For Quick Alerts
  ALLOW NOTIFICATIONS  
  For Daily Alerts

  ಬರ್ತಿದೆ ಅರ್ಜುನ್ ಜನ್ಯ ಸಂಗೀತದ 100ನೇ ಚಿತ್ರದ ಮೊದಲ ಹಾಡು

  |

  ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಕನ್ನಡದ ಟಾಪ್ ಒನ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಹೊಡೆಯುವ ರೀತಿ ಅರ್ಜುನ್ ಸಹ ಶತಕದ ಬಾಗಿಲಿನಲ್ಲಿ ಇದ್ದಾರೆ.

  '99' ಸಿನಿಮಾ ಅರ್ಜುನ್ ಜನ್ಯ ಅವರ ನೂರನೇ ಸಂಗೀತ ನಿರ್ದೇಶನದ ಸಿನಿಮಾವಾಗಿದೆ. ಈ ಸಿನಿಮಾದ ಮೊದಲ ಹಾಡು ನಾಳೆ (ಮಾರ್ಚ್ 4) ರಿಲೀಸ್ ಆಗುತ್ತಿದೆ. ಶಿವರಾತ್ರಿ ಹಬ್ಬದ ವಿಶೇಷವಾಗಿ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗುತ್ತಿದೆ.

  ಸೆಂಚುರಿ ಹೊಡೆದ ಅರ್ಜುನ್ ಜನ್ಯ : ಯಾವುದು 100ನೇ ಸಿನಿಮಾ?

  ಸಿನಿಮಾದ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಈಗಾಗಲೇ, ಜನ್ಯ ಹಾಗೂ ವಿಜಯ್ ಪ್ರಕಾಶ್ ಕಾಂಬಿನೇಶನ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳು ಬಂದಿದ್ದು, ಈ ಚಿತ್ರದಲ್ಲಿಯೂ ಈ ಜೋಡಿ ಒಂದಾಗಿದೆ. ಕವಿರಾಜ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

  '99' ಸಿನಿಮಾ '96' ತಮಿಳು ಚಿತ್ರದ ರಿಮೇಕ್ ಆಗಿದೆ. ಗಣೇಶ್, ಭಾವನ, ಸಮೀಕ್ಷಾ, ಹೇಮಂತ್ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್ ನಲ್ಲಿ ವಿಜಯ್ ಸೇತುಪತಿ ಹಾಗೂ ತ್ರಿಷಾಗೆ ಈ ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತ್ತು.

  '99' ಚಿತ್ರದ ತ್ರಿಷಾ ಪಾತ್ರಕ್ಕೆ ಈಕೆಯೇ ನಾಯಕಿ

  ಅಂದಹಾಗೆ, ರಾಮು ಚಿತ್ರದ ನಿರ್ಮಾಣ ಮಾಡುತ್ತಿದ್ದು, ಪ್ರೀತಮ್ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ.

  English summary
  Kananda actor Ganesh andd Bhavana's '99' kannada movie 1st song will be releasing tomorrow. '99' is a remake of tamil movie '96'. This is Arjun Janya's 100th movie. The movie is directing by Preetham Gubbi and producing by Ramu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X