twitter
    For Quick Alerts
    ALLOW NOTIFICATIONS  
    For Daily Alerts

    ದಾಖಲೆ ನಿರ್ಮಿಸಲು ಸಜ್ಜಾದ ಶುಭ ಶುಕ್ರವಾರ, ಭರ್ಜರಿ 8 ಸಿನಿಮಾ ತೆರೆಗೆ

    By Suneetha
    |

    ಶುಕ್ರವಾರ ಬಂತೆಂದರೆ ಸಿನಿಮಾ ಪ್ರಿಯರಿಗೆ ಭಾರಿ ಕುತೂಹಲ, ಯಾವ ಸಿನಿಮಾ ರಿಲೀಸ್ ಆಗಬಹುದು. ವೀಕೆಂಡ್ ನಲ್ಲಿ ಯಾವ ಸಿನಿಮಾ ನೋಡೋದು ಅಂತ ಸಿನಿ ಪ್ರೇಮಿಗಳು ಲೆಕ್ಕಾಚಾರ ಹಾಕುತ್ತಾರೆ.

    ಅದ್ರಲ್ಲೂ ಒಂದೇ ಸಿನಿಮಾ ರಿಲೀಸ್ ಆಗಿ, ಅದು ಚೆನ್ನಾಗಿ ಓಡ್ತಾ ಇದ್ರೆ, ಟಿಕೆಟ್ ಸಿಗೋದು ಕಷ್ಟ ಅಂತ ಕೂಡ ಲೆಕ್ಕ ಹಾಕೋ ಮಂದಿ ತುಂಬಾ ಇದ್ದಾರೆ. ಅದಕ್ಕೆ ಈ ವಾರ ಸಿನಿ ಪ್ರಿಯರಿಗೆ ಆ ಸಮಸ್ಯೆ ಎದುರಾಗಲು ಅವಕಾಶವೇ ಇಲ್ಲ. ಜೊತೆಗೆ ಭರ್ಜರಿ ಮನರಂಜನೆ ಕೂಡ ಸಿಗಲಿದೆ.['ನೀರ್ ದೋಸೆ' ಸಿನಿಮಾ ಬಿಡುಗಡೆ ತಡ ಆಗ್ತಿರೋದಕ್ಕೆ ನಿಜ ಕಾರಣವೇನು?]

    ಯಾಕೆಂದರೆ ಈ ವಾರ ಎರಡು-ಮೂರಲ್ಲಾ, ಬರೋಬ್ಬರಿ 8 ಸಿನಿಮಾಗಳು ತೆರೆ ಕಾಣುತ್ತಿವೆ. ಇದು ಕನ್ನಡ ಚಿತ್ರರಂಗದ ಮಟ್ಟಕ್ಕೆ ಒಂದು ದಾಖಲೆಯೇ ಸರಿ. ಈ 8 ಚಿತ್ರಗಳು ಯಶಸ್ವಿಯಾಗಿ ದಾಖಲೆ ನಿರ್ಮಾಣ ಮಾಡುತ್ತವೆಯೇ ಅನ್ನೋದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

    ಅಂದಹಾಗೆ ಸ್ಯಾಂಡಲ್ ವುಡ್ ನಲ್ಲಿ ಬರೋಬ್ಬರಿ 8 ಸಿನಿಮಾಗಳು ಒಂದೇ ದಿನ ತೆರೆ ಕಾಣುತ್ತಿರೋದು ಇದೇ ಮೊದಲು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಯಾವೊಂದು ವಾರವು ಇಷ್ಟು ಸಿನಿಮಾಗಳು ತೆರೆ ಕಂಡಿರಲಿಲ್ಲ. ಅಬ್ಬಬ್ಬಾ ಅಂದ್ರೆ 7 ಸಿನಿಮಾಗಳು ತೆರೆ ಕಂಡಿದ್ದವು.

