»   » ವಿಶ್ವತಾಯಂದಿರ ದಿನಕ್ಕೆ 92.7 ಬಿಗ್ ಎಫ್ಎಂ ಕೇಳುಗರಿಗೆ ವಿಶೇಷ ಕೊಡುಗೆ!

ವಿಶ್ವತಾಯಂದಿರ ದಿನಕ್ಕೆ 92.7 ಬಿಗ್ ಎಫ್ಎಂ ಕೇಳುಗರಿಗೆ ವಿಶೇಷ ಕೊಡುಗೆ!

Posted By:
Subscribe to Filmibeat Kannada

ನಾಳೆಯ ವಿಶೇಷತೆ ಬಗ್ಗೆ ಎಷ್ಟು ಜನರಿಗೆ ನೆನಪಿದೆಯೋ.. ಇಲ್ಲವೋ ಗೊತ್ತಿಲ್ಲಾ. ಆದರೆ ನಾಳೆಯ ವಿಶೇಷತೆ ಅಂಗವಾಗಿ 92.7 ಬಿಗ್ ಎಫ್ಎಂ ಕೇಳುಗರಿಗೆ ವಿಶಿಷ್ಟವಾದ ಕೊಡುಗೆಯಂತು ಖಂಡಿತವಾಗಿ ಇದೆ.

ನಾಳೆ(ಮೇ 14) ವಿಶ್ವತಾಯಂದಿರ ದಿನ. ತಾಯಿಯ ಸ್ಥಾನದ ಅಧ್ಯಮ್ಯ ಚೇತನದ ಸ್ಫೂರ್ತಿಯನ್ನು ಪರಿಚಯಿಸುವ ಮಹತ್ತರಗುರಿಯನ್ನು ಮುಂದಿಟ್ಟುಕೊಂಡು, ಈ ದಿನದ ಅಂಗವಾಗಿ ಪ್ರಶಸ್ತಿ ವಿಜೇತ ನಿರ್ದೇಶಕಿ ರೂಪ ಅಯ್ಯರ್ ರವರ ಧ್ವನಿಯಲ್ಲಿ 92.7 ಬಿಗ್ ಎಫ್ಎಂ ರೇಡಿಯೋ "ಅಮ್ಮನ ಕನಸು' ಎಂಬ ಚಲನಚಿತ್ರವನ್ನು ನಿರಂತರವಾಗಿ ಎರಡು ಗಂಟೆಗಳ ಕಾಲ ಪ್ರಸಾರ ಮಾಡಲಿದೆ.

92.7 Big FM Brings its Radio Feature Film 'Ammana Kanasu' on Mother's Day

'ಅಮ್ಮನ ಕನಸು' ಚಿತ್ರದಲ್ಲಿ ಕನ್ನಡದ ಜನಪ್ರಿಯ ನಟಿ ಪದ್ಮಜ ರಾವ್ ರವರು ಅಭಿನಯಿದ್ದಾರೆ. ಈ ಚಿತ್ರದ ಮೂಲಕ 92.7 ಬಿಗ್ ಎಫ್ಎಂ ಚಲನಚಿತ್ರ ಪ್ರಸಾರದತ್ತ ಮತ್ತೆ ಕಾಲಿರಿಸುತ್ತಿದೆ. ಈ ಹಿಂದೆ ಬಿಗ್ ಎಫ್‌ಎಂ ರೇಡಿಯೋ ಮೊದಲ ಬಾರಿಗೆ ಹೆಣ್ಣು ಮಗಳಿಗೆ ಶಿಕ್ಷಣ ಕೊಡಿಸುವ ತಾಯಿಯ ಮಹತ್ವದ ಪಾತ್ರ ವಿವರಿಸುವ ಚಿತ್ರವನ್ನು ಪ್ರಸಾರ ಮಾಡಿತ್ತು.

'ಅಮ್ಮನ ಕನಸು' ಚಿತ್ರ ನಾಳೆ (ಮೇ 14) 92.7 ಬಿಗ್ ಎಫ್‌ಎಂ ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿರಂತರವಾಗಿ ಪ್ರಸಾರವಾಗಲಿದೆ. ಸಂಜೆ 7 ಗಂಟೆಗೆ ಚಿತ್ರ ಮರುಪ್ರಸಾರವಾಗಲಿದೆ. ಚಿತ್ರವು ನಿರ್ದೇಶಕಿ ರೂಪಾ ಅಯ್ಯರ್ ಅವರ ಧ್ವನಿಯಲ್ಲಿ ಮೂಡಿಬರಲಿದ್ದು, ಮಕ್ಕಳಿಗಾಗಿ ಹೆಣಗಾಡುವ ತಾಯಿಯ ಸ್ಫೂರ್ತಿದಾಯಕ ಪ್ರಯತ್ನಗಳ ಕುರಿತು ಭಾವನಾತ್ಮಕವಾಗಿ ತಮ್ಮ ಮಾತುಗಳನ್ನು ಕಟ್ಟಿಕೊಡಲಿದ್ದಾರೆ.

92.7 Big FM Brings its Radio Feature Film 'Ammana Kanasu' on Mother's Day

ವಿಶ್ವತಾಯಂದಿರ ದಿನದ ಮಹತ್ವವನ್ನು ಸಾರುವ ಮತ್ತು ತಾಯಿಯನ್ನು ಸದಾ ಎಲ್ಲರ ನೆನಪಿನಲ್ಲಿ ಇರುವಂತೆ ಮಾಡುವುದು ಬಿಗ್‌ ಎಫ್‌ಎಂ ನ ಈ ವಿಶೇಷ ಕೊಡುಗೆಯ ಉದ್ದೇಶವಾಗಿದೆ. ಅಲ್ಲದೇ ತಾಯಂದಿರ ಬದುಕಿನ ಪಥದ ಸತ್ಯದ ಅರಿವು ಮಾಡಿಕೊಡುವ, ತಾಯಿ ತನ್ನ ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ಹೋರಾಡುವ ವಿಷಯವನ್ನು ಆಧರಿಸಿ 'ಅಮ್ಮನ ಕನಸು' ಚಿತ್ರ ಪ್ರಸಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಮಾಜಿಕ ಕಳಕಳಿಯ ವಿಚಾರಗಳ ಕುರಿತು ಕೂಡ ಜನರನ್ನು ಜಾಗೃತಗೊಳಿಸುವ ಪ್ರಮುಖ ಸಂದೇಶವನ್ನು ಕೇಳುಗರಿಗೆ 92.7 ಬಿಗ್ ಎಫ್‌ಎಂ ರವಾನಿಸುತ್ತಿದೆ.

English summary
92.7 Big FM Brings its Radio Feature Film 'Ammana Kanasu' on Mother's Day in the Voice of Award Winning Director Roopa Iyer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada