ಜಗ್ಗೇಶ್ '8MM' ಸಿನಿಮಾದ ಟೀಸರ್ ನಾಳೆ ಬಿಡುಗಡೆ
ನಟ ಜಗ್ಗೇಶ್ ಅಭಿನಯದ '8MM' ಸಿನಿಮಾ ಈಗಾಗಲೇ ಫಸ್ಟ್ ಲುಕ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಈಗ ಈ ಸಿನಿಮಾದ ಟೀಸರ್ ಬಿಡುಗಡೆಯಾಗುವ ಸಮಯ ಬಂದಿದೆ. ಚಿತ್ರದ ಮೊದಲ ಟೀಸರ್ ನಾಳೆ ರಿಲೀಸ್ ಆಗುತ್ತಿದೆ.
ಜಗ್ಗೇಶ್ ರವರ ವೃತ್ತಿ ಜೀವನದಲ್ಲಿಯೇ ಇದು ವಿಭಿನ್ನ ಪಾತ್ರ ಅಂತ ಹೇಳಲಾಗಿದೆ. ಒಂದು ಕ್ರೈಂ ಸುತ್ತ ಹೆಣೆದಿರುವ '8MM' ಚಿತ್ರಕ್ಕೆ ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳಲಿದ್ದಾರೆ. ಅಷ್ಟಕ್ಕೂ '8MM' ಎನ್ನುವುದು ಬುಲೆಟ್ ಸೈಜ್ ಆಗಿದೆ. ಜಗ್ಗೇಶ್ ಇಲ್ಲಿ ಗನ್ ಹಿಡಿದು ಖದರ್ ಆಗಿ ಲುಕ್ ಕೊಟ್ಟಿದ್ದಾರೆ. ಅವರೊಂದಿಗೆ ಅತುಲ್ ಕುಲಕರ್ಣಿ ಮತ್ತು ವಸಿಷ್ಟ ಸಿಂಹ ಸಾಥ್ ನೀಡಿದ್ದಾರೆ.

ಅಂದಹಾಗೆ, 'ಮೆಲುಕೋಟೆ ಮಂಜ' ಸಿನಿಮಾದ ನಂತರ ಜಗ್ಗೇಶ್ ಈ ಚಿತ್ರವನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಜೂಡಾಸ್ಯಾಂಡಿ ಸಂಗೀತ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಹರಿ ಚರಣ್ ಆರ್ಟ್ ಮತ್ತು ಸಾನ್ವಿ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
More from Filmibeat
English summary
Kannada Actor Jaggesh starrer new kannada '8MM' movie teaser will be releasing Tomorrow (December 21st)


Click it and Unblock the Notifications











