82 ವರ್ಷದ ಅಜ್ಜಿಯ ಪ್ರೀತಿ ಕಂಡ ಮೂಕವಿಸ್ಮಿತರಾದ ಸುದೀಪ್
Recommended Video

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಸಿನಿಮಾ, ಅವರ ನಿರೂಪಣೆ ಮತ್ತು ಅವರ ಸ್ವಭಾವಕ್ಕೆ ಮನಸೋತ ಅಭಿಮಾನಿಗಳು ಸುದೀಪ್ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದು ಹೊಸತನೇಲ್ಲ. ಆದ್ರೆ, ಇಲ್ಲೊಬ್ಬ 82 ವರ್ಷದ ಅಪರೂಪದ ಅಜ್ಜಿ ಕಿಚ್ಚನಿಗೆ ಮನಸೋತಿದ್ದಾರೆ.
ಸುದೀಪ್ ಬಿಗ್ ಬಾಸ್ ಶೋ ನಿರೂಪಣೆ ಮಾಡುವ ಸ್ಟೈಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚನ 22 ವರ್ಷದ ಸಿನಿ ಜರ್ನಿಗೆ ಶುಭಾಶಯ ತಿಳಿಸಿರುವ ಅಜ್ಜಿ, ಸುದೀಪ್ ಅವರನ್ನ ಮನೆಗೆ ಆಹ್ವಾನಿಸಿದ್ದಾರೆ.
ಅಷ್ಟಕ್ಕೂ, ಈ ಅಜ್ಜಿ ಯಾರು? ಕಿಚ್ಚನ ಬಗ್ಗೆ ಏನೆಲ್ಲಾ ಹೇಳಿದ್ದಾರೆ? ಅಜ್ಜಿಯ ಪ್ರೀತಿಗೆ ಮನಸೋತ ಸುದೀಪ್, ಈ ಅಜ್ಜಿ ಬಗ್ಗೆ ಏನಂದ್ರು? ಈ ಎಲ್ಲ ಕುತೂಹಲಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ.....

5 ವರ್ಷದಿಂದ ಬಿಗ್ ಬಾಸ್ ನೋಡ್ತಿದ್ದಾರೆ
ನನಗೆ 82 ವರ್ಷ, ನನ್ನ ಹೆಸರು ಪದ್ಮಾ ..ಕಳೆದ ಐದು ವರ್ಷದಿಂದ ಬಿಗ್ ಬಾಸ್ ನೋಡುತ್ತಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬರುತ್ತೆ. ಅದರಲ್ಲೂ ವಾರದ ಕೊನೆಯಲ್ಲಿ ನೀವೇ ಬಂದು ಮಾತನಾಡುವುದು ನನಗೆ ತುಂಬ ಖುಷಿಯಾಗುತ್ತೆ.

22 ವರ್ಷ ಪೂರೈಸಿದ್ದಕ್ಕೆ ಶುಭಾಶಯ
''ನೀವು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ, ಸ್ವಂತ ಪರಿಶ್ರಮದಿಂದ ಮೇಲೆ ಬಂದಿದ್ದೀರಾ. ತುಂಬಾ ಸಂತೋಷ. ಸಮಾಜದಲ್ಲಿ ಒಳ್ಳೆ ಹೆಸರು ಪಡೆದುಕೊಂಡಿದ್ದೀರಾ. ಕೆಲವರಿಗೆ ಸಹಾಯವನ್ನ ಕೂಡ ಮಾಡುತ್ತೀರಾ. ಕಣ್ಣು ಇಲ್ಲದವರಿಗೆ ಶ್ರಯ ಕೊಟ್ಟು ಸಾಕುತ್ತಿದ್ದೀರಾ. ನಿಮ್ಮ ತಂದೆ-ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ ಅದು ಸಂತೋಷ. ನಿಮ್ಮನ್ನು, ನಿಮ್ಮ ಕುಟುಂಬದವರನ್ನ ಆ ದೇವರು ಚೆನ್ನಾಗಿ ಇಟ್ಟಿರಲಿ''

ನಮ್ಮ ಮನೆಗೆ ಬನ್ನಿ
''ಲಕ್ಷ್ಮಿ ಚಿತ್ರಮಂದಿರ ಹಿಂಭಾಗದಲ್ಲಿ ನಾವು ಇರೋದು. ಯಾವಾಗಲಾದರೂ ಬಂದ್ರೆ ಈ ಮನೆಗೆ ಬನ್ನಿ ಖುಷಿಯಾಗುತ್ತೆ. ನಿಮ್ಮ ಜೊತೆಯಲ್ಲಿ ಮಾತನಾಡಬೇಕೆಂದುಕೊಂಡಿದ್ದೇನೆ. ನೋಡೋಣ'' ಎಂದು ಸುದೀಪ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಅಜ್ಜಿಯ ಪ್ರೀತಿಗೆ ಮೂಕ ವಿಸ್ಮಿತರಾದ ಕಿಚ್ಚ
ಇನ್ನು ಅಜ್ಜಿಯ ಪ್ರೀತಿಯ ಮಾತುಗಳಿಗೆ ಕರಗಿದ ಸುದೀಪ್ ಮೂಕ ವಿಸ್ಮಿತರಾಗಿದ್ದಾರೆ. ಅಜ್ಜಿಯ ಮಾತಿಗೆ ಗೌರವ ಕೊಟ್ಟು, ಮನೆಗೆ ಬರುವುದಾಗಿ ಟ್ವಿಟ್ಟರ್ ನಲ್ಲಿ ಕೃತಜ್ಞತೆ ತಿಳಿಸಿದ್ದಾರೆ.

ಸುದೀಪ್ ಟ್ವೀಟ್ ನಲ್ಲಿ ಏನಿದೆ?
''ಖಂಡಿತವಾಗಲು ನಿಮ್ಮ ಮನೆಗೆ ಬರುತ್ತೇನೆ ಅಮ್ಮ. ನಿಮ್ಮಂತವರ ಈ ಮಾತು ಹಾಗೂ ಆರ್ಶೀವಾದವೇ ನನ್ನ ಸಂಪಾದನೆ....ಧನ್ಯವಾದಗಳು....'' - ಸುದೀಪ್


Click it and Unblock the Notifications











