twitter
    For Quick Alerts
    ALLOW NOTIFICATIONS  
    For Daily Alerts

    ಗಣೇಶ್ ಗೆ ಒಂದು ಆಸೆ: ಈ ಹಾಡನ್ನ ನಿಮಗೆ ಕೇಳಿಸಬೇಕಂತೆ

    |

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದ ಈ ಹಾಡಿನಿಂದ ಗಮನ ಸೆಳೆಯುತ್ತಿದೆ. ಈಗಾಗಲೇ ಚಿತ್ರದ ಬ್ಯೂಟಿಫುಲ್ ಮೇಕಿಂಗ್ ಚಿತ್ರಗಳು ಬಹಿರಂಗವಾಗಿದ್ದು, ಈ ಚಿತ್ರವನ್ನ ನೋಡಲೇಬೇಕು ಎಂದು ಕಾಯುವಂತಾಗಿದೆ.

    ಈ ಮಧ್ಯೆ 99 ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಸಂಗೀತ ಪ್ರಿಯರ ಮನಮುಟ್ಟಿದೆ. ಈಗ ಮೂರನೇ ಹಾಡಿನ ಸಮಯ. ಸ್ವತಃ ಗಣೇಶ್ ಅವರಿಗೆ ಈ ಹಾಡು ತುಂಬಾ ಇಷ್ಟ ಆಗಿರಬೇಕು. ಅದಕ್ಕೆ ನಿಮಗೂ 'ಈ ಹಾಡನ್ನ ಆದಷ್ಟೂ ಬೇಗ ಕೇಳಿಸಬೇಕು ಎಂಬ ಆಸೆ ನನಗೆ'' ಎಂದು ಟ್ವೀಟ್ ಮಾಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣಿಯ '99' ಹಾಡು ಕೇಳಿ ಮನಸೋತ ಸುದೀಪ್ ಗೋಲ್ಡನ್ ಸ್ಟಾರ್ ಗಣಿಯ '99' ಹಾಡು ಕೇಳಿ ಮನಸೋತ ಸುದೀಪ್

    ಗಣೇಶ್ ಅವರ ಇಷ್ಟದ ಹಾಡು ಮಾರ್ಚ್ 18 ರಂದು ಬಿಡುಗಡೆಯಾಗುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಸಂಜೆ 4 ಗಂಟೆಗೆ 'ಅನಿಸುತ್ತಿದೆ.....' ಎಂಬ ಹಾಡು ರಿಲೀಸ್ ಆಗುತ್ತಿದೆ.

    99 movie 3rd song will release on march 18th

    ಅನಿಸುತ್ತಿದೆ ಎಂದಾಕ್ಷಣ ನಮಗೆ ನೆನಪಾಗುವುದು ಇದೇ ಗಣೇಶ್ ಅಭಿನಯದ ಮುಂಗಾರುಮಳೆ ಸಿನಿಮಾ. ಈ ಚಿತ್ರದಲ್ಲಿ ಬರುವ ಅನಿಸುತ್ತಿದೆ ಹಾಡು ಆಲ್ ಟೈಮ ಹಿಟ್ ಮತ್ತು ಎಲ್ಲರಿಗೂ ಫೇವರೆಟ್. ಹಾಗಾಗಿ, ಆ ಹಾಡಿನ ರೀತಿ ಈ ಹಾಡು ಕೂಡ ಸಕ್ಸಸ್ ಆಗಬಹುದು ಎಂಬ ನಿರೀಕ್ಷೆ ಇದೆ.

    ಸ್ಯಾಂಡಲ್ ವುಡ್ ಅಂಗಳದಲ್ಲೀಗ ಈ ಮೂರು ಹಾಡುಗಳದ್ದೇ ಅಬ್ಬರ ಸ್ಯಾಂಡಲ್ ವುಡ್ ಅಂಗಳದಲ್ಲೀಗ ಈ ಮೂರು ಹಾಡುಗಳದ್ದೇ ಅಬ್ಬರ

    ಇನ್ನುಳಿದಂತೆ 99 ಸಿನಿಮಾ ತಮಿಳಿನ 96 ಚಿತ್ರದ ರೀಮೇಕ್. ವಿಜಯ್ ಸೇತುಪತಿ ಮತ್ತು ತ್ರಿಷಾ ಕಾಣಿಸಿಕೊಂಡಿದ್ದ ಪಾತ್ರಗಳಲ್ಲಿ ಗಣೇಶ್ ಮತ್ತು ಜಾಕಿ ಭಾವನಾ ನಟಿಸುತ್ತಿದ್ದಾರೆ. ಪ್ರೀತಂ ಗುಬ್ಬಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಎಲ್ಲಾ ಹಾಡುಗಳಿಗೂ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ವಿಶೇಷ ಅಂದ್ರೆ ಇದು ಅರ್ಜುನ್ ಜನ್ಯ ಅವರ 100ನೇ ಸಿನಿಮಾ ಕೂಡ ಹೌದು. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನ ಸದ್ಯಕ್ಕೆ ಘೋಷಣೆ ಮಾಡಿಲ್ಲ.

    English summary
    Anisuthide....3rd song of lyrical video will be release on march 18th evening 4 pm on anand audio youtube channel. the movie starrer golden star ganesh and bhavana.
    Sunday, March 17, 2019, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X