twitter
    For Quick Alerts
    ALLOW NOTIFICATIONS  
    For Daily Alerts

    '777 ಚಾರ್ಲಿ' 8ನೇ ದಿನಕ್ಕೆ 50 ಕೋಟಿ: ಭಾರತದ ಗಳಿಕೆ ಎಷ್ಟು?

    |

    ನಟ ರಕ್ಷಿತ್ ಅಭಿನಯದ '777 ಚಾರ್ಲಿ' ವಿಭಿನ್ನ ಕಥಾ ಹಂದರದೊಂದಿಗೆ ಬಂದ ಸಿನಿಮಾ. ವಿಶ್ವದಾದ್ಯಂತ ರಿಲೀಸ್ ಆಗಿ ಉತ್ತಮ ಗಳಿಕೆ ಕಾಣುತ್ತಿದೆ. ಸದ್ಯ '777 ಚಾರ್ಲಿ' 50 ಕೋಟಿಯ ಗಡಿ ಮುಟ್ಟಿದೆ. ವಿಶ್ವದಾದ್ಯಂತ ಒಟ್ಟರೆ ಗಳಿಕೆ ತೆಗೆದು ಕೊಂಡರೆ ಸಿನಿಮಾ 50 ಕೋಟಿ ಗಳಿಸಿದೆ.

    ನಿಧಾನವಾಗಿ '777 ಚಾರ್ಲಿ' ಗಳಿಕೆ ಪಿಕಪ್ ಆಗುತ್ತಿದೆ. ಚಾರ್ಲಿ ಸಿನಿಮಾವನ್ನು ಎಲ್ಲಾ ವರ್ಗದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಬಂದ ಜನ ಚಾರ್ಲಿ ಬಗ್ಗೆ ಉತ್ತಮ ಪ್ರಶಂಸೆ ಕೊಟ್ಟಿದ್ದಾರೆ. ಅಲ್ಲೇ ಸಿನಿಮಾ ಅರ್ಧ ಗೆದ್ದು ಬಿಟ್ಟಿದೆ. ಇನ್ನೇನಿದ್ದರು ಗಳಿಕೆ ಲೆಕ್ಕಾಚಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಕಥೆಯೇನು? 7 ದಿನ ಗಳಿಸಿದ್ದೆಷ್ಟು?ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಕಥೆಯೇನು? 7 ದಿನ ಗಳಿಸಿದ್ದೆಷ್ಟು?

    ಚಾರ್ಲಿ ಸಿನಿಮಾ ಕಂಟೆಂಟ್ ಮೂಲಕವೇ ಸದ್ದು ಮಾಡುತ್ತಿದೆ. ಇನ್ನು ಎರಡನೆ ವೀಕೆಂಡ್‌ನಲ್ಲಿ ಚಿತ್ರ ಹೆಚ್ಚಿನ ಗಳಿಕೆ ಕಾಣುವ ಸಾಧ್ಯತೆ ಇದೆ. ಇನ್ನು 8ನೇ ದಿನಕ್ಕೆ ಚಿತ್ರ ವಿಶ್ವದಾದ್ಯಂತ ಗಳಿಸಿದ್ದು ಎಷ್ಟು ಎನ್ನುವ ಅಂದಾಜಿನ ಲೆಕ್ಕಾಚಾರ ಇಲ್ಲಿದೆ ಮುಂದೆ ಓದಿ.

    ಬಾಕ್ಸಾಫೀಸ್‌ನಲ್ಲಿ ಚಾರ್ಲಿ ಚಮತ್ಕಾರ!

    ಬಾಕ್ಸಾಫೀಸ್‌ನಲ್ಲಿ ಚಾರ್ಲಿ ಚಮತ್ಕಾರ!

    '777 ಚಾರ್ಲಿ' ಸಿನಿಮಾ ದೊಡ್ಡ ಮಟ್ಟದ ಓಪನಿಂಗ್ ಪಡೆದು ಮೊದಲು ಮೂರು ದಿನ ಉತ್ತಮ ಗಳಿಕೆಯನ್ನು ಕಾಯ್ದು ಕೊಂಡಿದೆ. ಆದರೆ ಮೊದಲ ವಾರಾಂತ್ಯ ಬಳಿಕ ಕೊಂಡ ಇಳಿಕೆ ಕಂಡಿದ್ದು, ಈ ಮತ್ತೆ ಎರಡನೇ ವೀಕೆಂಡ್‌ಗೆ ಗಳಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು 8ನೇ ದಿನಕ್ಕೆ ಚಾರ್ಲಿ ಭಾರತದಾದ್ಯಂತ 3.38 ಕೋಟಿ ಕಲೆ ಹಾಕಿದೆ. ಆದರೆ ವಿಶ್ವದಾದ್ಯಂತ ಗಳಿಕೆಯ ಮೂಲಕ ಚಾರ್ಲಿ ದಾಖಲೆ ಮಾಡಿದೆ.

    '777 ಚಾರ್ಲಿ' ನೋಡಿ ಕಣ್ಣೀರಿಟ್ಟ ಬಾಲಕಿ: ಸಮಾಧಾನ ಮಾಡಲು ನಿರ್ದೇಶಕ ವಿಡಿಯೋ ಕಾಲ್ ಮಾಡಿದ್ಯಾರಿಗೆ?'777 ಚಾರ್ಲಿ' ನೋಡಿ ಕಣ್ಣೀರಿಟ್ಟ ಬಾಲಕಿ: ಸಮಾಧಾನ ಮಾಡಲು ನಿರ್ದೇಶಕ ವಿಡಿಯೋ ಕಾಲ್ ಮಾಡಿದ್ಯಾರಿಗೆ?

