»   » ವಿಡಿಯೋ : ಜಗ್ಗೇಶ್ '8MM' ಚಿತ್ರದ ಮೋಷನ್ ಪೋಸ್ಟರ್ ಸಿಕ್ಕಾಪಟ್ಟೆ ಖದರ್

ವಿಡಿಯೋ : ಜಗ್ಗೇಶ್ '8MM' ಚಿತ್ರದ ಮೋಷನ್ ಪೋಸ್ಟರ್ ಸಿಕ್ಕಾಪಟ್ಟೆ ಖದರ್

Posted By:
Subscribe to Filmibeat Kannada

ನಟ ಜಗ್ಗೇಶ್ ಅಭಿನಯದ '8MM' ಸಿನಿಮಾದ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿ ಸಖತ್ ಟಾಕ್ ಸೃಷ್ಟಿಸಿತ್ತು. ಆದರೆ ಇದೀಗ ಇದೇ ಸಿನಿಮಾದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

'8MM' ಬುಲೆಟ್ ಹಾರಿಸಲಿದ್ದಾರೆ ನವರಸ ನಾಯಕ ಜಗ್ಗೇಶ್

'8MM' ಸಿನಿಮಾದ ಮುಹೂರ್ತ ಇಂದು ನೆರವೇರಲಿದ್ದು, ಈ ವಿಶೇಷವಾಗಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಇಲ್ಲಿ ನಟ ಜಗ್ಗೇಶ್ ಗನ್ ಹಿಡಿದು ಖದರ್ ಆಗಿ ಲುಕ್ ಕೊಟ್ಟಿದ್ದಾರೆ. ಅವರೊಂದಿಗೆ ಅತುಲ್ ಕುಲಕರ್ಣಿ ಮತ್ತು ವಸಿಷ್ಟ ಸಿಂಹ ಸಾಥ್ ನೀಡಿದ್ದಾರೆ.

'8MM' movie motion poster is out

ನಟ ಜಗ್ಗೇಶ್ ರವರ ವೃತ್ತಿ ಜೀವನದಲ್ಲಿಯೇ ಇದು ವಿಭಿನ್ನ ಪಾತ್ರ ಅಂತ ಹೇಳಲಾಗಿದೆ. ಒಂದು ಕ್ರೈಂ ಸುತ್ತ ಹೆಣೆದಿರುವ '8MM' ಚಿತ್ರಕ್ಕೆ ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಅಷ್ಟಕ್ಕೂ '8MM' ಅನ್ನೋದು ಬುಲೆಟ್ ಸೈಜ್.

ಅಂದಹಾಗೆ, ಇಂದು (ಸಪ್ಟೆಂಬರ್22) '8MM' ಚಿತ್ರದ ಮುಹೂರ್ತ ಕಂಠೀರವ ಸ್ಟೂಡಿಯೊದಲ್ಲಿ ನಡೆಯಲಿದೆ. ರಾಕಿಂಗ್ ಯಶ್ ಚಿತ್ರಕ್ಕೆ ಕ್ಲಾಪ್ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಕ್ ಲೈನ್ ವೆಂಕಟೇಶ್, ಸಾ.ರಾ.ಗೊವಿಂದು, ನಿರ್ಮಾಪಕ ಮುನಿರತ್ನ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

English summary
Kannada Actor Jaggesh starrer '8MM' movie motion poster is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X