'8MM' ಚಿತ್ರದ ಖಡಕ್ ಟೀಸರ್ ನೋಡಿ ಫಿದಾ ಆದ ಜಗ್ಗೇಶ್ ಪತ್ನಿ
ನವರಸ ನಾಯಕ ಜಗ್ಗೇಶ್ ಅಭಿನಯದ '8MM' ಸಿನಿಮಾ ಟೀಸರ್ ಇದೀಗ ರಿಲೀಸ್ ಆಗಿದೆ. ಸಿಕ್ಕಾಪಟ್ಟೆ ಖಡಕ್ ಆಗಿರುವ ಈ ಟೀಸರ್ ನೋಡಿ ಅಭಿಮಾನಿಗಳು ಮಾತ್ರವಲ್ಲ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಕೂಡ ಖುಷಿ ಆಗಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ಪರಿಮಳ ಜಗ್ಗೇಶ್ ಮೆಚ್ಚುಗೆ ಸೂಚಿಸಿದ್ದಾರೆ.
ಒಂದು ನಿಮಿಷದ ಈ ಟೀಸರ್ ನಲ್ಲಿ ಕಾರು ಇಳಿದು ಬರುತ್ತಾರೆ. ಕಪ್ಪು ಬಣ್ಣದ ಡ್ರೆಸ್ ನಲ್ಲಿ ಸಖತ್ ಖದರ್ ಆಗಿ ಜಗ್ಗೇಶ್ ಕಾಣಿಸಿಕೊಂಡಿದ್ದಾರೆ. ಇನ್ನು ಜಗ್ಗೇಶ್ ರವರ ವೃತ್ತಿ ಜೀವನದಲ್ಲಿಯೇ ಇದು ವಿಭಿನ್ನ ಪಾತ್ರ ಅಂತ ಹೇಳಲಾಗಿದೆ. ಒಂದು ಕ್ರೈಂ ಸುತ್ತ ಹೆಣೆದಿರುವ '8MM' ಚಿತ್ರಕ್ಕೆ ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಅಷ್ಟಕ್ಕೂ '8MM' ಎನ್ನುವುದು ಬುಲೆಟ್ ಸೈಜ್ ಆಗಿದೆ. ಜಗ್ಗೇಶ್ ಇಲ್ಲಿ ಗನ್ ಹಿಡಿದು ಖದರ್ ಆಗಿ ಲುಕ್ ಕೊಟ್ಟಿದ್ದಾರೆ. ಅವರೊಂದಿಗೆ ರಾಕ್ ಲೈನ್ ವೆಂಕಟೇಶ್ ಮತ್ತು ವಸಿಷ್ಟ ಸಿಂಹ ಸಾಥ್ ನೀಡಿದ್ದಾರೆ.

ಈ ಸಿನಿಮಾ ಫಸ್ಟ್ ಲುಕ್ ಮೂಲಕವೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಈಗ ಈ ಸಿನಿಮಾದ ಟೀಸರ್ ಸಹ ಅದನ್ನು ಮುಂದುವರೆಸಿದೆ. ಮೆಲುಕೋಟೆ ಮಂಜ' ಸಿನಿಮಾದ ನಂತರ ಜಗ್ಗೇಶ್ ಈ ಚಿತ್ರವನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಜೂಡಾಸ್ಯಾಂಡಿ ಸಂಗೀತ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಹರಿ ಚರಣ್ ಆರ್ಟ್ ಮತ್ತು ಸಾನ್ವಿ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











