»   » ತಮಿಳಿಗೆ ಜಸ್ಟ್ ಮಾತ್ ಮಾತಲ್ಲಿ ಸುದೀಪ್, ರಮ್ಯಾ

ತಮಿಳಿಗೆ ಜಸ್ಟ್ ಮಾತ್ ಮಾತಲ್ಲಿ ಸುದೀಪ್, ರಮ್ಯಾ

Posted By:
Subscribe to Filmibeat Kannada

ನೆರೆಯ ತೆಲುಗು, ತಮಿಳು ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವುದೇನು ದೊಡ್ಡ ಸುದ್ದಿಯಲ್ಲ ಬಿಡಿ. ಆದರೆ ಕನ್ನಡದ ಚಿತ್ರಗಳು ಪರಭಾಷೆಯಲ್ಲಿ ಸದ್ದು ಮಾಡುವುದಿದೆಯಲ್ಲಾ ಅದು ಕನ್ನಡ ಚಿತ್ರಗಳ ಮಟ್ಟಿಗೆ ನಿಜವಾದ ಸುದ್ದಿ ಎನ್ನಬಹುದು. ಇದರಿಂದ ನೆರೆ ರಾಜ್ಯಗಳಲ್ಲೂ ಕನ್ನಡ ಚಿತ್ರಗಳಿಗೂ ಮಾರ್ಕೆಟ್ ಇದೆ ಎಂಬುದು ಗೊತ್ತಾಗುತ್ತದೆ.

ವಿಷಯ ಇಷ್ಟೆ, ಕಿಚ್ಚ ಸುದೀಪ್ ನಿರ್ದೇಶಿಸಿ ನಟಿಸಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರ ತಮಿಳು ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ತಮಿಳುನಾಡಿನಲ್ಲೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ ಎಂಬುದು ಪ್ರಾಥಮಿಕ ಸುದ್ದಿ.

ಈ ಚಿತ್ರದ ನಾಯಕಿ ರಮ್ಯಾ ಈಗಾಗಲೆ ಹಲವಾರು ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವುದು, ಕಿಚ್ಚ ಸುದೀಪ್ ಸಹ ತೆಲುಗು ಚಿತ್ರಗಳಲ್ಲಿ ಮಿಂಚುತ್ತಿರುವ ಕಾರಣಕ್ಕೋ ಏನೋ ಈ ಚಿತ್ರ ಈಗ ತಮಿಳಿಗೆ ಡಬ್ ಆಗಿ ಸದ್ದು ಮಾಡಲು ಹೊರಟಿದೆ.

2010ರಲ್ಲಿ ಬಿಡುಗಡೆಯಾದ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರ ಎರಡು ವರ್ಷಗಳ ಬಳಿಕ ತಮಿಳಿಗೆ ಡಬ್ ಆಗಿದೆ. ಈ ಬಗ್ಗೆ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ನನ್ನ ವೃತ್ತಿ ಜೀವನದಲ್ಲಿ ವಿಶೇಷ ಚಿತ್ರ ಎಂದಿದ್ದಾರೆ ಸುದೀಪ್. (ಒನ್‌ಇಂಡಿಯಾ ಕನ್ನಡ)

English summary
Sudeep and Ramya lead Kannada movie Just Math Mathalli has been dubbed in Tamil. Sudeep tweets, Jmm got dubbed to tamil…feltttt realyyyy gud hearing tat….been a very special film fr me
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada