For Quick Alerts
  ALLOW NOTIFICATIONS  
  For Daily Alerts

  ರವಿಶಂಕರ್, ಅರ್ಜುನ್ ಜನ್ಯ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಸುದೀಪ್

  |

  ನಟ ಸುದೀಪ್ ತಾವು ಬೆಳೆಯುವುದರ ಜೊತೆಗೆ ಅನೇಕರನ್ನು ಚಿತ್ರರಂಗದಲ್ಲಿ ಬೆಳೆಸಿದ್ದಾರೆ. ಆ ಪೈಕಿ ಪ್ರಮುಖರು ನಟ ರವಿಶಂಕರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

  ಈ ಇಬ್ಬರು ಪ್ರತಿಭಾವಂತರಿಗೆ ಮರು ಜೀವ ನೀಡಿದ್ದ ಸಿನಿಮಾ 'ಕೆಂಪೇಗೌಡ'. ಈ ಸಿನಿಮಾ ಸುದೀಪ್ ನಿರ್ದೇಶನ ಹಾಗೂ ನಟನೆಯಲ್ಲಿ ಬಂದಿತ್ತು. ಇಂತಹ ಸಿನಿಮಾ ಬಿಡುಗಡೆಯಾಗಿ ಇಂದಿಗೆ 8 ವರ್ಷ ತುಂಬಿದೆ. ಈ ಸಂತಸವನ್ನು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.! ಕೇಡಿ ರವಿಶಂಕರ್ ಅಸಲಿಯತ್ತು ಬಯಲು ಮಾಡಿದ ಕಿಚ್ಚ ಸುದೀಪ್.!

  ಸಿನಿಮಾದ ಬಗ್ಗೆ ಬರೆದುಕೊಂಡಿರುವ ಸುದೀಪ್ ''ನನ್ನ 'ಕೆಂಪೇಗೌಡ' ಸಿನಿಮಾಗಿಂತ ನಟ ರವಿಶಂಕರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಬೆಳವಣಿಗೆ ನನಗೆ ಖುಷಿ ನೀಡಿದೆ. 'ಕೆಂಪೇಗೌಡ' ಸಿನಿಮಾದಿಂದ ಇಂದಿನವರೆಗೆ ಅವರ ಜರ್ನಿ ಮುಂದುವರೆದಿದೆ. ಜೀವನ ನೀಡಿದ್ದನ್ನು ಅವರು ನಿಷ್ಟೆಯಿಂದ ಮಾಡುತ್ತಿದ್ದಾರೆ. ಅವರನ್ನು ಒಪ್ಪಿಕೊಂಡು, ಪ್ರೀತಿ ನೀಡುತ್ತಿರುವ ಎಲ್ಲ ಸ್ನೇಹಿತರಿಗೆ ಧನ್ಯವಾದ'' ಎಂದಿದ್ದಾರೆ.

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಟ ರವಿಶಂಕರ್ 'ಕೆಂಪೇಗೌಡ' ಸಿನಿಮಾಗೆ ಮುಂಚೆ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆದರೆ, ಈ ಸಿನಿಮಾ ಅವರಿಬ್ಬರ ಕೆರಿಯರ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಅಲ್ಲಿಂದ ಶುರುವಾಗಿ ಇವತ್ತಿನ ವರೆಗೂ ಈ ಇಬ್ಬರು ಕನ್ನಡ ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

  English summary
  8 years for 'Kempegowda' kannada film. Sudeep tweets about the movie and appreciates Ravishankar and Arjun Janya's work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X