Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಶ್ವತಾಯಂದಿರ ದಿನಕ್ಕೆ 92.7 ಬಿಗ್ ಎಫ್ಎಂ ಕೇಳುಗರಿಗೆ ವಿಶೇಷ ಕೊಡುಗೆ!
ನಾಳೆಯ ವಿಶೇಷತೆ ಬಗ್ಗೆ ಎಷ್ಟು ಜನರಿಗೆ ನೆನಪಿದೆಯೋ.. ಇಲ್ಲವೋ ಗೊತ್ತಿಲ್ಲಾ. ಆದರೆ ನಾಳೆಯ ವಿಶೇಷತೆ ಅಂಗವಾಗಿ 92.7 ಬಿಗ್ ಎಫ್ಎಂ ಕೇಳುಗರಿಗೆ ವಿಶಿಷ್ಟವಾದ ಕೊಡುಗೆಯಂತು ಖಂಡಿತವಾಗಿ ಇದೆ.
ನಾಳೆ(ಮೇ 14) ವಿಶ್ವತಾಯಂದಿರ ದಿನ. ತಾಯಿಯ ಸ್ಥಾನದ ಅಧ್ಯಮ್ಯ ಚೇತನದ ಸ್ಫೂರ್ತಿಯನ್ನು ಪರಿಚಯಿಸುವ ಮಹತ್ತರಗುರಿಯನ್ನು ಮುಂದಿಟ್ಟುಕೊಂಡು, ಈ ದಿನದ ಅಂಗವಾಗಿ ಪ್ರಶಸ್ತಿ ವಿಜೇತ ನಿರ್ದೇಶಕಿ ರೂಪ ಅಯ್ಯರ್ ರವರ ಧ್ವನಿಯಲ್ಲಿ 92.7 ಬಿಗ್ ಎಫ್ಎಂ ರೇಡಿಯೋ "ಅಮ್ಮನ ಕನಸು' ಎಂಬ ಚಲನಚಿತ್ರವನ್ನು ನಿರಂತರವಾಗಿ ಎರಡು ಗಂಟೆಗಳ ಕಾಲ ಪ್ರಸಾರ ಮಾಡಲಿದೆ.
'ಅಮ್ಮನ ಕನಸು' ಚಿತ್ರದಲ್ಲಿ ಕನ್ನಡದ ಜನಪ್ರಿಯ ನಟಿ ಪದ್ಮಜ ರಾವ್ ರವರು ಅಭಿನಯಿದ್ದಾರೆ. ಈ ಚಿತ್ರದ ಮೂಲಕ 92.7 ಬಿಗ್ ಎಫ್ಎಂ ಚಲನಚಿತ್ರ ಪ್ರಸಾರದತ್ತ ಮತ್ತೆ ಕಾಲಿರಿಸುತ್ತಿದೆ. ಈ ಹಿಂದೆ ಬಿಗ್ ಎಫ್ಎಂ ರೇಡಿಯೋ ಮೊದಲ ಬಾರಿಗೆ ಹೆಣ್ಣು ಮಗಳಿಗೆ ಶಿಕ್ಷಣ ಕೊಡಿಸುವ ತಾಯಿಯ ಮಹತ್ವದ ಪಾತ್ರ ವಿವರಿಸುವ ಚಿತ್ರವನ್ನು ಪ್ರಸಾರ ಮಾಡಿತ್ತು.
'ಅಮ್ಮನ ಕನಸು' ಚಿತ್ರ ನಾಳೆ (ಮೇ 14) 92.7 ಬಿಗ್ ಎಫ್‌ಎಂ ನಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಿರಂತರವಾಗಿ ಪ್ರಸಾರವಾಗಲಿದೆ. ಸಂಜೆ 7 ಗಂಟೆಗೆ ಚಿತ್ರ ಮರುಪ್ರಸಾರವಾಗಲಿದೆ. ಚಿತ್ರವು ನಿರ್ದೇಶಕಿ ರೂಪಾ ಅಯ್ಯರ್ ಅವರ ಧ್ವನಿಯಲ್ಲಿ ಮೂಡಿಬರಲಿದ್ದು, ಮಕ್ಕಳಿಗಾಗಿ ಹೆಣಗಾಡುವ ತಾಯಿಯ ಸ್ಫೂರ್ತಿದಾಯಕ ಪ್ರಯತ್ನಗಳ ಕುರಿತು ಭಾವನಾತ್ಮಕವಾಗಿ ತಮ್ಮ ಮಾತುಗಳನ್ನು ಕಟ್ಟಿಕೊಡಲಿದ್ದಾರೆ.

ವಿಶ್ವತಾಯಂದಿರ ದಿನದ ಮಹತ್ವವನ್ನು ಸಾರುವ ಮತ್ತು ತಾಯಿಯನ್ನು ಸದಾ ಎಲ್ಲರ ನೆನಪಿನಲ್ಲಿ ಇರುವಂತೆ ಮಾಡುವುದು ಬಿಗ್ ಎಫ್‌ಎಂ ನ ಈ ವಿಶೇಷ ಕೊಡುಗೆಯ ಉದ್ದೇಶವಾಗಿದೆ. ಅಲ್ಲದೇ ತಾಯಂದಿರ ಬದುಕಿನ ಪಥದ ಸತ್ಯದ ಅರಿವು ಮಾಡಿಕೊಡುವ, ತಾಯಿ ತನ್ನ ಮಕ್ಕಳ ಕನಸುಗಳನ್ನು ಸಾಕಾರಗೊಳಿಸಲು ಹೋರಾಡುವ ವಿಷಯವನ್ನು ಆಧರಿಸಿ 'ಅಮ್ಮನ ಕನಸು' ಚಿತ್ರ ಪ್ರಸಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಾಮಾಜಿಕ ಕಳಕಳಿಯ ವಿಚಾರಗಳ ಕುರಿತು ಕೂಡ ಜನರನ್ನು ಜಾಗೃತಗೊಳಿಸುವ ಪ್ರಮುಖ ಸಂದೇಶವನ್ನು ಕೇಳುಗರಿಗೆ 92.7 ಬಿಗ್ ಎಫ್‌ಎಂ ರವಾನಿಸುತ್ತಿದೆ.