    8 ದಿನಕ್ಕೆ ಚಾರ್ಲಿ ಭಾರತದ ಗಳಿಕೆ!

    8 ದಿನಕ್ಕೆ ಚಾರ್ಲಿ ಭಾರತದ ಗಳಿಕೆ!

    '777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗಿನಲ್ಲೂ ಸಿನಿಮಾ ತೆರೆಕಂಡಿದೆ. ಇನ್ನೂ ಈ ಎಲ್ಲಾ ಭಾಷೆಗಳ ಪ್ಯಾನ್ ಇಂಡಿಯ ಕಲೆಕ್ಷನ್ ಇನ್ನೂ 50 ಕೋಟಿ ಮುಟ್ಟಿಲ್ಲ. ಭಾರತದಲ್ಲಿ ಚಾರ್ಲಿ ಗಳಿಕೆ 8ನೇ ದಿನ 3.25 ಕೋಟಿ ರೂ, ಗಳಿಕೆ ಕಂಡಿದ್ದು ಒಟ್ಟಾರೆ ಭಾರತದಲ್ಲಿ 42 ಕೋಟಿ ರೂ ಆಗಿದೆ. ಆದರೆ ವಿಶ್ವದಾದ್ಯಂತ ಚಾರ್ಲಿ ಹೊಸ ದಾಖಲೆ ಬರೆದಿದೆ.

    50 ಕೋಟಿ ಮುಟ್ಟಿದ ಚಾರ್ಲಿ!

    50 ಕೋಟಿ ಮುಟ್ಟಿದ ಚಾರ್ಲಿ!

    '777 ಚಾರ್ಲಿ' ಸಿನಿಮಾ ದಿನ ಕಳೆದಂತೆ ಗಳಿಕೆಯನ್ನು ಸ್ಥಿರವಾಗಿ ಇಟ್ಟು ಕೊಂಡಿದೆ. ಇನ್ನು ಭಾರತಾದ್ಯಂತ 50 ಕೋಟಿ ರೂ ಗಳಿಕೆ ಆಗಿಲ್ಲ. ಆದರೆ ವಿಶ್ವದ ಲೆಕ್ಕ ತೆಗೆದುಕೊಂಡರೆ '777 ಚಾರ್ಲಿ'ಯ ಒಟ್ಟಾರೆ ವಿಶ್ವದ ಬಾಕ್ಸಾಫೀಸ್ ಗಳಿಕೆ 50.1 ಕೋಟಿ ಆಗಿದೆ. ಅದರಲ್ಲೂ ಕರ್ನಾಟಕದ ಪಾಲು ಹೆಚ್ಚಿದ್ದು, 8 ದಿನಕ್ಕೆ ಕರ್ನಾಟಕದಲ್ಲಿ ಚಾರ್ಲಿ 36 ಕೋಟಿ ರೂ ಗಳಿಕೆ ಎನ್ನುವ ಲೆಕ್ಕಾಚಾರ ಹೊರ ಬಿಟ್ಟಿದೆ.

    6ನೇ ದಿನದ '777 ಚಾರ್ಲಿ' ಗಳಿಕೆ ಎಷ್ಟು?: 50 ಕೋಟಿ ದಾಟೋದ್ಯಾವಾಗ?6ನೇ ದಿನದ '777 ಚಾರ್ಲಿ' ಗಳಿಕೆ ಎಷ್ಟು?: 50 ಕೋಟಿ ದಾಟೋದ್ಯಾವಾಗ?

    '777 ಚಾರ್ಲಿ' ವಿಶ್ವದಾದ್ಯಂತ ಗಳಿಕೆ ಲೆಕ್ಕಾಚಾರ!

    '777 ಚಾರ್ಲಿ' ವಿಶ್ವದಾದ್ಯಂತ ಗಳಿಕೆ ಲೆಕ್ಕಾಚಾರ!

    ಕಳೆದ 8 ದಿನಗಳಲ್ಲಿ '777 ಚಾರ್ಲಿ'ಯ ವಿಶ್ವದಾದ್ಯಂತ ಬಾಕ್ಸಾಫೀಸ್‌ಗಳಿಕೆ ಎಲ್ಲೆಲ್ಲಿ ಎಷ್ಟು ಎನ್ನುವ ಅಂದಾಜಿನ ಲೆಕ್ಕಾಚಾರ ಇಲ್ಲಿದೆ.


    ಕರ್ನಾಟಕ- 36 ಕೋಟಿ

    ಆಂಧ್ರಪ್ರದೇಶ/ತೆಲಂಗಾಣ- 2 ಕೋಟಿ

    ಕೇರಳ- 2.25 ಕೋಟಿ

    ತಮಿಳುನಾಡು- 1 ಕೋಟಿ

    ಹಿಂದಿ- 2 ಕೋಟಿ

    ಓವರ್ ಸೀಸ್- 6.85 ಕೋಟಿ


    ಒಟ್ಟಾರೆ- 50.1 ಕೋಟಿ

    English summary
    777 Charlie Day 8 Box Office Collection World Wide Report, Charlie Cross 50 Crore World Wide,
    Saturday, June 18, 2022, 10:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X