ಜಗ್ಗೇಶ್, ಅಜಯ್ ರಾವ್ ಇಬ್ಬರ ಸಿನಿಮಾ ಒಂದೇ ದಿನ
'ದಿ ವಿಲನ್' ಸಿನಿಮಾ ಬಿಡುಗಡೆಯಾಗಿದ್ದ ಕಾರಣ ಅಕ್ಠೋಬರ್ ನಲ್ಲಿ ಹೆಚ್ಚು ಸಿನಿಮಾಗಳು ರಿಲೀಸ್ ಆಗಲಿಲ್ಲ. ಆದರೆ, ಈಗ ತಿಂಗಳು ಕಳೆಯುತ್ತಿದ್ದ ಹಾಗೆ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿವೆ.
ಇತ್ತೀಚಿಗಷ್ಟೆ ನಟ ಅಜಯ್ ರಾವ್ ಅವರ 'ತಾಯಿಗೆ ತಕ್ಕ ಮಗ' ಸಿನಿಮಾದ ಬಿಡುಗಡೆಯ ದಿನಾಂಕ ನವೆಂಬರ್ 16 ರಂದು ಫಿಕ್ಸ್ ಆಗಿತ್ತು. ಆದರೆ, ಅದೇ ದಿನ ಜಗ್ಗೇಶ್ ಅಭಿನಯದ '8 MM' ಚಿತ್ರ ಕೂಡ ರಿಲೀಸ್ ಆಗುತ್ತಿದೆ. ಒಂದೇ ದಿನ ಇಬ್ಬರು ಸ್ಟಾರ್ ಸಿನಿಮಾಗಳು ಬೆಳ್ಳಿ ಪರದೆ ಮೇಲೆ ಬರುತ್ತಿವೆ.
ಅಂದಹಾಗೆ, '8 MM' ಜಗ್ಗೇಶ್ ಅವರ ನಿರೀಕ್ಷಿತ ಸಿನಿಮಾವಾಗಿದೆ. ರಗಡ್ ಲುಕ್ ನಲ್ಲಿ ನವರಸ ನಾಯಕ ಕಾಣಿಸಿಕೊಂಡಿದ್ದಾರೆ. ವಸಿಷ್ಟ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ. ಆಶಿಕಾ ರಂಗನಾಥ್ ಚಿತ್ರದ ನಾಯಕಿ ಆಗಿದ್ದಾರೆ. ಶಶಾಂಕ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅಜಯ್ ರಾವ್ ಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ.

ಈ ಸಿನಿಮಾಗಳ ಜೊತೆಗೆ ಮುಂದಿನ ತಿಂಗಳು ದೀಪಾವಳಿ ಹಬ್ಬ ಕೂಡ ಇದ್ದು, ಹೆಚ್ಚು ಹೆಚ್ಚು ಸಿನಿಮಾಗಳ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











