777 Charlie: ಪ್ರಪಂಚ ಪರ್ಯಟನೆಗೆ ಹೊರಟು ನಿಂತ ಚಾರ್ಲಿ ಹಾಗೂ ಧರ್ಮ

ಒಂದೂವರೆ ವರ್ಷದ ಹಿಂದೆ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆದ್ದಿತ್ತು. ಕಿರಣ್‌ ರಾಜ್ ನಿರ್ದೇಶನದ ಸಿನಿಮಾ ಅಬಾಲವೃದ್ಧರಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಿತ್ತು. 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಗಮನ ಸೆಳೆದಿತ್ತು.

ಅಡ್ವೆಂಚರಸ್ ಡ್ರಾಮಾ ಕಥೆಯಲ್ಲಿ ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕಥೆಯನ್ನು ಹೇಳಲಾಗಿತ್ತು. ತಮ್ಮದೇ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಿಸಿ ನಟಿಸಿದ್ದರು. ಸಂಗೀತಾ ಶೃಂಗೇರಿ, ರಾಜ್‌. ಬಿ ಶೆಟ್ಟಿ ಚಿತ್ರದಲ್ಲಿ ನಟಿಸಿದ್ದರು. ಎಲ್ಲಿರಿಗಿಂತ ಮುಖ್ಯವಾಗಿ ಲ್ಯಾಬ್ರಡರ್ ನಾಯಿಯೊಂದು '777 ಚಾರ್ಲಿ' ಚಿತ್ರದ ಕೇಂದ್ರ ಬಿಂದುವಾಗಿತ್ತು.

777 Charlie will be dubbed and released in Russia japan Taiwan and many more languages

ಕನ್ನಡ ಮಾತ್ರವಲ್ಲದೇ 5 ಭಾಷೆಗಳಲ್ಲಿ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಇತ್ತೀಚೆಗೆ ಚಿತ್ರದ ಹಿಂದಿ ವರ್ಷನ್ ಓಟಿಟಿಗೆ ಬಂದು ಸದ್ದು ಮಾಡುತ್ತಿದೆ. ಇದೆಲ್ಲದರ ನಡುವೆ ಇದೀಗ '777 ಚಾರ್ಲಿ' ಸಿನಿಮಾ ವಿದೇಶದ ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಲು ಸಜ್ಜಾಗಿದೆ. ಅದರ ಮೊದಲ ಭಾಗವಾಗಿ ಜಪನೀಸ್ ಭಾಷೆಯಲ್ಲಿ ಸಿನಿಮಾ ಈ ವಾರವೇ ತೆರೆಗೆ ಬರಲಿದೆ.

ಕಳೆದ ವರ್ಷ ಥೈಲ್ಯಾಂಡ್‌ ಭಾಷೆಗೆ ಸಿನಿಮಾ ಆಗಿ ಬಿಡುಗಡೆಯಾಗಿತ್ತು. ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ತೈವಾನ್, ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ಆಯಾ ಭಾಷೆಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳು ಬೇರೆ ದೇಶದ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುವುದು ಹೆಚ್ಚಾಗಿದೆ. 'KGF' ಹಾಗೂ 'ಕಾಂತಾರ' ಚಿತ್ರಗಳು ಇದೇ ರೀತಿ ಸದ್ದು ಮಾಡಿತ್ತು.

ಜೂನ್ 10, 2೦22ರಂದು '777 ಚಾರ್ಲಿ' ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆದಿತ್ತು. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ ಕೂಡ ಲಭಿಸಿತ್ತು. ಒಂದು ಸಿಂಪಲ್ ಕಥೆಯನ್ನು ಸೊಗಸಾಗಿ ತೆರೆಗೆ ತಂದು ಚಿತ್ರತಂಡ ಗೆದ್ದಿತ್ತು. ಮುಖ್ಯವಾಗಿ ಪ್ರಾಣಿ ಪ್ರಿಯರಿಗೆ ಸಿನಿಮಾ ಬಹಳ ಇಷ್ಟವಾಗಿತ್ತು.

ಪೋಷಕರನ್ನು ಕಳೆದುಕೊಂಡು ಗೊತ್ತು ಗುರಿಯಿಲ್ಲದೇ ತನ್ನದೇ ಪ್ರಪಂಚದಲ್ಲಿ ಯಾಂತ್ರಿಕ ಬದುಕು ನಡೆಸುತ್ತಿರುವ ಧರ್ಮ. ಅಚಾನಕ್ ಆಗಿ ಆತನ ಬದುಕಿಗೆ ನಾಯಿಯೊಂದು ಎಂಟ್ರಿ ಕೊಡುತ್ತದೆ. ಕಳೆಗುಂದಿದ ಆತನ ಬದುಕಿಗೆ ಆ ನಾಯಿ ಬಣ್ಣ ತುಂಬುತ್ತದೆ. ಅದಕ್ಕೆ '777 ಚಾರ್ಲಿ' ಎಂದು ನಾಮಕರಣ ಮಾಡುತ್ತಾನೆ. ಇಂಟರ್‌ವಲ್ ವೇಳೆಗೆ ಕಥೆಗೆ ತಿರುವು ಸಿಗುತ್ತದೆ.

777 Charlie will be dubbed and released in Russia japan Taiwan and many more languages

ಮೈಸೂರಿನ ಕಾಲೋನಿಯಿಂದ ಮುಂದೆ ಇಬ್ಬರ ಪಯಣ ಕಾಶ್ಮೀರದವರೆಗೂ ಸಾಗುತ್ತದೆ. ತನ್ನ ಬದುಕಿಗೆ ಬಣ್ಣ ತುಂಬಿದ ಚಾರ್ಲಿ ಆಸೆಯನ್ನು ಈಡೇರಿಸಲು ಧರ್ಮ ಮುಂದಾಗುತ್ತಾನೆ. ಈ ರೋಚಕ ಪಯಣವೇ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುತ್ತದೆ. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಕಥೆ ಆಧರಿಸಿದ ಸಿನಿಮಾಗಳು ಬಂದಿವೆ. ಕನ್ನಡದಲ್ಲಿ ಇದು ಹೊಸ ಪ್ರಯತ್ನ ಎನಿಸಿಕೊಂಡಿತ್ತು.

ಅರವಿಂದ್ ಕಶ್ಯಪ್ ಛಾಯಾಗ್ರಹಣ, ನೋಬಿನ್ ಪೌಲ್ ಸಂಗೀತ '777 ಚಾರ್ಲಿ' ಚಿತ್ರಕ್ಕಿದೆ. ಮೋಹಕ ತಾರೆ ರಮ್ಯಾ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಹೊರ ರಾಜ್ಯಗಳಲ್ಲಿ ಕೂಡ ಶ್ವಾನ ಪ್ರೇಮಿಗಳಿಗೆ ಚಿತ್ರದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿ ರಕ್ಷಿತ್ ಶೆಟ್ಟಿ ವಿಭಿನ್ ಪ್ರಯತ್ನ ಮಾಡಿದ್ದರು.

More from Filmibeat

English summary
Rakshit shetty's 777 Charlie is set to release in Japan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X