For Quick Alerts
  ALLOW NOTIFICATIONS  
  For Daily Alerts

  'ಒಂದಲ್ಲಾ ಎರಡಲ್ಲಾ' ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಿವೆ 8 ಸಿನಿಮಾಗಳು!

  By Naveen
  |

  ಪ್ರತಿ ವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿರುತ್ತವೆ. ಆದರೆ, ಈ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ. ಈ ಹಬ್ಬದ ವಿಶೇಷವಾಗಿ ಒಂದಷ್ಟು ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ. ಹಬ್ಬದ ಸಂತಸದಲ್ಲಿ ಕನ್ನಡದಲ್ಲಿ ಬರೋಬ್ಬರಿ 8 ಸಿನಿಮಾಗಳು ರಿಲೀಸ್ ಆಗುತ್ತಿವೆ.

  ಎಂಟರಲ್ಲಿ ಮೂರು ಸಿನಿಮಾಗಳು ದೊಡ್ಡ ಭರವಸೆಯನ್ನು ಹುಟ್ಟಿಸಿದ್ದರೆ ಇನ್ನು ಉಳಿದ ಸಿನಿಮಾಗಳು ಅವರ ಜೊತೆಗೆ ಅದೃಷ್ಟ ಪರೀಕ್ಷೆಗೆ ಇಳಿದಿವೆ. ವಿಭಿನ್ನ ಶೈಲಿಯ ಹಾಡುಗಳ ಹಾಗೂ ಟ್ರೇಲರ್ ಮೂಲಕ 'ಒಂದಲ್ಲಾ ಎರಡಲ್ಲಾ' ಮತ್ತು 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾಗಳು ನಿರೀಕ್ಷೆ ಹುಟ್ಟಿಸಿದೆ. ಇದರ ಜೊತೆಗೆ ಏಳು ವರ್ಷಗಳ ಬಳಿಕ ದಿನಕರ್ ತೂಗುದೀಪ್ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರದ ಬಗ್ಗೆ ಕುತೂಹಲ ಇದೆ.

  ಒಟ್ಟಿಗೆ ಚಿತ್ರಮಂದಿರಕ್ಕೆ ಬರ್ತಾರೆ ಸಮೀರ, ಪ್ರವೀಣ ಒಟ್ಟಿಗೆ ಚಿತ್ರಮಂದಿರಕ್ಕೆ ಬರ್ತಾರೆ ಸಮೀರ, ಪ್ರವೀಣ

  ಅಂದಹಾಗೆ, ಈ ವಾರ ತೆರೆಗೆ ಬರುತ್ತಿರುವ ಎಂಟು ಕನ್ನಡ ಸಿನಿಮಾಗಳ ವಿವರ ಇಲ್ಲಿದೆ ಓದಿ....

  ಒಂದಲ್ಲಾ ಎರಡಲ್ಲಾ

  ಒಂದಲ್ಲಾ ಎರಡಲ್ಲಾ

  ಶ್ರೀಮತಿ ಸ್ಮಿತಾ ಉಮಾಪತಿ ಅವರು ನಿರ್ಮಿಸಿರುವ `ಒಂದಲ್ಲಾ ಎರಡಲ್ಲಾ` ಚಿತ್ರ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ರಾಮಾ ರಾಮಾ ರೇ' ಖ್ಯಾತಿಯ ಡಿ.ಸತ್ಯ ಪ್ರಕಾಶ್ ಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದಾರೆ. ವಾಸುಕಿ ವೈಭವ್ ಹಾಗೂ ನಾಬಿನ್ ಪಾಲ್ ಸಂಗೀತ ನೀಡಿದ್ದು, ನಾಗೇಂದ್ರ ಹೆಚ್.ಎಸ್ ಸಂಭಾಷಣೆ ಬರೆದಿದ್ದಾರೆ. ಮಾಸ್ಟರ್ ಪಿ.ವಿ.ರೋಹಿತ್, ಸಾಯಿಕೃಷ್ಣ ಕುಡ್ಲ, ಎಂ.ಕೆ.ಮಠ, ಆನಂದ್ ನೀನಾಸಂ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

  ರಿಷಬ್ ಶೆಟ್ಟಿ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಆಗಸ್ಟ್ 23 ರಂದು ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ. ಈ ಚಿತ್ರದ ಕಥೆ ಹಾಗೂ ನಿರ್ದೇಶನ ರಿಷಬ್ ಅವರದ್ದಾಗಿದೆ. ಅನಂತನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ರಂಜನ್, ಮುಂತಾದವರಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಹಾಗೂ ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ.

