For Quick Alerts
  ALLOW NOTIFICATIONS  
  For Daily Alerts

  ನಾಳೆ ತೆರೆಗೆ 8 ಸಿನಿಮಾಗಳು : ಯಾವುದು ನೋಡೋದು, ಯಾವುದು ಬಿಡೋದು?

  By Naveen
  |

  ಪ್ರತಿ ವಾರ ಸಿನಿಮಾಗಳ ಮೇಲೆ ಸಿನಿಮಾಗಳು ಬರುತ್ತಿವೆ. ಈ ವಾರ ಕನ್ನಡದಲ್ಲಿ 8 ಬರೋಬ್ಬರಿ ಸಿನಿಮಾಗಳು ತೆರೆಗೆ ಬರುತ್ತಿವೆ.

  ನಟ ಸಂಚಾರಿ ವಿಜಯ್ ಅವರ '6ನೇ ಮೈಲಿ', ನಟಿ ರಾಧಿಕಾ ಚೇತನ್ ಅವರ 'ಅಸತೋಮ ಸದ್ಗಮಯ', ಕೃಷಿ ತಾಪಂಡ ನಟನೆಯ 'ಕನ್ನಡಕ್ಕಾಗಿ ಒಂದನ್ನು ಒತ್ತಿ', ನಿರ್ದೇಶಕ ಡಿ.ರಾಜೇಂದ್ರಬಾಬು ಅವರ ಕೊನೆಯ ಚಿತ್ರ 'ಕುಚ್ಚಿಕು ಕಚ್ಚಿಕು', ಮಿತ್ರ ನಟನೆಯ 'ಪರಸಂಗ', ನಿರ್ದೇಶಕ ಸಾಯಿ ಪ್ರಕಾಶ್ ಅವರ 101ನೇ ಸಿನಿಮಾ 'ಕ್ರಾಂತಿ ಯೋಗಿ ಮಹಾದೇವ', 'ವಜ್ರ' ಹಾಗೂ 'ಧಾಂಗಡಿ' ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳಾಗಿದೆ.

  ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ '6ನೇ ಮೈಲಿ' ಟ್ರೈಲರ್

  ಅಂದಹಾಗೆ, ನಾಳೆ ರಿಲೀಸ್ ಆಗುತ್ತಿರುವ ಈ ಎಂಟು ಸಿನಿಮಾಗಳ ವಿವರ ಮುಂದಿದೆ ಓದಿ...

  6ನೇ ಮೈಲಿ

  6ನೇ ಮೈಲಿ

  ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹಾಗೂ ಆರ್.ಜೆ.ನೇತ್ರ ನಟಿಸಿರುವ '6ನೇ ಮೈಲಿ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಸೀನಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಡಾ.ಶೈಲೇಶ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಉಳಿದಂತೆ, ಕೃಷ್ಣ ಹೆಬ್ಬಳೆ, ಆರ್.ಜೆ.ಸುದೇಶ್, ರಂಗಭೂಮಿ ಪ್ರತಿಭೆ ಆದಿತ್ಯ ಭಾರಧ್ವಜ್, ಹಾಗೂ ಹೇಮಂತ್ ಸುಶೀಲ್ ತಾರಬಳಗದಲ್ಲಿ ಇದ್ದಾರೆ. ಯೂಟ್ಯೂಬ್ ನಲ್ಲಿ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆಗಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

  ಅಸತೋಮ ಸದ್ಗಮಯ

  ಅಸತೋಮ ಸದ್ಗಮಯ

  'ಅಸತೋಮ ಸದ್ಗಮಯ' ಸಿನಿಮಾ ಇದೇ ಜುಲೈ 6ರಂದು ರಾಜ್ಯಾದ್ಯಂತ ಏಕಕಾಲಕ್ಕೆ 50 ಸಿಂಗಲ್ ಸ್ಕೀನ್ ಚಿತ್ರಮಂದಿರಗಳಲ್ಲಿ ಮತ್ತು 20 ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗಲಿದೆ. ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರಾರವರು ಈ ಚಿತ್ರವನ್ನ ನಿರ್ಮಿಸಿದ್ದು, ರಾಜೇಶ್ ವೇಣೂರ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಮೂವಿಸ್ ರವರು ಈ ಚಿತ್ರವನ್ನ ರಾಜ್ಯಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. ರಾಧಿಕಾ ಚೇತನ್, ಕಿರಣ್ ರಾಜ್, ಲಾಸ್ಯ ನಾಗರಾಜ್, ದೀಪಕ್ ಶೆಟ್ಟಿ ಹಾಗೂ ಬೇಬಿ ಚಿತ್ರಾಲಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

  '6ನೇ ಮೈಲಿ' ಚಿತ್ರಕ್ಕಿದೆ '6'ರ ನಂಟು: ಹೀಗೂ ಉಂಟು.! '6ನೇ ಮೈಲಿ' ಚಿತ್ರಕ್ಕಿದೆ '6'ರ ನಂಟು: ಹೀಗೂ ಉಂಟು.!

  ಕನ್ನಡಕ್ಕಾಗಿ ಒಂದನ್ನು ಒತ್ತಿ

  ಕನ್ನಡಕ್ಕಾಗಿ ಒಂದನ್ನು ಒತ್ತಿ

  ಎದಬಿಡಂಗಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕುಶಾಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅವಿನಾಶ್ ಎಸ್ ಶತಮರ್ಷಣ, ಕೃಷಿ ತಾಪಂಡ, ಚಿಕ್ಕಣ್ಣ, ದತ್ತಣ್ಣ, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್, ಜಯಶ್ರೀ, ರಂಗಾಯಣ ರಘು, ಉಮೇಶ್, ಹೆಚ್.ಎಂ.ಟಿ ವಿಜಯ್, ರವಿ(ಟಾಮಿ) ಸತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಕುಚ್ಚಿಕು ಕಚ್ಚಿಕು

  ಕುಚ್ಚಿಕು ಕಚ್ಚಿಕು

  ಖ್ಯಾತ ನಿರ್ದೇಶಕ ದಿವಂಗತ ಡಿ.ರಾಜೇಂದ್ರಬಾಬು ಅವರ ಕೊನೆಯ ನಿರ್ದೇಶನದ ಚಿತ್ರ 'ಕುಚ್ಚಿಕು ಕಚ್ಚಿಕು' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಲ್ಲಿ ಪ್ರವೀಣ್ ಗೌಡ ಹಾಗೂ ಜೆ.ಕೆ ನಾಯಕರಾಗಿ, ನಕ್ಷತ್ರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  ಶ್ರೀ ಚೆಲುವರಾಯಸ್ವಾಮಿ ಮೂವೀಸ್ ಲಾಂಛನದಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಹಂಸಲೇಖರ ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ.

  ಪರಸಂಗ

  ಪರಸಂಗ

  ನಟ ಮಿತ್ರ ಅವರ 'ಪರಸಂಗ' ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಇದೊಂದು ಸತ್ಯ ಘಟನೆ ಆಧಾರಿತವಾದ ಸಿನಿಮಾವಾಗಿದೆ. ನಂಬಿಕೆ, ವಂಚನೆ, ಅನುಮಾನ ಈ ಮೂರು ಅಂಶವನ್ನು ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆಯಂತೆ. ಮಿತ್ರ, ಅಕ್ಷತ, ಮನೋಜ್, ಮಜಾ ಟಾಕೀಸ್ ಪವನ್, ಚಂದ್ರಪ್ರಭಾ, ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ, ಗೋವಿಂದೆ ಗೌಡ, ತರುಣ್ ಸುಧೀರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  ವಜ್ರ

  ವಜ್ರ

  ನಾಳೆ 'ವಜ್ರ' ಸಿನಿಮಾ ಕೂಡ ಬಿಡುಗಡೆಯಾಗುತ್ತಿದೆ. ಪ್ರವೀಣ್ ಗಂಗಾ ಸಿನಿಮಾವನ್ನು ನಿರ್ದೇಶನ ಮಾಡಿ ತಾವೇ ನಾಯಕನಾಗಿ ನಟಿಸಿದ್ದಾರೆ. ಸುಷ್ಮಿತಾ ಗೋಪಿನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎಂ.ಕೆ.ಮೋಹನ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇದೆ.

  ಕ್ರಾಂತಿ ಯೋಗಿ ಮಹಾದೇವ

  ಕ್ರಾಂತಿ ಯೋಗಿ ಮಹಾದೇವ

  ಖ್ಯಾತ ನಿರ್ದೇಶಕ ಸಾಯಿ ಪ್ರಕಾಶ್ ಅವರ 101ನೇ ಸಿನಿಮಾ 'ಕ್ರಾಂತಿ ಯೋಗಿ ಮಹಾದೇವ' ನಾಳೆ ಚಿತ್ರಮಂದಿರದಲ್ಲಿ ಪ್ರದರ್ಶನ ಆಗಲಿದೆ. 'ಕ್ರಾಂತಿ ಯೋಗಿ ಮಹಾದೇವ' ಚಿತ್ರ ಬ್ರಿಟಿಷರ ವಿರುದ್ದ ಹೋರಾಡಿದ ಕ್ರಾಂತಿ ಯೋಗಿ ಮಹಾದೇವ ಅವರ ಜೀವನ ಚರಿತ್ರೆಯ ಚಿತ್ರವಾಗಿದೆ. ನಟ ರಾಮ್ ಕುಮಾರ್ ಕ್ರಾಂತಿ ಯೋಗಿ ಮಹಾದೇವರ ಪಾತ್ರದಲ್ಲಿ ನಟಿಸಿದ್ದಾರೆ.

  ಧಾಂಗಡಿ

  ಧಾಂಗಡಿ

  ಕೆ.ಶರತ್ ನಿರ್ದೇಶನ ಮಾಡಿರುವ 'ಧಾಂಗಡಿ' ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಯೋಜನೆಗಳು, ಹೋರಾಟಗಳು ಹಾಗೂ ಜೀವನವನ್ನು ಚಿತ್ರದ ಕಥೆ ಒಳಗೊಂಡಿದೆಯಂತೆ. ಡಾ ಸಿದ್ರಾಮ್ ಅಂಬೇಡ್ಕರ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  8 kannada movies are releasing on tomorrow (June 8th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X