For Quick Alerts
  ALLOW NOTIFICATIONS  
  For Daily Alerts

  'ಅಣ್ಣಾಬಾಂಡ್' ಆದ್ಮೇಲೆ '99' ಚಿತ್ರದಿಂದ ಅಪರೂಪದ ಬಿಡುಗಡೆ

  |
  99 kannada movie : ಅಪರೂಪದ ದಾಖಲೆಯನ್ನು ಪುನೀತ್ ಜೊತೆ ಹಂಚಿಕೊಂಡ ಗಣೇಶ್..? | FILMIBEAT KANNADA

  ಸಾಮಾನ್ಯವಾಗಿ ಸಿನಿಮಾಗಳು ಬಿಡುಗಡೆಯಾಗುವುದು ಶುಕ್ರವಾರ ಅಥವಾ ಗುರುವಾರ. ಪರಭಾಷೆಯ ಚಿತ್ರಗಳು ಹೆಚ್ಚು ಗುರುವಾರವೇ ರಿಲೀಸ್ ಆಗುತ್ತೆ. ಕನ್ನಡದಲ್ಲಿ ಮೊದಲ ಆಯ್ಕೆ ಶುಕ್ರವಾರಕ್ಕೆ. ಎರಡನೇ ಆಯ್ಕೆ ಗುರುವಾರ. ಆದ್ರೆ, ಇದೀಗ ಅಪರೂಪ ಎಂಬಂತೆ ಬುಧವಾರವೇ ಕನ್ನಡ ಸಿನಿಮಾ ರಿಲೀಸ್ ಆಗುತ್ತಿದೆ.

  ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '99' ಸಿನಿಮಾ ಮೇ 1 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಮೇ 1 ಯಾವುತ್ತು ಎಂದು ನೋಡಿದ್ರೆ ಅದು ಬುಧವಾರ.

  ಹಾಗ್ನೋಡಿದ್ರೆ, ಕನ್ನಡದಲ್ಲಿ ಬುಧವಾರ ಸಿನಿಮಾಗಳು ಚಿತ್ರಮಂದಿರಕ್ಕೆ ಬರೋದು ಬಹಳ ಅಪರೂಪ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ ಅಣ್ಣಾಬಾಂಡ್ ಸಿನಿಮಾನೂ ಬುಧವಾರವೇ ತೆರೆಕಂಡಿತ್ತು. ಮೇ 1, 2012ರಲ್ಲಿ ಈ ಸಿನಿಮಾ ಬಂದಿತ್ತು.

  ಏಪ್ರಿಲ್ 26 ರಂದು ರಿಲೀಸ್ ಆಗುತ್ತಿಲ್ಲ '99' ಸಿನಿಮಾ ಏಪ್ರಿಲ್ 26 ರಂದು ರಿಲೀಸ್ ಆಗುತ್ತಿಲ್ಲ '99' ಸಿನಿಮಾ

  ಬಹುಶಃ ಇದನ್ನೆಲ್ಲ ನೋಡಿದ್ರೆ ಮುಂದಿನ ದಿನಗಳಲ್ಲಿ ಬುಧವಾರ, ಮಂಗಳವಾರ, ಸೋಮವಾರ, ಭಾನುವಾರ ಹೀಗೆ ಯಾವುದೇ ದಿನ ನೋಡದೇ ಇಷ್ಟವಾಗಿದ್ದು ಅಥವಾ ಲಕ್ಕಿ ಎನಿಸಿದ ವಾರವೇ ಸಿನಿಮಾ ಬರಬಹುದು. ಒಟ್ನಲ್ಲಿ, ಮೇ 1 ಕಾರ್ಮಿಕರ ದಿನಾಚರಣೆ. ಆ ದಿನ ಸರ್ಕಾರಿ ರಜೆ ಇರುತ್ತೆ. ಹಾಗಾಗಿ, 99 ಚಿತ್ರತಂಡ ಈ ಪ್ಲಾನ್ ಮಾಡಿರಬಹುದು.

  99 ಟ್ರೈಲರ್: ಭಾವನಾತ್ಮಕವಾಗಿ ಕಟ್ಟಿಹಾಕುವ ರಾಮ್-ಜಾನು 99 ಟ್ರೈಲರ್: ಭಾವನಾತ್ಮಕವಾಗಿ ಕಟ್ಟಿಹಾಕುವ ರಾಮ್-ಜಾನು

  ಅಂದ್ಹಾಗೆ, 99 ಚಿತ್ರ ತಮಿಳಿನ 96 ಚಿತ್ರದ ರೀಮೇಕ್. ವಿಜಯ್ ಸೇತುಪತಿ, ತ್ರಿಷಾ ಅಭಿನಯಿಸಿದ್ದ ಈ ಚಿತ್ರವನ್ನ ಕನ್ನಡಕ್ಕೆ ತರಲಾಗಿದ್ದು, ಕನ್ನಡದಲ್ಲಿ ಗಣೇಶ್ ಮತ್ತು ಭಾವನಾ ನಟಿಸಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದು, ರಾಮು ನಿರ್ಮಾಣ ಮಾಡಿದ್ದಾರೆ.'

  English summary
  Kannada actor, golden star ganesh starrer 99 movie will release on may 1st (wednesday). it is very rare in kannada industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X