  ಸೆಲ್ಫಿಯಲ್ಲಿ ಹೊಸ ದಾಖಲೆ ಬರೆದ 'ಲೈಫ್ ಜೊತೆ ಒಂದ್ ಸೆಲ್ಫಿ'ಸೆಲ್ಫಿಯಲ್ಲಿ ಹೊಸ ದಾಖಲೆ ಬರೆದ 'ಲೈಫ್ ಜೊತೆ ಒಂದ್ ಸೆಲ್ಫಿ'

  ಲೈಫ್ ಜೊತೆ ಒಂದ್ ಸೆಲ್ಫಿ

  ಲೈಫ್ ಜೊತೆ ಒಂದ್ ಸೆಲ್ಫಿ

  'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾ ಕೂಡ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದೆ. 'ಸಾರಥಿ' ಸಿನಿಮಾದ ನಂತರ ದಿನಕರ್ ತೂಗುದೀಪ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಿನಕರ್ ಪತ್ನಿ ಮಾನಸ ಅವರು ಕಥೆ ಬರೆದಿದ್ದಾರೆ. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಹಾಗೂ ಹರಿಪ್ರಿಯಾ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಸಂಗೀತ ಇಲ್ಲಿದೆ.

  ಮೇ 1

  ಮೇ 1

  ಎಸ್.ಕೆ.ನಾಗೇಂದ್ರ ಅರಸ್ ನಿರ್ದೇಶನದ 'ಮೇ 1' ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಶ್ರೀ ಸಾಯಿಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ವಾಣಿರಾಜು ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೆ.ಕೆ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಕ್ಷಾ ಸೋಮಶೇಖರ್, ಪೂರ್ವಿ ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಜಿ.ಸತೀಶ್ ಬಾಬು ಸಂಗೀತ ನೀಡಿದ್ದಾರೆ. ಹಾಡುಗಳನ್ನು ಆನಂದಪ್ರಿಯ ಹಾಗೂ ಚಿರು ಗೌಡ ರಚಿಸಿದ್ದಾರೆ.

  ಧೂಳಿಪಟ

  ಧೂಳಿಪಟ

  ಡೈರೆಕ್ಟರ್ ಡ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ 'ಧೂಳಿಪಟ' ಚಿತ್ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಶ್ಮಿ ಪಿ. ಕಾರ್ಚಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ಧೂಳಿಪಟ' ಚಿತ್ರದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸಿದ್ದಾರೆ. ರೂಪೇಶ್.ಜಿ ರಾಜ್ ಅವರು ನಾಯಕನಾಗಿ ಅರ್ಚನ, ಐಶ್ವರ್ಯಾ ನಾಯಕಿಯರಾಗಿದ್ದಾರೆ.

  ಮುಕ್ತಿ

  ಮುಕ್ತಿ

  'ಮುಕ್ತಿ' ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ. ನಕುಲ್ ಗೋವಿಂದ್, ಭಾನಶ್ರೀ, ರಘುರಂಜನ್, ಮೂರ್ತಿ, ಬೇಬಿ ಪವಿತ್ರ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಶಂಕರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಬಿ.ಆರ್.ಹೇಮಂತ್ ಕುಮಾರ್ ಸಂಗೀತ ನೀಡಿದ್ದಾರೆ.

  ಕವಿ

  ಕವಿ

  ಪುನೀತ್ ಗೌಡ ನಟನೆಯ 'ಕವಿ' ಸಿನಿಮಾ ಈ ವಾರ ಚಿತ್ರಮಂದಿರಕ್ಕೆ ಬರಲಿದೆ. ಸಿನಿಮಾವನ್ನು ಎಂ.ಎಸ್.ತ್ಯಾಗರಾಜ್ ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿದ್ದ ತ್ಯಾಗರಾಜ್ ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಪುನೀತ್ ಗೌಡ ಜೊತೆಗೆ ಶೋಭಿತಾ ಶಿವಣ್ಣ, ಸ್ನೇಹ ನಟಿಸಿದ್ದಾರೆ.

  ಗುಡ್ ಬೈ

  ಗುಡ್ ಬೈ

  ಹಬ್ಬದ ಶುಭದಿನ ಗುಡ್ ಬೈ ಹೇಳಲು ಹೊಸ ಹುಡುಗರ ತಂಡ ಬರುತ್ತಿದ್ದಾರೆ. ರವಿಚಂದ್ರನ್ ಈ ಸಿನಿಮಾದ ನಾಯಕನಾಗಿದ್ದಾರೆ. ಅವರೇ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾವಾಗಿದೆ. ರಮಾದೇವಿ ವೆಂಕಟೇಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

  English summary
  8 Kannada movie releasing on the occasion of Varamahalakshmi Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X