ನಾಳೆ (ಶುಕ್ರವಾರ) ಬರೋಬ್ಬರಿ 8 ಕನ್ನಡ ಸಿನಿಮಾಗಳ ಬಿಡುಗಡೆ
ನಾಳೆ (ಶುಕ್ರವಾರ) ಕನ್ನಡದಲ್ಲಿ ಎಂಟು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಬಹಳಷ್ಟು ವಾರಗಳ ನಂತರ ಮತ್ತೆ ಇಷ್ಟೊಂದು ಸಂಖ್ಯೆಯ ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿವೆ.
'ಎಲ್ಲಿದೆ ಇಲ್ಲಿ ತನಕ', 'ದೇವರು ಬೇಕಾಗಿದ್ದಾರೆ', 'ಲುಂಗಿ', 'ಇಂಜೆಕ್ಟ್ 0.7', 'ವೃತ್ರ', 'ಜ್ಞಾನಂ', 'ಸಿದ್ಧಿ ಸೀರೆ', 'ಚಾಟಿ' ಸಿನಿಮಾಗಳು ಈ ವಾರ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿವೆ.
'ಎಲ್ಲಿದೆ ಇಲ್ಲಿ ತನಕ' ಸಿನಿಮಾ ಸೃಜನ್ ಲೋಕೇಶ್ ನಿರ್ಮಾಣದ ಮೊದಲ ಸಿನಿಮಾವಾಗಿದೆ. ಸೃಜನ್ ಹಾಗೂ ಹರಿಪ್ರಿಯಾ ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ.

'ವೃತ್ರ' ಮಹಿಳಾ ಪ್ರಧಾನ ಸಿನಿಮಾ. ನಿತ್ಯಾ ಶ್ರೀ ಚಿತ್ರದ ನಾಯಕಿ. ಇದು ಅವರ ಎರಡನೇ ಕನ್ನಡ ಸಿನಿಮಾ. ರಕ್ಷಿತ್ ಶೆಟ್ಟಿ ಬ್ಯಾನರ್ ನಲ್ಲಿ ಕೆಲಸ ಮಾಡಿದ್ದ ಗೌತಮ್ ಸಿನಿಮಾದ ನಿರ್ದೇಶಕ.
'ದೇವರು ಬೇಕಾಗಿದ್ದಾರೆ' ಟೈಟಲ್ ಮೂಲಕವೇ ಗಮನ ಸೆಳೆಯುವ ಸಿನಿಮಾ. ಸಿನಿಮಾ ಪೋಸ್ಟರ್ ಹಾಗೂ ಟ್ರೇಲರ್ ಒಂದು ವಿಭಿನ್ನ ಸಿನಿಮಾದ ಭಾವ ನೀಡುತ್ತದೆ. ಪುಟ್ಟ ಬಾಲಕ ದೇವರನ್ನು ಹುಡುಕುವ ಕಥೆ ಇಲ್ಲಿದೆ.

ಈ ಸಿನಿಮಾಗಳ ಜೊತೆಗೆ 'ಲುಂಗಿ', 'ಇಂಜೆಕ್ಟ್ 0.7', 'ಜ್ಞಾನಂ', 'ಸಿದ್ಧಿ ಸೀರೆ', 'ಚಾಟಿ' ಸಿನಿಮಾಗಳು ಅಕ್ಟೋಬರ್ 11ಕ್ಕೆ ಬಿಡುಗಡೆ ಆಗುತ್ತಿದೆ.
ಕಳೆದ ವಾರ 'ಸೈರಾ ನರಸಿಂಹ ರೆಡ್ಡಿ' ಹಾಗೂ 'ಜೋಕರ್' ಸಿನಿಮಾಗಳು ಬಿಡುಗಡೆಯಾಗಿದ್ದು, ಅದರ ಪರಿಣಾಮ ಈ ವಾರದ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗಿದೆ.


Click it and Unblock the Notifications











