'99' ಸಿನಿಮಾದ ಬಿಡುಗಡೆ ದಿನಾಂಕ ನಿಗದಿ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '99' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸಿನಿಮಾವನ್ನು ಇದೇ ತಿಂಗಳು (ಏಪ್ರಿಲ್) ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ.
'99' ಸಿನಿಮಾ ಏಪ್ರಿಲ್ 26 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಏಪ್ರಿಲ್ 23ಕ್ಕೆ ಲೋಕಸಭಾ ಚುನಾವಣೆ ಮುಗಿಯಲಿದ್ದು, ಅದೇ ವಾರ ಸಿನಿಮಾ ಚಿತ್ರಮಂದಿರಕ್ಕೆ ಆಗಮಿಸುತ್ತಿದೆ.
ಈ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರವಾದ '96' ರಿಮೇಕ್ ಆಗಿದೆ. ಗಣೇಶ್, ಭಾವನ, ಸಮಿಕ್ಷಾ ಹಾಗೂ ಹೇಮಂತ್ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರೀತಮ್ ಗುಬ್ಬಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಮು ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದು, ಹಾಡುಗಳು ಗಮನ ಸೆಳೆದಿವೆ. ಇದು ಅವರ ನೂರನೇ ಸಿನಿಮಾವಾಗಿದೆ.'99' ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದ್ದು, ಪ್ರೇಕ್ಷಕರು ಸಿನಿಮಾ ನೋಡಿ ಏನು ಹೇಳುತ್ತಾರೋ.
More from Filmibeat
English summary
Actor Ganesh and Bhavana's '99' kannada movie will be releasing on april 26th. The movie is remake of '96' movie.


Click it and Unblock the Notifications