    ಇದೀಗ ಇದಕ್ಕೆಲ್ಲ ಅಪವಾದ ಎನ್ನುವಂತೆ ಬರೋಬ್ಬರಿ 8 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿದ್ದು, ದಾಖಲೆ ನಿರ್ಮಾಣ ಮಾಡಲು ಸಜ್ಜಾಗಿವೆ. ಯಾವುದು ಆ 8 ಚಿತ್ರಗಳು ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ....

    'ನೀರ್ ದೋಸೆ'

    'ನೀರ್ ದೋಸೆ'

    ಬಹಳ ಸಮಯದಿಂದ ನೆನೆಗುದಿಗೆ ಬಿದ್ದಿದ್ದ 'ನೀರ್ ದೋಸೆ' ಚಿತ್ರ ಕೊನೆಗೂ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸುತ್ತಿದೆ. ಚಿತ್ರಕ್ಕೆ ವಿಜಯ್ ಪ್ರಸಾದ್ ಅವರು ಆಕ್ಷನ್-ಕಟ್ ಹೇಳಿದ್ದು, ನವರಸ ನಾಯಕ ಜಗ್ಗೇಶ್, ಹಿರಿಯ ನಟ ದತ್ತಣ್ಣ, ನಟಿ ಹರಿಪ್ರಿಯಾ ಮತ್ತು ನಟಿ ಸುಮನ್ ರಂಗನಾಥ್ ಅವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಟ್ರೈಲರ್ ಮೂಲಕ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಸಿನಿಪ್ರಿಯರು ಕೂಡ ಬಹಳ ಕುತೂಹಲ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ ಮೇನಕದಲ್ಲಿ 'ನೀರ್ ದೋಸೆ' ತೆರೆ ಕಾಣುತ್ತಿದೆ.['ನೀರ್ ದೋಸೆ' ಅಂದ್ರೆ ಹಲಸಿನ ಹಣ್ಣಿದ್ದಂತೆ, ಬಿಚ್ಚಿ ನೋಡಿದ್ರೆ ಗೊತ್ತಾಗೋದು]

    'ಕೆಂಪಮ್ಮನ ಕೋರ್ಟ್ ಕೇಸ್'

    'ಕೆಂಪಮ್ಮನ ಕೋರ್ಟ್ ಕೇಸ್'

    'ಎಡಕಲ್ಲು ಗುಡ್ಡ' ಚಂದ್ರಶೇಖರ್ ಅವರು ನಿರ್ದೇಶನ ಮಾಡಿರುವ 'ಕೆಂಪಮ್ಮನ ಕೋರ್ಟ್ ಕೇಸ್' ಕೂಡ ತಕ್ಕಮಟ್ಟಿಗೆ ಗಾಂಧಿನಗರದಲ್ಲಿ ಸುದ್ದಿ ಮಾಡಿದೆ. ಸುಂದರ್ ರಾಜ್ ಕಥೆ ಬರೆದು, ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ 'ತೀರ್ಪು ನೀಡುವುದು ವಿಳಂಬ ಆದರೆ, ತೀರ್ಪು ದಕ್ಕದ ಹಾಗೆ ಜಸ್ಟಿಸ್ ಡಿಲೈಡ್, ಜಸ್ಟಿಸ್ ಡಿನೈಡ್' ಇದನ್ನು ಹೈಲೈಟ್ ಮಾಡಲಾಗಿದೆ. ಚಿತ್ರದಲ್ಲಿ ಕೆಂಪಮ್ಮನಾಗಿ ರಾಧ ರಾಮಚಂದ್ರ, ಸಿದ್ಧಾರ್ಥ್, ಶ್ರೀನಾಥ್ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

    'ಜಿಲ್ ಜಿಲ್'

    'ಜಿಲ್ ಜಿಲ್'

