99 ಟ್ರೈಲರ್: ಭಾವನಾತ್ಮಕವಾಗಿ ಕಟ್ಟಿಹಾಕುವ ರಾಮ್-ಜಾನು

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ 99 ಟ್ರೈಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಮೇಕಿಂಗ್ ಫೋಟೋ, ಗೆಟಪ್ ನೋಡಿ ಥ್ರಿಲ್ ಆಗಿದ್ದ ಪ್ರೇಕ್ಷಕರು ಈಗ ಟ್ರೈಲರ್ ನೋಡಿ ಸಂತಸವಾಗಿದ್ದಾರೆ.

ಬಹಳ ದಿನಗಳ ನಂತರ ನಟ ಗಣೇಶ್ ಅವರು ಕಂಪ್ಲೀಟ್ ಲವ್ ಸಬ್ಜೆಕ್ಟ್ ನಲ್ಲಿ ಬರ್ತಿದ್ದು, ಅಭಿಮಾನಿಗಳನ್ನ ಭಾವನಾತ್ಮಕವಾಗಿ ಕಟ್ಟಿಹಾಕುವ ಸೂಚನೆ ನೀಡಿದ್ದಾರೆ. 99 ಸಿನಿಮಾ ಔಟ್ ಅಂಡ್ ಔಟ್ ರೋಮ್ಯಾಂಟಿಕ್ ಆಗಿದ್ದು, ಮೂಲ ಚಿತ್ರದಂತೆ ಇಲ್ಲಿಯೂ ಎಮೋಷನಲ್ ಮನರಂಜನೆ ಸಿಗಲಿದೆ.

ಅಂದ್ಹಾಗೆ, ಕನ್ನಡದ 99 ಸಿನಿಮಾ ತಮಿಳಿನ 96 ಚಿತ್ರದ ರೀಮೇಕ್. ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮತ್ತು ತ್ರಿಷಾ ನಟಿಸಿದ್ದು, ರಾಮ್ ಮತ್ತು ಜಾನು ಪಾತ್ರಗಳಲ್ಲಿ ಗಮನ ಸೆಳೆದಿದ್ದರು. ಕನ್ನಡದಲ್ಲಿಯೂ ಅದೇ ಹೆಸರುಗಳನ್ನ ಉಳಿಸಿಕೊಳ್ಳಲಾಗಿದೆ.

ಟ್ರೈಲರ್ ನೋಡಿದ ಅಭಿಮಾನಿಗಳು, ಈ ಸಿನಿಮಾ ಖಂಡಿತಾ ಯಶಸ್ಸು ಕಾಣುತ್ತೆ, ಒಂದೊಳ್ಳೆ ಸಿನಿಮಾ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

99-movie-trailer-release

ಇನ್ನುಳಿದಂತೆ ಪ್ರೀತಂ ಗುಬ್ಬಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಮು ಫಿಲಂಸ್ ನಿರ್ಮಿಸಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಎಲ್ಲದಕ್ಕೂ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಇದು ಇವರ 100 ಸಿನಿಮಾ ಎನ್ನುವುದು ವಿಶೇಷ.

More from Filmibeat

English summary
Golden star ganesh and Jackie Bhavana starrer 99 movie trailer released today. the movie directed by preetham gubbi and its remake of tamil super hit movie 96.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X