ಗಣೇಶ್ ಗೆ ಒಂದು ಆಸೆ: ಈ ಹಾಡನ್ನ ನಿಮಗೆ ಕೇಳಿಸಬೇಕಂತೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದ ಈ ಹಾಡಿನಿಂದ ಗಮನ ಸೆಳೆಯುತ್ತಿದೆ. ಈಗಾಗಲೇ ಚಿತ್ರದ ಬ್ಯೂಟಿಫುಲ್ ಮೇಕಿಂಗ್ ಚಿತ್ರಗಳು ಬಹಿರಂಗವಾಗಿದ್ದು, ಈ ಚಿತ್ರವನ್ನ ನೋಡಲೇಬೇಕು ಎಂದು ಕಾಯುವಂತಾಗಿದೆ.

ಈ ಮಧ್ಯೆ 99 ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಸಂಗೀತ ಪ್ರಿಯರ ಮನಮುಟ್ಟಿದೆ. ಈಗ ಮೂರನೇ ಹಾಡಿನ ಸಮಯ. ಸ್ವತಃ ಗಣೇಶ್ ಅವರಿಗೆ ಈ ಹಾಡು ತುಂಬಾ ಇಷ್ಟ ಆಗಿರಬೇಕು. ಅದಕ್ಕೆ ನಿಮಗೂ 'ಈ ಹಾಡನ್ನ ಆದಷ್ಟೂ ಬೇಗ ಕೇಳಿಸಬೇಕು ಎಂಬ ಆಸೆ ನನಗೆ'' ಎಂದು ಟ್ವೀಟ್ ಮಾಡಿದ್ದಾರೆ.

ಗಣೇಶ್ ಅವರ ಇಷ್ಟದ ಹಾಡು ಮಾರ್ಚ್ 18 ರಂದು ಬಿಡುಗಡೆಯಾಗುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಸಂಜೆ 4 ಗಂಟೆಗೆ 'ಅನಿಸುತ್ತಿದೆ.....' ಎಂಬ ಹಾಡು ರಿಲೀಸ್ ಆಗುತ್ತಿದೆ.

99 movie 3rd song will release on march 18th

ಅನಿಸುತ್ತಿದೆ ಎಂದಾಕ್ಷಣ ನಮಗೆ ನೆನಪಾಗುವುದು ಇದೇ ಗಣೇಶ್ ಅಭಿನಯದ ಮುಂಗಾರುಮಳೆ ಸಿನಿಮಾ. ಈ ಚಿತ್ರದಲ್ಲಿ ಬರುವ ಅನಿಸುತ್ತಿದೆ ಹಾಡು ಆಲ್ ಟೈಮ ಹಿಟ್ ಮತ್ತು ಎಲ್ಲರಿಗೂ ಫೇವರೆಟ್. ಹಾಗಾಗಿ, ಆ ಹಾಡಿನ ರೀತಿ ಈ ಹಾಡು ಕೂಡ ಸಕ್ಸಸ್ ಆಗಬಹುದು ಎಂಬ ನಿರೀಕ್ಷೆ ಇದೆ.

ಇನ್ನುಳಿದಂತೆ 99 ಸಿನಿಮಾ ತಮಿಳಿನ 96 ಚಿತ್ರದ ರೀಮೇಕ್. ವಿಜಯ್ ಸೇತುಪತಿ ಮತ್ತು ತ್ರಿಷಾ ಕಾಣಿಸಿಕೊಂಡಿದ್ದ ಪಾತ್ರಗಳಲ್ಲಿ ಗಣೇಶ್ ಮತ್ತು ಜಾಕಿ ಭಾವನಾ ನಟಿಸುತ್ತಿದ್ದಾರೆ. ಪ್ರೀತಂ ಗುಬ್ಬಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಎಲ್ಲಾ ಹಾಡುಗಳಿಗೂ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ವಿಶೇಷ ಅಂದ್ರೆ ಇದು ಅರ್ಜುನ್ ಜನ್ಯ ಅವರ 100ನೇ ಸಿನಿಮಾ ಕೂಡ ಹೌದು. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನ ಸದ್ಯಕ್ಕೆ ಘೋಷಣೆ ಮಾಡಿಲ್ಲ.

More from Filmibeat

English summary
Anisuthide....3rd song of lyrical video will be release on march 18th evening 4 pm on anand audio youtube channel. the movie starrer golden star ganesh and bhavana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X