ನಾಯಿಗಳ ಹುಡುಕಾಟದಲ್ಲಿ ನಟ ರಕ್ಷಿತ್ ಶೆಟ್ಟಿ ಮತ್ತು ತಂಡ
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಅವರ ತಂಡ ನಾಯಿಯ ಹುಡುಕಾಟದಲ್ಲಿದ್ದಾರೆ. ಇದೇನಿದು ನಾಯಿ ಹುಡುಕಾಟ ಅಂತೀರಾ? ಅಚ್ಚರಿ ಎನಿಸಿದರು ನಿಜ. ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ '777 ಚಾರ್ಲಿ' ಸಿನಿಮಾಗೆ ತರಬೇತಿ ಪಡೆದ ನಾಯಿಗಳು ಬೇಕಾಗಿದೆಯಂತೆ.
Recommended Video
ಈ ಬಗ್ಗೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದೆ. 'ಯಾವುದೇ ಬ್ರೀಡ್ ನಾಯಿಗಳಾದರು ಸರಿ. ಆದರೆ ತರಬೇತಿ ಪಡೆದ ನಾಯಿಗಳು ಬೇಕು. '777 ಚಾರ್ಲಿ' ಸಿನಿಮಾಗೋಸ್ಕರ' ಎಂದು ಹೇಳಿದ್ದಾರೆ.
ಆಸಕ್ತಿ ಇರುವವರು ತಮ್ಮ ನಾಯಿಗಳ ವಿಡಿಯೋವನ್ನು ಮಾಡಿ ಇ-ಮೇಲ್ ಅಥವಾ ವಾಟ್ಸಪ್ ಮೂಲಕ ಕಳುಹಿಸಿ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 15ರ ಒಳಗೆ ಎಲ್ಲಾ ಮಾಹಿತಿಗಳನ್ನು ಕಳುಹಿಸಬೇಕಂತೆ. ಇನ್ನೂ ವಿಶೇಷ ಅಂದರೆ ಸ್ಪರ್ಧೆ ಮತ್ತು ಯಾವುದೇ ಶೋಗಳಲ್ಲಿ ಭಾಗವಹಿಸಿದ ನಾಯಿಗಳಿಗೆ ಮೊದಲ ಆದ್ಯತೆಯಂತೆ. ಇದೆಲ್ಲ ಗಮನದಲ್ಲಿಟ್ಟುಕೊಂಡು '777 ಚಾರ್ಲಿ' ಸಿನಿಮಾದ ನಾಯಿಗಳ ಆಡಿಷನ್ ನಲ್ಲಿ ಭಾಗಿಯಾಗಬೇಕಿದೆ.

'777 ಚಾರ್ಲಿ' ಸಿನಿಮಾ ಮನುಷ್ಯ ಮತ್ತು ಪ್ರಾಣಿ ಸಂಬಂಧದ ಬಗ್ಗೆ ಇರುವ ಚಿತ್ರ. ಇಲ್ಲಿ ನಾಯಿ ಕೂಡ ಪ್ರಮುಕ ಪಾತ್ರ ನಿರ್ವಹಿಸುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತವಾಗಿತ್ತು. ಆದರೀಗ ಮತ್ತೆ ಚಿತ್ರೀಕರಣ ಪ್ರಾರಂಭಿಸಲು ಸಿನಿಮಾತಂಡ ಸಿದ್ಧವಾಗಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ.


Click it and Unblock the Notifications











