ಲ ಎನಿಸುತ್ತೆ. ಹಾಗಾಗಿ ನಾರ್ತ್‌ನಲ್ಲಿ ಕಲೆಕ್ಷನ್ ಎಷ್ಟು ಎನ್ನುವ ಸ್ಪಷ್ಟ ಚಿತ್ರಣವೂ ಬಂದಿಲ್ಲ. ಅಲ್ಲಿನ ಸಿನಿಮಾ ಮಂದಿ ಚಾರ್ಲಿನ್ನು ಮೆಚ್ಚಿದರೂ ಕೂಡ ಬಾಕ್ಸಾಫೀಸ್‌ನಲ್ಲಿ ಚಾರ್ಲಿ ಮಂಕಾಗಿದೆ. ಇನ್ನು ಈ ಎರಡನೇ ವಾರಾಂತ್ಯದಲ್ಲಿ ಏನಾದರೂ ಜಾದು ಆಗಬೇಕಷ್ಟೆ.

'777 ಚಾರ್ಲಿ' ಒಟ್ಟಾರೆ ಗಳಿಕೆ ಎಷ್ಟು?
ಕಳೆದ 7 ದಿನಗಳಲ್ಲಿ '777 ಚಾರ್ಲಿ' ಗಳಿಕೆ ಹೇಗಿದೆ ಎನ್ನುವುದರ ಅಂದಾಜಿನ ಲೆಕ್ಕಾಚಾರ ಇಲ್ಲಿದೆ.
ದಿನ 1: ₹ 6.27 ಕೋಟಿ
ದಿನ 2: ₹ 7.87 ಕೋಟಿ
ದಿನ 3 :₹ 10.01 ಕೋಟಿ
ದಿನ 4 :₹ 4.55 ಕೋಟಿ
ದಿನ 5 :₹ 4.00 ಕೋಟಿ
ದಿನ 6 :₹ 3.50 ಕೋಟಿ
ದಿನ 7 :₹ 3.10 ಕೋಟಿ
ಒಟ್ಟಾರೆ: ₹ 38.75 ಕೋಟಿ


Click it and Unblock the Notifications











