ಶ್ರುತಿ ಮಾಜಿ ಗಂಡ ಮಹೇಂದರ್ ಮರುಮದುವೆ
ನಟಿ ಶ್ರುತಿಯನ್ನು 1998ರಲ್ಲಿ ಮದುವೆಯಾಗಿ ಇತ್ತೀಚಿಗೆ ವಿಚ್ಛೇದನ ತೆಗೆದುಕೊಂಡಿದ್ದ ನಿರ್ದೇಶಕ ಮಹೇಂದರ್, ಫೆಬ್ರವರಿ 3, 2012ರಂದು ಯಶೋದಾ ಎಂಬವರನ್ನು ಮದುವೆಯಾಗಿದ್ದಾರೆ. ಕನಕಪುರ ತಾಲೂಕು, ಮೇಕೆದಾಟುವಿನ 'ಶಿವಾಲಂಕಾರ' ದೇವಾಲಯದಲ್ಲಿ ಈ ಮದುವೆ ನೆರವೇರಿದೆ.
ಇದೀಗ ಪತ್ನಿಯಾಗಿರುವ ಯಶೋದಾ, ಮಹೇಂದರ್ ಅವರ ದೂರದ ಸಂಬಂಧಿ ಕೂಡ. ಯಶೋದಾ, ಮೈಸೂರ್ ವಿಶ್ವವಿದ್ಯಾಲಯದ 'MA' ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ. ಇವರಿಬ್ಬರ ಮದುವೆ ಅಂದು ಕೆಲವೇ ಸಂಬಂಧಿಕರು ಮತ್ತು ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಇದು ಹಿರಿಯರು ನಿಶ್ಚಯಿಸಿ ಮಾಡಿರುವ ಮದುವೆ.
ನಟಿ ಶ್ರುತಿ ಹಾಗೂ ಮಹೇಂದರ್ 13 ವರ್ಷಗಳ ಹಿಂದೆ ಪ್ರೇಮವಿವಾಹ ಮಾಡಿಕೊಂಡಿದ್ದರು. ಆದರೆ ಅವರಿಬ್ಬರ ಮಧ್ಯೆ ಹೊಂದಾಣಿಕೆಯಾಗದೇ ವಿಚ್ಛೇದನಕ್ಕೆ ಕಾರಣವಾಯ್ತು. ಇದೀಗ ಮಹೇಂದರ್ ಮತ್ತೊಂದು ಮದುವೆ ಮಾಡಿಕೊಂಡು ದಾಂಪತ್ಯಕ್ಕೆ ಮತ್ತೆ ಅಡಿಯಿಟ್ಟಿದ್ದಾರೆ. ನಟಿ ಶ್ರುತಿ, ಪತ್ರಕರ್ತ ಹಾಗೂ ನಿರ್ದೇಶಕ ಚಂದ್ರಚೂಡ ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Director S Mahender has married an economics student named Yashodha on February 3. They tied the knot at a low key ceremony in Shivalankara temple, Mekedaatu, Kanakapura taluk.


Click it and Unblock the Notifications











