National Film Awards 2023: 'ಚಾರ್ಲಿ 777', 'ಬಾಳೆ ಬಂಗಾರ'ಕ್ಕೆ ರಾಷ್ಟ್ರ ಪ್ರಶಸ್ತಿ
ಬಹು ನಿರೀಕ್ಷಿತ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗುರುವಾರ (ಆಗಸ್ಟ್ 24) ಘೋಷಿಸಲಾಗಿದೆ. ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ತೀರ್ಪುಗಾರರು ಪ್ರಶಸ್ತಿಗಳ ಪಟ್ಟಿಯನ್ನು ಘೋಷಿಸಿದ್ದಾರೆ. ಕಳೆದ 2021 ರಿಜಿಸ್ಟರ್ ಆಗಿದ್ದ ಸಿನಿಮಾಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 777' ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ದಕ್ಕಿದೆ. ಪರಂವ ಸ್ಟೋಡಿಯೋಸ್ ನಿರ್ಮಾಣ ಮಾಡಿದೆ. ನಿರ್ದೇಶಕ ಕಿರಣ್ ರಾಜ್ ನಿರ್ದೇಶನದಲ್ಲಿ ರಕ್ಷಿತ್ ಶೇಟ್ಟಿ ಮತ್ತು ಸಂಗೀತಾ ಸೃಂಗೇರಿ ಜೊತೆಗೆ ಸಿನಿಮಾದಲ್ಲಿ ನಟಿಸಿದ ನಾಯಿ ಕೂಡಾ ಖ್ಯಾತಿ ಗಳಿಸಿತ್ತು.

ಇನ್ನು, ನಾನ್ ಫೀಚರ್ ಫಿಲಂ ವಿಭಾಗದಲ್ಲಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಬಿಡುಗಡೆಯಾಗಿದ್ದ ಜಾಕೋಬ್ ವರ್ಗೀಸ್ ನಿರ್ದೇಶನದ ಆಯುಷ್ಮಾನ್ ಪ್ರಶಸ್ತಿ ಬಾಚಿಕೊಂಡಿದೆ. ಇದು ಬಾಬು ಮತ್ತು ಮಾಣಿಕ್ ಎಂಬ ಇಬ್ಬರು ವ್ಯಕ್ತಿಗಳ ಪ್ರಯಾಣದ ನೈಜ ಜೀವನದ ಕಥೆ ಸುತ್ತ ಇದೆ.
ನಟ ಅನಿರುದ್ಧ ನಿರ್ದೇಶನದ ಭಾರತಿ ವಿಷ್ಣುವರ್ಧನ್‌ರ ಸಾಕ್ಷ್ಯಚಿತ್ರ 'ಬಾಳೆ ಬಂಗಾರ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾದಲ್ಲಿ ಐದು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದ ಭಾರತಿ ವಿಷ್ಣುವರ್ಧನ್‌ರ ಸಿನಿ ಬದುಕನ್ನು ಸಾಕ್ಷ್ಯಚಿತ್ರದ ಮೂಲಕ ತೆರೆದಿಡಲಾಗಿದೆ. ಈ ಸಾಕ್ಷ್ಯಚಿತ್ರ 2 ಗಂಟೆ 31 ನಿಮಿಷಗಳಿದೆ.

ಕಳೆದ ವರ್ಷ 2020 ರ ಅತ್ಯುತ್ತಮ ನಟ ಪ್ರಶಸ್ತಿಯನ್ನು 'ಸೂರರೈ ಪೊಟ್ರು' ಸಿನಿಮಾ ನಟನೆಗಾಗಿ ಸೂರ್ಯ ಮತ್ತು ಹಿಂದಿ ಚಲನಚಿತ್ರ 'ತನ್ಹಾಜಿ: ದಿ ಅನ್‌ಸಂಗ್ ವಾರಿಯರ್' ಚಿತ್ರದಲ್ಲಿನ ನಟನೆಗಾಗಿ ಅಜಯ್ ದೇವಗನ್ ಹಂಚಿಕೊಂಡಿದ್ದರು.
1954 ರಲ್ಲಿ ಸ್ಥಾಪಿಸಲಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಹೆಚ್ಚು ನಿರೀಕ್ಷಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ವಿಜೇತರಿಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡುತ್ತಾರೆ.


Click it and Unblock the Notifications











