'ಪದ್ಮಾವತಿ' ವಿವಾದದ ಬೆನ್ನಲ್ಲೇ 'ಪದ್ಮಾವತಿ ಪ್ರತಿಮೆ'ಗೆ ಸಿದ್ದತೆ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರದ ವಿವಾದ ಇನ್ನು ಬಗೆಹರಿದಿಲ್ಲ. ರಾಜಸ್ತಾನ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪದ್ಮಾವತಿ ಚಿತ್ರವನ್ನ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ, 'ರಾಣಿ ಪದ್ಮಾವತಿ' ಪ್ರತಿಮೆ ನಿರ್ಮಿಸಲು ರಾಜಸ್ತಾನ ಸರ್ಕಾರ ಸಿದ್ದತೆ ನಡೆಸಿದೆ.
ರಾಣಿ ಪದ್ಮಾವತಿಯ ಸತಿ ಸಹಗಮನವನ್ನ ಪ್ರದರ್ಶಿಸುವ 9 ಅಡಿಯ ಪ್ರತಿಮೆ ಹಾಗೂ 4 ಅಡಿಯ ಪೀಠ ಸ್ಥಾಪಿಸಲು ಸರ್ಕಾರ ಮುಂದಾಗಿರುವ ಬಗ್ಗೆ ಉದಯಪುರ ಮೇಯರ್ ಚಂದ್ರಸಿಂಗ್ ಪ್ರಕಟಿಸಿದ್ದಾರೆ. ಮುಂದಿನ ವರ್ಷ ರಾಜಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಈ ನಿರ್ಧಾರ ಚರ್ಚೆಗೆ ಕಾರಣವಾಗಿದೆ. ಜೊತೆಗೆ ವೋಟ್ ಬ್ಯಾಂಕಿಂಗ್ ಉದ್ದೇಶ ಇರಬಹುದು ಎಂಬ ಆರೋಪವೂ ಕೇಳಿ ಬರುತ್ತಿದೆ.

ದೀಪಿಕಾ ಅಭಿನಯದ 'ಪದ್ಮಾವತಿ' ಚಿತ್ರದಲ್ಲಿ ರಾಣಿ ಪದ್ಮಾವತಿ ಮತ್ತು ಅಲ್ಲವುದ್ದಿನ್ ಖಿಲ್ಜಿ ನಡುವಿನ ದೃಶ್ಯಗಳಲ್ಲಿ ಪದ್ಮಾವತಿಯನ್ನ ತಪ್ಪಾಗಿ ಬಿಂಬಿಸಲಾಗಿದೆ. ಮತ್ತು ಇತಿಹಾಸವನ್ನ ತಿರುಚಲಾಗಿದೆ ಎಂಬ ಕಾರಣಕ್ಕೆ ರಜಪೂತ ಕರಣಿ ಕಾರ್ಯಕರ್ತರು ವಿರೋದಿಸುತ್ತಿದ್ದಾರೆ. ಸಿನಿಮಾವನ್ನ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡುತ್ತಿದ್ದಾರೆ.
ಸದ್ಯ, ಸೆನ್ಸಾರ್ ಮಂಡಳಿಯಲ್ಲಿರುವ 'ಪದ್ಮಾವತಿ' ಚಿತ್ರ, ಪ್ರಮಾಣಪತ್ರಕ್ಕಾಗಿ ಕಾಯುತ್ತಿದೆ. ಸರ್ಟಿಫಿಕೇಟ್ ಸಿಕ್ಕಿದ ನಂತರ ಪದ್ಮಾವತಿ ಚಿತ್ರದ ಬಿಡುಗಡೆ ದಿನಾಂಕವನ್ನ ಘೋಷಿಸಲು ನಿರ್ಧಾರಿಸಲಾಗಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಜೊತೆ ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