    ನಿರ್ಮಾಪಕ ಲೈಗಿಂಕ ಕಿರುಕುಳ ಕೊಟ್ಟ ಅಂತ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದ ಪರಭಾಷಾ ನಟಿ ಪೂವಿಶಾ ಅವರ 'ಜಿಲ್ ಜಿಲ್' ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಎಲ್ಲಾ ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರಕ್ಕೆ ನವ ನಿರ್ದೇಶಕ ಮಧು ಆಕ್ಷನ್-ಕಟ್ ಹೇಳಿದ್ದಾರೆ. ಶ್ರೀಬೆಳಗುಲಿ ಹೊನ್ನಮ್ಮದೇವಿ ಪ್ರೊಡಕ್ಷನ್ಸ್ ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಚಿತ್ರದಲ್ಲಿ ನಟಿ ಪೂವಿಶಾ, ನವ ನಟ ಧನಂಜಯ್ ಮುಖ್ಯ ಪಾತ್ರ ವಹಿಸಿದ್ದಾರೆ.[ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ]

    'ಬಬ್ಲುಷಾ'

    'ಬಬ್ಲುಷಾ'

    ಬರೋಬ್ಬರಿ 55೦ ವರ್ಷಗಳ ಹಿಂದಿನ ಕಥೆಯನ್ನು ತೆರೆಯ ಮೇಲೆ ತರುವ ಸಾಹಸವನ್ನು ನಿರ್ದೇಶಕ ವೆಂಕಟೇಶ್ ಭಾರಾದ್ವಾಜ್ ಮಾಡಿದ್ದಾರೆ. ಅಮೃತ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಚಿತ್ರಕ್ಕೆ ಹಿರಿಯ ನಿರ್ದೇಶಕ ಕಮ್ ಸಾಹಿತಿ ಸಿ.ವಿ ಶಿವಶಂಕರ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಹರ್ಷಾರ್ಜುನ, ಮಣಿ ಶೆಟ್ಟಿ, ಶೋಭರಾಜ್, ಅವಿನಾಶ್, ಶ್ರೀಕಾಂತ್ ಹೆಬ್ಳಿಕರ್, ಬೇಬಿ ಶಮಾ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

    'ಅವಧಿ'

    'ಅವಧಿ'

    'ಹುಟ್ಟು-ಸಾವಿನ' ನಡುವೆ ದೇವರು ಹೇಗೆ ಆಟವಾಡುತ್ತಾನೆ ಅನ್ನೋದನ್ನು 'ಅವಧಿ' ಚಿತ್ರದಲ್ಲಿ ತೋರಿಸಲಾಗಿದೆ. ಮಾಂಟ್ರಿಕ್ಸ್ ಮೀಡಿಯಾ ವರ್ಕ್ಸ್ ಸಂಸ್ಥೆಯ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ, ಸಾಯಿಕಿರಣ್ ಮುಕ್ಕಮಾಲಾ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆಗಳಾದ ರಂಜಿತ್, ಅರ್ಚನಾ, ರಮೇಶ್ ಭಟ್, ಜೈ ಜಗದೀಶ್, ಶ್ರೀನಿವಾಸ್ ಪ್ರಭು ಮುಂತಾದವರು ಮಿಂಚಿದ್ದಾರೆ.

    'ಸೆಲ್ಫಿ'

    'ಸೆಲ್ಫಿ'

    'ಹಾರರ್-ಮರ್ಡರ್-ಮಿಸ್ಟರಿ-ಥ್ರಿಲ್ಲರ್' 'ಸೆಲ್ಫಿ' ಎಂಬ ವಿಭಿನ್ನ ಸಿನಿಮಾ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ಎಲ್ಲಾ ಹೊಸಬರೇ ತಂಡವನ್ನು ಕಟ್ಟಿಕೊಂಡು ಮಾಡಿರುವ 'ಸೆಲ್ಫಿ' ಚಿತ್ರಕ್ಕೆ ನವೀನ್ ಕೈಪು ಎಂಬುವವರು ಆಕ್ಷನ್-ಕಟ್ ಹೇಳಿದ್ದಾರೆ. ಸುಮಾರು 10 ವರ್ಷಗಳ ಕಾಲ ವಿದೇಶದಲ್ಲಿ ಇದ್ದುಕೊಂಡು ನವೀನ್ ಅವರು ಈ ಚಿತ್ರಕ್ಕಾಗಿ ಕಥೆ ರಚಿಸಿದ್ದು, ಈ ಚಿತ್ರಕ್ಕಾಗಿ ಅಂತ ವಸ್ತ್ರ ವಿನ್ಯಾಸ ಕೂಡ ಮಾಡಿದ್ದಾರೆ. ಚಿತ್ರದಲ್ಲಿ ನವ ಪ್ರತಿಭೆಗಳಾದ ತ್ರಿಲೋಕ್, ದೀಪಾ ಗೌಡ, ಪೂಜಾ ಮತ್ತಿತ್ತರರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈಸೂರು ಟಾಕೀಸ್ ಅಡಿಯಲ್ಲಿ ನಿರ್ಮಾಪಕ ಕಮ್ ವಿತರಕ ಜಾಕ್ ಮಂಜು ಅವರು ಇಡೀ ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ.

