'ರಾಜಕುಮಾರ' ನೋಡುವುದಕ್ಕೂ ಮುಂಚೆ ಈ ಸಂಗತಿಗಳನ್ನ ತಿಳಿದುಕೊಳ್ಳಿ!

By Bharath Kumar

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಇದೇ ವಾರ (ಮಾರ್ಚ್ 24) ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಫಸ್ಟ್ ಡೇ, ಫಸ್ಟ್ ಶೋ ನೋಡುವುದಕ್ಕೆ ತುದಿಗಾಲಲ್ಲಿ ಕಾಯ್ತಿದ್ದಾರೆ.

ಅಷ್ಟಕ್ಕೂ, ಬಿಡುಗಡೆಗೂ ಮುಂಚೆ 'ರಾಜಕುಮಾರ' ಇಷ್ಟೊಂದು ಕ್ರೇಜ್ ಹುಟ್ಟುಹಾಕಲು ಕಾರಣವೇನು? ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ, ಹೊರ ರಾಜ್ಯಗಳಲ್ಲೂ 'ರಾಜಕುಮಾರ' ರಾಜ್ಯಭಾರ ಮಾಡ್ತಿರುವುದು ಯಾಕೆ?

ಇಲ್ಲಿದೆ ನೋಡಿ 'ರಾಜಕುಮಾರ'ನ ಅಬ್ಬರ ಹೆಚ್ಚಾಗುವಂತೆ ಮಾಡಿದ ಇಂಟ್ರೆಸ್ಟಿಂಗ್ ಅಂಶಗಳು.....

ಪುನೀತ್ ರಾಜ್ ಕುಮಾರ್ ಸಿನಿಮಾ

ಪುನೀತ್ ರಾಜ್ ಕುಮಾರ್ ಸಿನಿಮಾ

'ರಾಜಕುಮಾರ' ಚಿತ್ರಕ್ಕೆ ಈ ಮಟ್ಟದ ಕ್ರೇಜ್ ಉಂಟಾಗಲು ಕಾರಣ ಇದು ಪುನೀತ್ ರಾಜ್ ಕುಮಾರ್ ಸಿನಿಮಾ ಎಂಬ ಕಾರಣ. 'ದೊಡ್ಮನೆ ಹುಡ್ಗ' ಚಿತ್ರದ ನಂತರ ಪವರ್ ಸ್ಟಾರ್ ಕಾಣಿಸಿಕೊಳ್ತಿರುವ ಚಿತ್ರ 'ರಾಜಕುಮಾರ'. ಹೀಗಾಗಿ, ಸಹಜವಾಗಿ ಎಕ್ಸ್ ಪೆಕ್ಟೇಶನ್ ಇದ್ದೇ ಇರುತ್ತೆ.[ದಾಖಲೆಗಳನ್ನೆಲ್ಲ ಬೆಚ್ಚಿಬೀಳಿಸಿದ ರಾಜರತ್ನ 'ರಾಜಕುಮಾರ']

'ರಾಜಕುಮಾರ' ಟೈಟಲ್

'ರಾಜಕುಮಾರ' ಟೈಟಲ್

'ರಾಜಕುಮಾರ' ಚಿತ್ರದ ಬಹುದೊಡ್ಡ ಯಶಸ್ಸು ಅಂದ್ರೆ ಅದು ಚಿತ್ರದ ಶೀರ್ಷಿಕೆ. ಹೆಸರಿನಲ್ಲೇ 'ರಾಜಕುಮಾರ' ಹೊಂದಿರುವ ಈ ಸಿನಿಮಾ ಕನ್ನಡದ ಮೇರು ನಟ, ಡಾ ರಾಜ್ ಕುಮಾರ್ ಅವರ ಹೆಸರು ಎಂಬುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಅಪ್ಪು ಗೆಟಪ್, ಅಪ್ಪು ಡ್ಯಾನ್ಸ್!

ಅಪ್ಪು ಗೆಟಪ್, ಅಪ್ಪು ಡ್ಯಾನ್ಸ್!

'ರಾಜಕುಮಾರ' ಎಂಬ ಹೆಸರಿಗೆ ತಕ್ಕಂತೆ ಪುನೀತ್ ಅವರ ಗೆಟಪ್ ಗಳು ನಿರೀಕ್ಷೆ ಹೆಚ್ಚಿಸಿದೆ. ಎಂದಿನಂತೆ ಅಪ್ಪು ಅವರ ಡ್ಯಾನ್ಸ್ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದೆ. ಸೂಪರ್ ಸಾಂಗ್ಸ್ ಮತ್ತು ಜಬರ್ ದಸ್ತ್ ಫೈಟ್ಸ್ ಅಭಿಮಾನಿಗಳನ್ನ ಕೆರಳಿಸಿದೆ.['ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!]

'ಕಸ್ತೂರಿ ನಿವಾಸ'ದ ಛಾಯೆ!

'ಕಸ್ತೂರಿ ನಿವಾಸ'ದ ಛಾಯೆ!

'ರಾಜಕುಮಾರ' ಚಿತ್ರದ ಆರಂಭದಿಂದಲೂ ಈ ಒಂದು ಪ್ರಶ್ನೆ ಕಾಡುತ್ತಿದೆ. ಅಂದು ಡಾ.ರಾಜ್ ಕುಮಾರ್ ಅಭಿನಯಿಸಿದ್ದ 'ಕಸ್ತೂರಿ ನಿವಾಸ' ಚಿತ್ರಕ್ಕೂ, ಇಂದು ಪುನೀತ್ ಅಭಿನಯಿಸುತ್ತಿರುವ 'ರಾಜಕುಮಾರ' ಚಿತ್ರಕ್ಕೂ ಸಂಬಂಧವಿದ್ಯಾ ಎಂದು. ಅದಕ್ಕೆ ತಕ್ಕಂತೆ ಪೋಸ್ಟರ್ ಕೂಡ ರಿವಿಲ್ ಆಗಿತ್ತು. 'ಕಸ್ತೂರಿ ನಿವಾಸ' ಚಿತ್ರದಲ್ಲಿ ಅಣ್ಣಾವ್ರ ಹೆಗಲ ಮೇಲೆ ಪಾರಿವಾಳ ಕುತಿರುವಾಗೆ, ಪುನೀತ್ ಅವರ ಹೆಗಲ ಮೇಲೂ ಪಾರಿವಾಳ ಕುತಿರುವ ಪೋಸ್ಟರ್ ಎಲ್ಲೆಡೆ ಚರ್ಚೆ ಆಯಿತು. ಹೀಗಾಗಿ, 'ರಾಜಕುಮಾರ' ಚಿತ್ರವನ್ನ ನೋಡಲೇಬೇಕು ಎಂಬುದು ಅಭಿಮಾನಿಗಳ ಆಶಯ.[ತೆರೆ ಹಿಂದಿನ 'ರಾಜಕುಮಾರ'ನಲ್ಲಿ ಕಾಣುತ್ತಾರೆ 'ಡಾ.ರಾಜ್ ಕುಮಾರ್'!]

'ಬೊಂಬೆ' ಹಾಡು

'ಬೊಂಬೆ' ಹಾಡು

'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಈ ಹಾಡನ್ನ ಕೇಳುತ್ತಿದ್ದರೇ 'ಕಸ್ತೂರಿ ನಿವಾಸ'ದ ''ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು' ಹಾಡು ನೆನಪಾಗುತ್ತಿದೆ. ಇನ್ನು 'ಕಸ್ತೂರಿ ನಿವಾಸ' ಚಿತ್ರದಲ್ಲಿ ಬೊಂಬೆಯೂ ಪ್ರಮುಖ ಆಕರ್ಷಣೆಯಾಗಿತ್ತು. ಅದೇ ರೀತಿ 'ರಾಜಕುಮಾರ' ಚಿತ್ರದಲ್ಲೂ ಬೊಂಬೆಯೂ ಗಮನ ಸೆಳೆಯುತ್ತಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶನ

ಸಂತೋಷ್ ಆನಂದ್ ರಾಮ್ ನಿರ್ದೇಶನ

ಈ ಚಿತ್ರವನ್ನ ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದು ನಿರ್ದೇಶಕ ಸಂತೋಷ್ ಆನಂದ್ ರಾಮ್. ಈ ಹಿಂದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ನಿರ್ದೇಶನ ಮಾಡಿ ಯಶಸ್ಸು ಕಂಡಿದ್ದು ಸಂತೋಷ್, ಈಗ 'ರಾಜಕುಮಾರ' ಸಿನಿಮಾವನ್ನ ಅದೇ ಹಾದಿಯತ್ತ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ, ಸಂತೋಷ್ ಅವರ ನಿರ್ದೇಶನದ ಮೇಲೆ ಕುತೂಹಲ ಹೆಚ್ಚಿದೆ.

ಸ್ವಮೇಕ್ ಸಿನಿಮಾ

ಸ್ವಮೇಕ್ ಸಿನಿಮಾ

ಈ ಎಲ್ಲ ಅಂಶಗಳ ಜೊತೆಗೆ 'ರಾಜಕುಮಾರ' ಅಪ್ಪಟ ಸ್ವಮೇಕ್ ಸಿನಿಮಾ ಎಂಬುದು ವಿಶೇಷ. ಹೀಗಾಗಿ, ಅಭಿಮಾನಿಗಳು ಯಾವುದೇ ಟೀಕೆಗಳಿಲ್ಲದೆ ಸಿನಿಮಾ ನೋಡಬಹುದು[ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ]

ಬಹುದೊಡ್ಡ ತಾರಬಳಗ

ಬಹುದೊಡ್ಡ ತಾರಬಳಗ

'ರಾಜಕುಮಾರ' ಚಿತ್ರದಲ್ಲಿ ಬಹುದೊಡ್ಡ ತಾರಬಳಗವಿದೆ. ಪ್ರತಿಯೊಂದು ದೃಶ್ಯದಲ್ಲೂ ವೈಭವೀಕರಣದಿಂದ ಕೂಡಿದೆ. ಇದೇ ಮೊದಲ ಬಾರಿಗೆ ಬಹುಭಾಷ ನಟಿ ಪ್ರಿಯಾ ಆನಂದ್ ಕನ್ನಡದಲ್ಲಿ ಅಭಿನಯಿಸಿದ್ದಾರೆ. ಇನ್ನು ಮೊದಲ ಬಾರಿಗೆ ತಮಿಳು ನಟ ಶರತ್ ಕುಮಾರ್, ಪುನೀತ್ ಅವರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. 'ಪವರ್ ಸ್ಟಾರ್' ಚಿತ್ರದ ನಂತರ ಪ್ರಕಾಶ್ ರೈ ಅಪ್ಪು ಜೊತೆ ಎರಡನೇ ಸಿನಿಮಾ ಮಾಡ್ತಿದ್ದಾರೆ. ಉಳಿದಂತೆ ಸಾಧುಕೋಕಿಲಾ, ಚಿಕ್ಕಣ್ಣ, ದತ್ತಣ್ಣ, ರಂಗಾಯಣ ರಘು, ಅನಂತ್ ನಾಗ್, ಅಚ್ಯುತ್ ಕುಮಾರ್, ಅವಿನಾಶ್, ಅಶೋಕ್, ವಿಜಯಲಕ್ಷ್ಮಿ ಸಿಂಗ್, ಚಿತ್ರ ಶಣೈ, ಭಾರ್ಗವಿ ನಾರಾಯಣ್, ಅರುಣ ಬಾಲರಾಜ್, ಹೊನ್ನಾವಳ್ಳಿ ಕೃಷ್ಣ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

More from Filmibeat

English summary
Kannada Actor Puneeth Rajkumar starrer 'Raajakumara' is releasing on Friday (March 24) all Over Karnataka. The Movie also features Priya Anand, Sharath Kumar, Prakash Rai, Chikkanna. Here Are 8 Reasons As to why you should watch 'Raajakumara'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X