'ಅಣ್ಣಾಬಾಂಡ್' ಆದ್ಮೇಲೆ '99' ಚಿತ್ರದಿಂದ ಅಪರೂಪದ ಬಿಡುಗಡೆ

Recommended Video

99 kannada movie : ಅಪರೂಪದ ದಾಖಲೆಯನ್ನು ಪುನೀತ್ ಜೊತೆ ಹಂಚಿಕೊಂಡ ಗಣೇಶ್..? | FILMIBEAT KANNADA

ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆಯಾಗುವುದು ಶುಕ್ರವಾರ ಅಥವಾ ಗುರುವಾರ. ಪರಭಾಷೆಯ ಚಿತ್ರಗಳು ಹೆಚ್ಚು ಗುರುವಾರವೇ ರಿಲೀಸ್ ಆಗುತ್ತೆ. ಕನ್ನಡದಲ್ಲಿ ಮೊದಲ ಆಯ್ಕೆ ಶುಕ್ರವಾರಕ್ಕೆ. ಎರಡನೇ ಆಯ್ಕೆ ಗುರುವಾರ. ಆದ್ರೆ, ಇದೀಗ ಅಪರೂಪ ಎಂಬಂತೆ ಬುಧವಾರವೇ ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ.

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '99' ಸಿನಿಮಾ ಮೇ 1 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಮೇ 1 ಯಾವುತ್ತು ಎಂದು ನೋಡಿದ್ರೆ ಅದು ಬುಧವಾರ.

ಹಾಗ್ನೋಡಿದ್ರೆ, ಕನ್ನಡದಲ್ಲಿ ಬುಧವಾರ ಸಿನಿಮಾಗಳು ಚಿತ್ರಮಂದಿರಕ್ಕೆ ಬರೋದು ಬಹಳ ಅಪರೂಪ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಅಣ್ಣಾಬಾಂಡ್ ಸಿನಿಮಾನೂ ಬುಧವಾರವೇ ತೆರೆಕಂಡಿತ್ತು. ಮೇ 1, 2012ರಲ್ಲಿ ಈ ಸಿನಿಮಾ ಬಂದಿತ್ತು.

99 movie releasing on wednesday

ಬಹುಶಃ ಇದನ್ನೆಲ್ಲ ನೋಡಿದ್ರೆ ಮುಂದಿನ ದಿನಗಳಲ್ಲಿ ಬುಧವಾರ, ಮಂಗಳವಾರ, ಸೋಮವಾರ, ಭಾನುವಾರ ಹೀಗೆ ಯಾವುದೇ ದಿನ ನೋಡದೇ ಇಷ್ಟವಾಗಿದ್ದು ಅಥವಾ ಲಕ್ಕಿ ಎನಿಸಿದ ವಾರವೇ ಸಿನಿಮಾ ಬರಬಹುದು. ಒಟ್ನಲ್ಲಿ, ಮೇ 1 ಕಾರ್ಮಿಕರ ದಿನಾಚರಣೆ. ಆ ದಿನ ಸರ್ಕಾರಿ ರಜೆ ಇರುತ್ತೆ. ಹಾಗಾಗಿ, 99 ಚಿತ್ರತಂಡ ಈ ಪ್ಲಾನ್ ಮಾಡಿರಬಹುದು.

ಅಂದ್ಹಾಗೆ, 99 ಚಿತ್ರ ತಮಿಳಿನ 96 ಚಿತ್ರದ ರೀಮೇಕ್. ವಿಜಯ್ ಸೇತುಪತಿ, ತ್ರಿಷಾ ಅಭಿನಯಿಸಿದ್ದ ಈ ಚಿತ್ರವನ್ನ ಕನ್ನಡಕ್ಕೆ ತರಲಾಗಿದ್ದು, ಕನ್ನಡದಲ್ಲಿ ಗಣೇಶ್ ಮತ್ತು ಭಾವನಾ ನಟಿಸಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದು, ರಾಮು ನಿರ್ಮಾಣ ಮಾಡಿದ್ದಾರೆ.'

More from Filmibeat

English summary
Kannada actor, golden star ganesh starrer 99 movie will release on may 1st (wednesday). it is very rare in kannada industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X