    'ಸಿಕ್ಕಾಪಟ್ಟೆ ಇಷ್ಟಪಟ್ಟೆ'

    'ಸಿಕ್ಕಾಪಟ್ಟೆ ಇಷ್ಟಪಟ್ಟೆ'

    ಹರಿರಾಜ್ ನಿರ್ದೇಶನದ 'ಸಿಕ್ಕಾಪಟ್ಟೆ ಇಷ್ಟಪಟ್ಟೆ' ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಪ್ರಿಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಸಿ.ಆರ್ ಮನೋಹರ್ ನಿರ್ಮಾಣದ 'ಸಿಕ್ಕಾಪಟ್ಟೆ ಇಷ್ಟಪಟ್ಟೆ' ಚಿತ್ರದಲ್ಲಿ ನಟ ನಮಿತಾ, ಕಿರಣ್ ರಾಥೋಡ್, ಸಾವಂತ್, ರವೀಂದ್ರನಾಥ್, ಮೇಘನಾ ನಾಯ್ಡು, ಕೀರ್ತಿ ಚಾವ್ಲಾ, ಆರತಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

    'ಪ್ರೇಮ ಗೀಮ ಜಾನೆ ದೋ'

    'ಪ್ರೇಮ ಗೀಮ ಜಾನೆ ದೋ'

    'ಕೆಂಚ ಚೇತನ್ ಕುಮಾರ್' ಎಂಬುವವರ ಚೊಚ್ಚಲ ಪ್ರಯತ್ನವೇ 'ಪ್ರೇಮ ಗೀಮ ಜಾನೆ ದೋ'. ಸುಮಾರು 27 ಮಂದಿ ಹಣ ಹೂಡಿರುವ ಈ ವಿಶೇಷ ಸಿನಿಮಾ ಈ ವಾರ ತೆರೆಗೆ ಅಪ್ಪಳಿಸುತ್ತಿದೆ. ರಾಜ್ಯ ಪ್ರಶಸ್ತಿ ವಿಜೇತ ಪೂರ್ಣ ಚಂದ್ರ ತೇಜಸ್ವಿ ಅವರು 4 ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿತ್ರದಲ್ಲಿ ಶೀತಲ್ ಶೆಟ್ಟಿ, ಗೌತಮ್, ಶ್ರುತಿ ತಿಮ್ಮಯ್ಯ, ಪಲ್ಲವಿ ಗೌಡ, ರಮೇಶ್ ಭಟ್, ಪ್ರಶಾಂತ್ ಸಿದ್ಧಿ, ಮನ್ ದೀಪ್ ರಾಯ್ ಮುಂತಾದವರು ಪ್ರಮುಖ ಪಾತ್ರ ವಹಿಸಿದ್ದಾರೆ.

    English summary
    Eight Much-awaited Kannada films are releasing this Friday (September 2nd). Kannada Movie 'Neer Dose', Kannada Movie 'Kempammana Court Case', Kannada Movie 'Bablusha', Kannada Movie 'Jil Jil', Kannada Movie 'Selfie', Kannada Movie 'Avadhi', Kannada Movie 'Sikkapatte Istapatte', Kannada Movie 'Prema Geema Janedo' is all set to releasing this Friday.
    Thursday, September 1, 2016, 10:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X