ಏಪ್ರಿಲ್ 16ಕ್ಕೆ '99' ಚಿತ್ರದ ಟ್ರೈಲರ್ ಬಿಡುಗಡೆ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನಾ ಅಭಿನಯದ 99 ಚಿತ್ರದ ಟ್ರೈಲರ್ ಏಪ್ರಿಲ್ 16ರಂದು ಬಿಡುಗಡೆಯಾಗಲಿದೆ. ಈಗಾಗಲೇ ಹಾಡುಗಳು ಮೂಲಕ ಮೋಡಿ ಮಾಡುತ್ತಿರುವ ಗಣೇಶ್ ಸಿನಿಮಾ ಇಂದು ಸಂಜೆ 5.30ಕ್ಕೆ ಟ್ರೈಲರ್ ರಿಲೀಸ್ ಮಾಡಲಿದೆ.
ತಮಿಳಿನ ಸೂಪರ್ ಹಿಟ್ 96 ಚಿತ್ರದ ಕನ್ನಡ ರೀಮೇಕ್ ಇದಾಗಿದ್ದು, ವಿಜಯ್ ಸೇತುಪತಿ ಮಾಡಿದ್ದ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ತ್ರಿಷಾ ಅಭಿನಯಿಸಿದ್ದ ಪಾತ್ರದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ, ಇದು ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ತಮಿಳಿನಲ್ಲಿ ಅತಿ ದೊಡ್ಡ ಯಶಸ್ಸು ಕಂಡಿತ್ತು. ವಿಜಯ್ ಸೇತುಪತಿ ಮತ್ತು ತ್ರಿಷಾ ಜೋಡಿಗೆ ದೊಡ್ಡ ಬ್ರೇಕ್ ಕೊಡ್ತು. ಚಾರ್ಮ್ ಕಳೆದುಕೊಂಡಿದ್ದ ತ್ರಿಷಾಗೆ ಈ ಸಿನಿಮಾ ಮತ್ತೊಂದು ಲೈಫ್ ಕೊಡ್ತು ಎನ್ನಬಹುದು.

ಅಂತಹ ಚಿತ್ರವನ್ನ ಈಗ ಕನ್ನಡದಲ್ಲಿ ಮಾಡುತ್ತಿರುವುದರಿಂದ ಸಹಜವಾಗಿ ಕುತೂಹಲ, ನಿರೀಕ್ಷೆ ಹೆಚ್ಚಿದೆ. ಗಣೇಶ್ ವೃತ್ತಿ ಜೀವನದಲ್ಲಿ ಈ ಚಿತ್ರ ಮತ್ತೊಂದು ಮೈಲಿಗಲ್ಲು ಆಗಲಿದೆ ಎಂಬ ನಂಬಿಕೆ ಹುಟ್ಟಿಕೊಂಡಿದೆ.
ಪ್ರೀತಂ ಗುಬ್ಬಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಾಮು ಫಿಲಂಸ್ ನಿರ್ಮಿಸಿದೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಎಲ್ಲದಕ್ಕೂ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಇದು ಇವರ 100 ಸಿನಿಮಾ ಎನ್ನುವುದು ವಿಶೇಷ.


Click it and Unblock the Notifications











