For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ರನ್ನ ಮದುವೆ ಆಗ್ತಾನಂತೆ ಹೈದರಾಬಾದ್ ನ ಪುಟ್ಟ ಪೋರ.!

  |

  'ಕಿರಿಕ್ ಪಾರ್ಟಿ' ಸಿನಿಮಾ ಬಂದ ಮೇಲೆ ನಟಿ ರಶ್ಮಿಕಾ ಮಂದಣ್ಣ ಕರ್ನಾಟಕದ ಕ್ರಶ್ ಆಗ್ಬಿಟ್ರು. ಬಳಿಕ ಟಾಲಿವುಡ್ ಕಡೆ ಮುಖ ಮಾಡಿದ ರಶ್ಮಿಕಾ ಮಂದಣ್ಣ ಇಡೀ ಸೌತ್ ಇಂಡಿಯಾಗೆ ಕ್ರಶ್ ಆದರು. ಮುದ್ದು ಮುಖದ ನಟಿ ರಶ್ಮಿಕಾ ಮಂದಣ್ಣಗೆ ಕ್ಲೀನ್ ಬೌಲ್ಡ್ ಆದ ಹುಡುಗರ ಸಂಖ್ಯೆ ಲೆಕ್ಕವಿಲ್ಲದಷ್ಟು.

  ನೋಡನೋಡುತ್ತಲೇ ನಟಿ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಯ್ತು. ರಶ್ಮಿಕಾ ಗೆ ಇರುವ ಕ್ರೇಜ್ ನಿಂದಾಗಿ ಆಕೆಗೆ ಸಿನಿ ಲೋಕದಲ್ಲಿ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.

  ನಟಿ ರಶ್ಮಿಕಾ ಮಂದಣ್ಣಗೆ ಪುಟ್ಟ ಪುಟ್ಟ ಮಕ್ಕಳು ಕೂಡ ಫಿದಾ ಆಗಿದ್ದಾರೆ. ಅದಕ್ಕೆ ಸಾಕ್ಷಿ ಇಲ್ಲಿದೆ. ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

  ರಶ್ಮಿಕಾ ರನ್ನ ಮದುವೆ ಆಗ್ತಾನಂತೆ ಪುಟ್ಟ ಹುಡುಗ

  ರಶ್ಮಿಕಾ ರನ್ನ ಮದುವೆ ಆಗ್ತಾನಂತೆ ಪುಟ್ಟ ಹುಡುಗ

  ಹೈದರಾಬಾದ್ ನ ಎಂಟು ವರ್ಷದ ಪುಟ್ಟ ಹುಡುಗ, ನಟಿ ರಶ್ಮಿಕಾ ಮಂದಣ್ಣ ರನ್ನ ಮದುವೆ ಆಗ್ತಾನಂತೆ. ಅಷ್ಟರಮಟ್ಟಿಗೆ ರಶ್ಮಿಕಾ ಅಂದ್ರೆ ಆ ಹುಡುಗನಿಗೆ ಅಚ್ಚುಮೆಚ್ಚು. 'ಗೀತ ಗೋವಿಂದಂ' ಸಿನಿಮಾ ನೋಡಿದ ಮೇಲೆ ಆ ಹುಡುಗನಿಗೆ ರಶ್ಮಿಕಾ ಫೇವರಿಟ್ ಆಗಿದ್ದಾರೆ.

  ರಶ್ಮಿಕಾಗೆ ಪತ್ರ ಬರೆದ 8ರ ಪೋರ, ಈ ಬಾಲಕನ ಆಸೆ ಏನು ಗೊತ್ತಾ?

  ಟ್ವಿಟರ್ ನಲ್ಲಿ ವಿಡಿಯೋ ಟ್ರೆಂಡಿಂಗ್

  ''ರಶ್ಮಿಕಾ ರನ್ನ ಮದುವೆ ಆಗುವೆ'' ಎಂದು ಪುಟ್ಟ ಹುಡುಗ ತೆಲುಗಿನಲ್ಲಿ ಹೇಳಿರುವ ವಿಡಿಯೋ ನ ಪ್ರವೀಣ್ ಎಂಬುವರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

  ರಶ್ಮಿಕಾ ಮಂದಣ್ಣ ನನ್ನ ಮಗಳಿದ್ದಂತೆ ಎಂದ ಶಂಕರ್ ಅಶ್ವಥ್

  ಟ್ವೀಟ್ ಮಾಡಿದ ರಶ್ಮಿಕಾ ಮಂದಣ್ಣ

  ಪುಟ್ಟ ಹುಡುಗನ ವಿಡಿಯೋ ನೋಡಿ, "ಓಹ್... ನನ್ನ ಮದುವೆ ಆಗ್ತೀಯಾ.. ಅಯ್ಯೋ ನನಗೆ ನಾಚಿಕೆ ಆಗುತ್ತಿದೆ. ತುಂಬಾ ಕ್ಯೂಟಾಗಿದೆ. ಲವ್ ಯು ಟೂ ಮಚ್" ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

  ರಶ್ಮಿಕಾ ಮಂದಣ್ಣ ಚಿತ್ರಗಳಂದ್ರೆ ಯೂಟ್ಯೂಬ್ ಗೆ ಒಂಥರಾ ಇಷ್ಟ

  ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬಿಜಿ

  ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬಿಜಿ

  ಕನ್ನಡದಲ್ಲಿ 'ಯಜಮಾನ' ಮತ್ತು 'ಪೊಗರು' ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ತೆಲುಗಿನಲ್ಲಿ 'ಡಿಯರ್ ಕಾಮ್ರೇಡ್' ಸೇರಿದಂತೆ ಎರಡು ಮೂರು ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.

  English summary
  Watch Video: 8 year old Hyderabad Boy wants to marry Rashmika Mandanna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X