»   » ಕನ್ನಡ ಚಿತ್ರರಂಗಕ್ಕೆ ಇಂತಹ ದುರ್ಗತಿ ಯಾಕೆ ಬಂತು.?!

ಕನ್ನಡ ಚಿತ್ರರಂಗಕ್ಕೆ ಇಂತಹ ದುರ್ಗತಿ ಯಾಕೆ ಬಂತು.?!

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗದಲ್ಲಿ ಒಳ್ಳೆ ಒಳ್ಳೆ ಚಿತ್ರಗಳು ಬರ್ತಿವೆ. ಹೊಸರೀತಿಯ ಪ್ರಯೋಗಗಳು ಆಗ್ತಿವೆ. ಹೊಸ ಪ್ರತಿಭೆಗಳಿಗೆ ಅವಕಾಶಗಳು ಸಿಕ್ತಿವೆ. ಹೀಗೆ ಚಿತ್ರರಂಗದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಗೆ ಯಾಕೆ ಇಂತಹ ದುಃಸ್ತಿತಿ ಬಂದಿದೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ.!

ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ, ಏನೋ ಸರಿಯಿಲ್ಲ ಅನ್ನೋದು ತಿಳಿದು ಬರ್ತಿದೆ. ವಾರಕ್ಕೆ ಆರೇಳು ಸಿನಿಮಾಗಳು ತೆರೆಗೆ ಬರ್ತಿದ್ವು. ಈ ವಾರ ಅಂದರೆ ಬರುವ ಶುಕ್ರವಾರ ಬರೋಬ್ಬರಿ 9 ಕನ್ನಡ ಸಿನಿಮಾಗಳು ತೆರೆಗೆ ಬರ್ತಿವೆ. ಮುಂದೆ ಓದಿರಿ....

ಆಯ್ಕೆ ಮಾಡಲಾರದೆ ಪ್ರೇಕ್ಷಕ ಗೊಂದಲ

ವಾರಕ್ಕೆ ಐದು-ಆರು ಸಿನಿಮಾಗಳನ್ನ ರಿಲೀಸ್ ಮಾಡುತ್ತಿದ್ದ ನಿರ್ಮಾಪಕರು ಈ ವಾರ ಒಟ್ಟಿಗೆ ಒಂಬತ್ತು ಸಿನಿಮಾಗಳನ್ನ ತೆರೆಗೆ ತರೋದಕ್ಕೆ ಸಿದ್ದವಾಗಿದ್ದಾರೆ. ಈ ಪೈಪೋಟಿಯಲ್ಲಿ ಹೊಸಬರು ಹಾಗೂ ಹಳಬರು ಎಲ್ಲರೂ ಸೇರಿಕೊಂಡಿದ್ದಾರೆ.

ಕಣ್ಮರೆಯಾಗುತ್ತೆ ಚಿಕ್ಕ ಸಿನಿಮಾ

'ಉಪೇಂದ್ರ ಮತ್ತೆ ಬಾ', 'ಕೆಂಪಿರ್ವೆ', 'ಮಹಾನುಭಾವರು', 'ನನ್ ಮಗಳೇ ಹೀರೋಯಿನ್', 'ಹಿಲ್ ಟನ್', 'ಪಾನಿಪೂರಿ', 'ಕಾವೇರಿ ತೀರದ ಚರಿತ್ರೆ', 'ದಾರಿ ತಪ್ಪಿದ ಮಗ', 'ಆ ಸೂ ಚ ಭೂ'..... ಇಷ್ಟು ಸಿನಿಮಾಗಳು ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರ್ತಿವೆ. ಇವುಗಳಲ್ಲಿ ಪ್ರಚಾರ ಮಾಡಿ ಗುರುತಿಸಿಕೊಂಡಿರುವ ಮೂರ್ನಾಲ್ಕು ಸಿನಿಮಾಗಳಿಗೆ ಥಿಯೇಟರ್ ಕನ್ಫರ್ಮ್ ಆಗಿದೆ. ಮಿಕ್ಕ ಸಿನಿಮಾಗಳ ಗತಿ ಯಾರಿಗೂ ಗೊತ್ತಿಲ್ಲ.

ವರ್ಷದ ಅಂತ್ಯಕ್ಕೆ ಭಯ

ಈ ಹಿಂದೆಯೂ ಹೀಗೆ ಸಿನಿಮಾಗಳ ಸುರಿಮಳೆ ಆಗುತ್ತಿತ್ತು. ಪ್ರೇಕ್ಷಕ ಕೂಡ ಯಾವ ಸಿನಿಮಾ ನೋಡಬೇಕು ಎನ್ನುವ ಆಯ್ಕೆ ಮಾಡಿಕೊಳ್ಳಲಾಗದೆ ಮನೆಯಲ್ಲಿಯೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ತಲೆ ಕೆಡಿಸಿಕೊಳ್ಳದೆ ಸುಮ್ಮನಿದೆ.

ಪ್ರತಿ ವರ್ಷವೂ ಇದೇ ರೀತಿ

ಡಿಸೆಂಬರ್ ಸ್ಟಾರ್ಟ್ ಆಯ್ತು ಅಂದ್ರೆ ಸ್ಟಾರ್ ಚಿತ್ರಗಳು ತೆರೆಗೆ ಬರೋದಕ್ಕೆ ಸಿದ್ದವಾಗುತ್ತೆ. ಅಂತಹ ಸಮಯದಲ್ಲಿ ಚಿಕ್ಕಪುಟ್ಟ ಸಿನಿಮಾಗಳನ್ನ ರಿಲೀಸ್ ಮಾಡೋದಕ್ಕೆ ತೊಂದರೆ ಆಗುತ್ತೆ. ಹಾಗಾಗಿ ಸಾಲು ಸಾಲು ಚಿತ್ರಗಳು ತೆರೆಗೆ ಬರ್ತಿದೆ. ಇನ್ನಾದರೂ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಚಿತ್ರ ಬಿಡುಗಡೆಗೆ ಮಾನದಂಡ ರೂಪಿಸಿದ್ರೆ ಎಲ್ಲಾ ಸಿನಿಮಾಗಳು ಪ್ರೇಕ್ಷಕರ ಗಮನಕ್ಕೆ ಬರುವಂತಾಗುತ್ತೆ.

English summary
9 Kannada Movies are releasing on 17th November.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada