For Quick Alerts
  ALLOW NOTIFICATIONS  
  For Daily Alerts

  ಈ ಬಾರಿ ದಸರಾದಲ್ಲಿ ‘777 ಚಾರ್ಲಿ’ ನಾಯಿ!

  By ಮೈಸೂರು ಪ್ರತಿನಿಧಿ
  |

  ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ದೊಡ್ಡ ಹಿಟ್ ಆದ ಬೆನ್ನಲ್ಲೆ ಸಿನಿಮಾದಲ್ಲಿ ನಟಿಸಿದ್ದ ನಾಯಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಹೊರ ರಾಜ್ಯಗಳಿಂದಲೂ ಆ ನಾಯಿಗೆ ಸಿನಿಮಾ ಆಫರ್‌ಗಳು ಬಂದಿವೆ. ಆ ನಾಯಿಗೆ ಸೆಲೆಬ್ರಿಟಿ ಸ್ಟೇಟಸ್ ಧಕ್ಕಿದೆ. ಇದೀಗ 777 ಚಾರ್ಲಿ ಸಿನಿಮಾದ ನಾಯಿ ದಸರಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿದೆ.

  'ಚಾರ್ಲಿ 777' ಚಿತ್ರದ ಮೂಲಕ ಬೆರಗು ಮೂಡಿಸಿದ್ದ ಶ್ವಾನ ಈ ಬಾರಿಯ ರೈತ ದಸರಾ ಅಂಗವಾಗಿ ನಡೆಯುವ ಮುದ್ದು ಪ್ರಾಣಿಗಳ ಪ್ರದರ್ಶನದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.

  'ಕೆಜಿಎಫ್' ಮಾತ್ರವಲ್ಲ ಚಾರ್ಲಿ ಸಹ ಒಳ್ಳೆ ಸಿನಿಮಾ: ಪ್ರಕಾಶ್ ರೈ'ಕೆಜಿಎಫ್' ಮಾತ್ರವಲ್ಲ ಚಾರ್ಲಿ ಸಹ ಒಳ್ಳೆ ಸಿನಿಮಾ: ಪ್ರಕಾಶ್ ರೈ

  ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ ಸಿನಿಮಾ ಎಲ್ಲರ ಮನಸ್ಸನ್ನು ಗೆದ್ದಿತ್ತು. ಅದರಲ್ಲೂ ಮುದ್ದು ಶ್ವಾನದ ನಟನೆ ಎಲ್ಲರಲ್ಲೂ ಕಣ್ಣೀರು ಬರುವಂತೆ ಮಾಡಿತ್ತು. ನಂತರ ಚಾರ್ಲಿ ಶ್ವಾನಕ್ಕೆ ಹೊರರಾಜ್ಯದ ಚಿತ್ರರಂಗದ ಸಿನಿಮಾದಲ್ಲೂ ಅಭಿನಯಿಸಲು ಡಿಮ್ಯಾಂಡ್ ಬಂದಿತ್ತು. ಅಂತಹ ಚಾರ್ಲಿ ಶ್ವಾನವನ್ನು ಇದೀಗ ಮೈಸೂರು ದಸರಾದಲ್ಲೂ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಜೊತೆಗೆ ಅದರ ಇತರೆ ಪ್ರದರ್ಶನವನ್ನೂ ನೋಡಬಹುದು.

  ರೈತ ದಸರಾ ಉಪ ಸಮಿತಿ ಉಪ ವಿಶೇಷ ಅಧಿಕಾರಿ ಕೃಷ್ಣಂರಾಜು ಮಾತನಾಡಿ, ಈ ಬಾರಿಯ ಪ್ರಾಣಿಗಳ ಪ್ರದರ್ಶನದಲ್ಲಿ ಚಾರ್ಲಿ ಸಿನಿಮಾದ ಶ್ವಾನವನ್ನು ಕರೆತರಲಾಗುತ್ತಿದೆ. ಇದರಿಂದ ಚಿಣ್ಣರಿಗೆ ತುಂಬಾ ಖುಷಿ ಆಗುತ್ತದೆ. ''ಇದೇ ಮೊದಲ ಬಾರಿ ರೈತ ದಸರಾದಲ್ಲಿ ಸಾಕುಪ್ರಾಣಿ ಪ್ರದರ್ಶನ ಆಯೋಜಿಸಲಾಗುತ್ತಿದ್ದು, ಸೆ.30 ರಂದು ಆರಂಭವಾಗುವ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಲು ಚಲನಚಿತ್ರ ನಟ ದರ್ಶನ್ ಅವರನ್ನು ಆಹ್ವಾನಿಸಲಾಗುತ್ತಿದೆ,'' ಎಂದರು.

  ''ಮೈಸೂರು ವಿಶ್ವವಿದ್ಯಾಲಯದ ಸ್ಪೋರ್ಟ್ಸ್ ಪೆವಿಲಿಯನ್ ಹಾಕಿ ಮೈದಾನದಲ್ಲಿ ಅ.2ರಂದು ಬೆಳಗ್ಗೆ 10.30ಕ್ಕೆ ಸಾಕು ಪ್ರಾಣಿಗಳ ಪ್ರದರ್ಶನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಸಂಜೆ 5.30 ಕ್ಕೆ ಜೆ.ಕೆ. ಗ್ರೌಂಘಿಡ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಬಿ. ಚೌಹಾಣ್ ವಿಜೇತ ಪ್ರಾಣಿಗಳ ಮಾಲೀಕರಿಗೆ ಬಹುಮಾನ ವಿತರಿಸುವರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಚಾರ್ಲಿ ಜತೆ ತರಬೇತುದಾರ ಪ್ರಮೋದ್ ಭಾಗವಹಿಸಲಿದ್ದಾರೆ,''ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

  'ಜೆ.ಕೆ. ಮೈದಾನದಲ್ಲಿ ಅ.1ರಂದು ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ. ಸೆ.29ಕ್ಕೆ ಕೋಲಾರ, ಚಿಂತಾಮಣಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಗೋವಿನ ಪಾಲಕರು ಹಸುಗಳೊಂದಿಗೆ ಆಗಮಿಸಲಿದ್ದಾರೆ. ಸೆ.30 ರಂದು ಹಸುಗಳಿಗೆ ವಿಶ್ರಾಂತಿ ಇದ್ದು, ಅ.1ರಂದು ಸ್ಪರ್ಧೆ ನಡೆಯಲಿದೆ'' ಎಂದು ಉಪಸಮಿತಿಯ ಕಾರ್ಯದರ್ಶಿ ಷಡಕ್ಷರಿ ಮಾಹಿತಿ ನೀಡಿದರು. ''ಗೆದ್ದ ನಾಲ್ವರಿಗೆ ಕ್ರಮವಾಗಿ 50 ಸಾವಿರ, 40 ಸಾವಿರ, 30 ಸಾವಿರ ಹಾಗೂ 20 ಸಾವಿರ ನಗದು ಬಹುಮಾನ ನೀಡಲಾಗುವುದು,'' ಎಂದು ವಿವರಿಸಿದರು. ರೈತ ದಸರೆ ಉಪಸಮಿತಿ ಕಾರ್ಯಾಧ್ಯಕ್ಷ ಡಾ.ಬಿ.ಎಸ್.ಚಂದ್ರಶೇಖರ್ ಇದ್ದರು.

  English summary
  777 Charlie Kannada movie dog will attend Dasara animal exhibition. Dog's trainer Pramod also attending the program.
  Monday, September 19, 2022, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X