ನಿಮ್ಮಿಂದಲೇ ನಾನು ; ಕಿರಿಕ್ ಪಾರ್ಟಿಗೆ 9 ವರ್ಷ- ರಶ್ಮಿಕಾ ಮಂದಣ್ಣಗೆ ನೆನಪಾಗಲಿಲ್ಲ ರಕ್ಷಿತ್ ಮತ್ತು ರಿಷಬ್

''ಕಿರಿಕ್ ಪಾರ್ಟಿ'' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ರಶ್ಮಿಕಾ ಮಂದಣ್ಣ, ಆ ನಂತರ.. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ನ್ಯಾಷನಲ್ ಕ್ರಷ್ ಆದರು. ಬೆರಳಣಿಕೆಯ ದಿನಗಳಲ್ಲಿಯೇ ಬಹುಬೇಡಿಕೆಯ ನಾಯಕಿಯಾಗಿ ಬೆಳೆದರು. ರಶ್ಮಿಕಾ ಮಂದಣ್ಣ ಅವರ ಈ ಸಾಧನೆ ನಿಜಕ್ಕೂ ಮೆಚ್ಚುವಂತಹದ್ದೇ. ಆದರೆ.. ಚೊಚ್ಚಲ ಚಿತ್ರದಲ್ಲಿಯೇ ಸಿಕ್ಕ ಅಭೂತಪೂರ್ವ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ..

ಉಪಯೋಗ ಮಾಡಿ ಬೇರೆ ಭಾಷೆಯ ಪಾಲಾದ ರಶ್ಮಿಕಾ ಆ ನಂತರ ಕನ್ನಡವನ್ನು ತಾತ್ಸಾರ ಮಾಡಲು ಶುರು ಮಾಡಿದರು. ಯಶ್ ಬಗ್ಗೆ ಆರಂಭದಲ್ಲಿ ಹಗುರವಾಗಿ ಮಾತನಾಡಿದ್ದ ರಶ್ಮಿಕಾ ತೆಲುಗಿನಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತಿದ್ದಂತೆಯೇ ಮನಸಾರೆ ಮೆಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಅವರನ್ನು ಎಡಗಾಲಿನಲ್ಲಿ ಒದ್ದರು.

9 Years of Rashmika Mandanna A Grateful Note to Fans But Silence for Rakshit Shetty

ಮಾಡಿದವರ ಪಾಪ ಆಡಿದವರ ಬಾಯಿಗೆ.. ಇರಲಿ..ಆದರೆ, 09 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿ ಕರೆತಂದು ಅವಕಾಶ ನೀಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಇದೇ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಎನ್ನುವುದನ್ನು ಯಾರು ಅಲ್ಲಗೆಳೆಯಲು ಸಾಧ್ಯ ಇಲ್ಲ.

ಆದರೂ ಕೂಡ ರಶ್ಮಿಕಾ ಈ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಸು ಈ ಕ್ಷಣಕ್ಕೂ ಇದ್ದಂತಿಲ್ಲ. ಇದಕ್ಕೆ ಪುರಾವೆ ಎಂಬಂತೆ ಸದ್ಯ ರಶ್ಮಿಕಾ ಮಂದಣ್ಣ ತಮ್ಮ 9 ವರ್ಷಗಳ ಸುದೀರ್ಘ ಪ್ರಯಾಣವನ್ನೊಮ್ಮೆ ಹಿಂದೆ ತಿರುಗಿ ನೋಡಿದ್ದಾರೆ. ಆದರೆ, ಅಲ್ಲಿ ರಿಷಬ್ ಶೆಟ್ಟಿಯವರ ಹೆಸರು ಇಲ್ಲ. ರಕ್ಷಿತ್ ಶೆಟ್ಟಿಯ ಸುಳಿವು ಇಲ್ಲ. ಹೋಗಲಿ ಕೊನೆ ಪಕ್ಷ ಕಿರಿಕ್ ಪಾರ್ಟಿ ಹೆಸರಾದರೂ ಇದೆಯಾ ಅಂದರೆ ಅದು ಇಲ್ಲ.

ಹೌದು, ''ಕಿರಿಕ್ ಪಾರ್ಟಿ'' ಚಿತ್ರಕ್ಕೆ 9 ವರ್ಷವಾದ ಹಿನ್ನೆಲೆ, ನಿನ್ನೆ (ಡಿಸೆಂಬರ್ 30) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರಹವನ್ನು ಹಂಚಿಕೊಂಡಿದ್ದಾರೆ. 9 ವರ್ಷ.. 26 ಸಿನಿಮಾ... ಈ ಪ್ರಯಾಣವೇ ನನಗೆ ಅಚ್ಚರಿ ಎಂದು ಹೇಳಿರುವ ರಶ್ಮಿಕಾ, ಈ 26 ಸಿನಿಮಾ ನನಗೆ ಕೇವಲ ಕೆಲಸ ಆಗಿರಲಿಲ್ಲ ಎಂದು ಹೇಳಿದ್ದಾರೆ. ಈ ದಾರಿಯಲ್ಲಿ ನಾನು ನನ್ನ ಕುಟುಂಬ ಕಂಡುಕೊಂಡೆ, ಈ 9 ವರ್ಷಗಳಲ್ಲಿ ಪ್ರೀತಿ.. ತಾಳ್ಮೆ.. ನಂಬಿಕೆ.. ಚಿಕ್ಕ ಚಿಕ್ಕ ಸಂತೋಷದ ಕ್ಷಣ ಇರಲಿ.. ದೊಡ್ಡ ದೊಡ್ಡ ಸಂಭ್ರಮ ಇರಲಿ.. ಸಂತೋಷ, ಹೆಮ್ಮೆ, ಮತ್ತು ಕೃತಜ್ಞತೆಯಿಂದ ನನ್ನ ಹೃದಯ ತುಂಬಿದೆ ಎಂದು ಹೇಳಿರುವ ರಶ್ಮಿಕಾ ಮಂದಣ್ಣ ನಿಮ್ಮೆಲ್ಲರ ಪ್ರೀತಿಯಿಂದ ಕೂಡಿದ ಸಂದೇಶಗಳನ್ನು ಓದಿ, ಪೋಸ್ಟ್‌ಗಳನ್ನು ನೋಡಿ ನನಗೆ ತುಂಬಾ ಸಂತೋಷವಾಯ್ತು ಎಂದಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ.. ನನ್ನ ಕಲಿಕೆಯ ಸಮಯದಲ್ಲಿ.. ನನ್ನ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ನನ್ನ ಜೊತೆ ನಿಂತಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಮುಂದುವರೆದು ಈ 9 ವರ್ಷ ನಾನು ಹೇಗೆ ಬದುಕಿದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿರುವ ರಶ್ಮಿಕಾ ಮಂದಣ್ಣ, ನಿಮ್ಮಿಂದಲೇ ನಾನು ಬದುಕಿದ್ದು, ನನ್ನನ್ನು ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದ.. ನನ್ನನ್ನು ಇಷ್ಟೊಂದು ಪ್ರೀತಿಸಿದ್ದಕ್ಕೆ ಧನ್ಯವಾದ.. ನನ್ನನ್ನೂ ಬೆಂಬಲಿಸಿದ್ದಕ್ಕೆ ಧನ್ಯವಾದ.. ಎಂಧು ಹೇಳಿದ್ದಾರೆ. ನಮ್ಮ ಸಂಬಂಧ ಕೇವಲ ನಟಿ ಮತ್ತು ಅಭಿಮಾನ ಮಾತ್ರವಲ್ಲ ನೀವೆಲ್ಲರು ನನ್ನ ಕುಟುಂಬ, ಈ ಬಂಧ ಜೀವನ ಪರ್ಯಂತ ಇರಲಿ ಎಂದು ಹೇಳಿರುವ ರಶ್ಮಿಕಾ ನಿಮ್ಮೆಲ್ಲರಿಗೆ ಇನ್ನೂ ಹೆಚ್ಚು ಹೆಮ್ಮೆಯಾಗುವಂತೆ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಈ ಪೋಸ್ಟ್‌ನಲ್ಲಿ ಅಪ್ಪಿ ತಪ್ಪಿಯೂ ''ಕಿರಿಕ್ ಪಾರ್ಟಿ'' ಹೆಸರಾಗಲಿ ರಕ್ಷಿತ್ ಅಥವಾ ರಿಷಬ್ ಹೆಸರಾಗಲಿ ನಮೂದಿಸದೇ ತಮ್ಮ 9 ವರ್ಷಗಳ ಪ್ರಯಾಣವನ್ನು ಈ ಮೂಲಕ ಮೆಲುಕು ಹಾಕಿದ್ದಾರೆ.

9 Years of Rashmika Mandanna A Grateful Note to Fans But Silence for Rakshit Shetty

ಇನ್ನು ಇದೇ ಸಮಯದಲ್ಲಿ ಅವಕಾಶ ನೀಡಿದ ತಪ್ಪಿಗೆ ರಶ್ಮಿಕಾ ಹೆಸರೇಳಿಕೊಂಡು ಕೆಲ ಅಂಧಾಭಿಮಾನಿಗಳು ರಕ್ಷಿತ್ ಮತ್ತು ರಿಷಬ್ ಶೆಟ್ಟಿಯವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಒಡೆತನದ ರೌಡಿ ಬ್ರ್ಯಾಂಡ್‌ನ ಬಟ್ಟೆ.. ನಿಶ್ವಿತಾರ್ಥದ ಉಂಗುರ ಹಾಕಿಕೊಂಡು ಧನ್ಯವಾದವನ್ನು ಹೇಳಿದ ನಿಮಗೆ ಧನ್ಯವಾದ ಎಂದು ರಶ್ಮಿಕಾಗೆ ಹೇಳುತ್ತಿರುವ ಕೆಲವರು ನಿಮ್ಮ ಈ ನಗು ಮತ್ತು ಯಶಸ್ಸೇ ಬಮ್ಮ ಬಹುದೊಡ್ಡ ಸೇಡು ಎಂದಿದ್ದಾರೆ. ''ದಿ ಗರ್ಲ್‌ಫ್ರೆಂಡ್‌'' ಚಿತ್ರದ ಕ್ಲೈಮ್ಯಾಕ್ಸ್‌ನ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಜೀವಮಾನವಿಡೀ ನೆನಪಿಡುತ್ತಾರೆ ಎಂದು ಟ್ವಿಟ್ ಮಾಡುತ್ತಿದ್ದಾರೆ.

9 Years of Rashmika Mandanna A Grateful Note to Fans But Silence for Rakshit Shetty

More from Filmibeat

English summary
From Kirik Party to National Crush: Rashmika Mandanna celebrates 9 years in film. Read her heartfelt tribute to fans and why she left out her debut team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X