9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷತೆಗಳು!

By Bharath Kumar

9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್-BIFFES) ಫೆಬ್ರವರಿ 2 ರಿಂದ ಫೆಬ್ರವರಿ 9 ವರೆಗೂ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಜಗತ್ತಿನ ವಿವಿಧ ದೇಶಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದೆ. ವಿಶೇಷ ಅಂದ್ರೆ, ಈ ಬಾರಿಯ ಚಿತ್ರವೋತ್ಸವದಲ್ಲಿ ಕನ್ನಡ ಚಿತ್ರಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.[ಫೆ 2 ರಿಂದ 9ರ ವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ]

ಚಿತ್ರೋತ್ಸವದ ಉದ್ಘಾಟನೆ ಬೆಂಗಳೂರಿನಲ್ಲಿ ನಡೆದರೆ, ಸಮಾರೂಪ ಕಾರ್ಯಕ್ರಮ ಮೈಸೂರಿನಲ್ಲಿ ನೆರವೇರಲಿದೆ. 9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಹಲವು ವಿಶೇಷತೆಗಳಿಂದ ಕೂಡಿದ್ದು, ಏನೇಲ್ಲಾ ವಿಶೇಷತೆಗಳಿವೆ ಎಂಬುದನ್ನ ಮುಂದೆ ಓದಿ.

ಮುಖ್ಯಮಂತ್ರಿಗಳಿಂದ ಉದ್ಘಾಟನೆ!

ಮುಖ್ಯಮಂತ್ರಿಗಳಿಂದ ಉದ್ಘಾಟನೆ!

9ನೇ ಬೆಂಗಳೂರು ಚಲನಚಿತ್ರೋತ್ಸವದ ಉದ್ಘಾಟನೆ ಫೆಬ್ರುವರಿ 2, 2017 ರಂದು ಗುರುವಾರ ಸಂಜೆ ನಡೆಯಲಿದ್ದು, ವಿಧಾನಸೌದದ ಮುಂಬಾಗದಲ್ಲಿ ಕಾರ್ಯಕ್ರಮ ನೆರೆವೇರಲಿದೆ. ಕಾರ್ಯಕ್ರಮವನ್ನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ.

ಅತಿಥಿಗಳು ಯಾರು?

ಅತಿಥಿಗಳು ಯಾರು?

ಈ ಭಾರಿಯ ಚಿತ್ರೋತ್ಸವಕ್ಕೆ ಬಂಗಾಲಿ ಖ್ಯಾತ ನಿರ್ದೇಶಕ ಬುದ್ದ ದೇವದಾಸ್ ಗುಪ್ತ, ಈಜಿಪ್ಟ್ ಚಿತ್ರ ನಿರ್ದೇಶಕಿ ಹಲಾ ಖಲೀಲ್ ಹಾಗೂ ಕನ್ನಡ ನಟ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇನ್ನೂ ಈ ಕಾರ್ಯಕ್ರಮವನ್ನ ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಮತ್ತು ರಮೇಶ್ ಅರವಿಂದ ನಿರ್ವಹಿಸಲಿದ್ದಾರೆ.

ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು!

ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳು!

9ನೇ ಚಿತ್ರೋತ್ಸವದಲ್ಲಿ ಸುಮಾರು 60 ದೇಶಗಳ 240 ಚಿತ್ರಗಳು ವಿವಿಧ‌ ವಿಭಾಗಗಲ್ಲಿ ಭಾಗಿಯಾಗಲಿದೆ. ಅವುಗಳಲ್ಲಿ 38 ರಿಂದ 40 ಕನ್ನಡ ಚಿತ್ರಗಳು ಭಾಗಿಯಾಗುತ್ತಿವೆಯಂತೆ. ಏಷ್ಯಾ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ 14 ಸಿನಿಮಾಗಳಿದ್ದು, ಕನ್ನಡದ ‘ಯು ಟರ್ನ್‌' ಆಯ್ಕೆಯಾಗಿದೆ. ಭಾರತೀಯ ಚಿತ್ರಗಳ ವಿಭಾಗದಲ್ಲಿ 13 ಚಿತ್ರಗಳಿದ್ದು, ಅನನ್ಯ ಕಾಸರವಳ್ಳಿ ನಿರ್ದೇಶನದ ಕನ್ನಡದ ‘ಹರಿಕಥಾ ಪ್ರಸಂಗ' ಸ್ಪರ್ಧೆಯಲ್ಲಿದೆ. ಕನ್ನಡ ಚಿತ್ರಗಳ ವಿಭಾಗದಲ್ಲಿ 12 ಚಿತ್ರಗಳು ಮತ್ತು ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆಯಲ್ಲಿ 5 ಸಿನಿಮಾಗಳು ಭಾಗವಹಿಸಿವೆ.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

ಎಲ್ಲೆಲ್ಲಿ ಚಿತ್ರ ಪ್ರದರ್ಶನವಿದೆ!

ಎಲ್ಲೆಲ್ಲಿ ಚಿತ್ರ ಪ್ರದರ್ಶನವಿದೆ!

ಬೆಂಗಳೂರು ರಾಜಾಜಿನಗರದಲ್ಲಿರುವ ಓರಾಯನ್ ಮಾಲ್ ನ ಪಿವಿಆರ್ ಸಿನಿಮಾಸ್ ನ 11 ಪರದೆಗಳು ಮತ್ತು ಮೈಸೂರು ಮಾಲ್ ಆಪ್ ಮೈಸೂರು ಐನಾಕ್ಸ್ ಸಿನಿಮಾಸ್ ನ 4 ಪರದೆಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿವೆ.

ಚಿತ್ರೋತ್ಸವದ ವಿಶೇಷತೆಗಳು!

ಚಿತ್ರೋತ್ಸವದ ವಿಶೇಷತೆಗಳು!

ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಿರುವ 30 ಚಲನಚಿತ್ರಗಳು ಪ್ರದರ್ಶನ ಗೊಳ್ಳುತ್ತಿರುವುದು ಈ ಬಾರಿಯ ವಿಶೇಷ. ಈ ಭಾರಿಯ ಚಿತ್ರೋತ್ಸವದಲ್ಲಿ 25 ನಿರ್ದೇಶಕಿಯರ ಚಿತ್ರಗಳು ವಿಶ್ವ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಗುತ್ತವೆ. ಇನ್ನೂ ಜೀವನಕಥಾ ಚಿತ್ರಗಳ ವಿಭಾಗದಲ್ಲಿ ವಿದ್ವಾಂಸ ಎಂ.ಎಂ.ಕಲ್ಬುರ್ಗಿ, ಗಾಯಕ ಮಹಮ್ಮದ್‌ ರಫಿ, ಕವಿ ಪಾಬ್ಲೊ ನೆರುಡ, ಫ್ರಿಟ್ಸ್ ಲ್ಯಾಂಗ್‌, ಕಲಾವಿದ ವಾನ್‌ ಗೋ, ತತ್ವಜ್ಞಾನಿ ಲೂಯಿ ಆಯಂಡ್ರಿಯ ಸಲೋಮೆ ಕುರಿತ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಅಗಲಿದೆ ಗಣ್ಯರಿಗೆ ಗೌರವ

ಅಗಲಿದೆ ಗಣ್ಯರಿಗೆ ಗೌರವ

ಇತ್ತೀಚೆಗೆ ನಿಧನರಾದ ನಟಿ, ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತ, ಕರ್ನಾಟಕ ಸಂಗೀತ ದಿಗ್ಗಜ ಎಂ.ಬಾಲಮುರಳಿ ಕೃಷ್ಣ, ನಟ ಓಂ ಪುರಿ, ಸಂಕೇತ್ ಕಾಶಿ, ಡಾ. ಅಶೋಕ್ ಪೈ, ಶ್ರೀ ಹರಿ ಖೋಡೆ, ಅಬ್ಬಾಸ್ ಕಿಯರೋಸ್ಟಮಿ ಅವರಿಗೆ ಚಿತ್ರೋತ್ಸವದ ಮೂಲಕ ಗೌರವ ಸಲ್ಲಿಸಲಾಗುವುದು.

ಮೈಸೂರಿನಲ್ಲಿ ಸಮಾರೋಪ ಕಾರ್ಯಕ್ರಮ!

ಮೈಸೂರಿನಲ್ಲಿ ಸಮಾರೋಪ ಕಾರ್ಯಕ್ರಮ!

ಫೆ.9 ರಂದು ಸಂಜೆ ಮೈಸೂರಿನ ಅರಮನೆ ಮುಂದೆ ಚಿತ್ರೋತ್ಸವದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ವಜುಭಾಯ್ ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

More from Filmibeat

English summary
9th Bengaluru International Film Festival (BIFFES) To be held simultaneously at PVR Cinemas, Orion Mall in Rajajinagar here and INOX Cinemas in Mall of Mysuru from February 2. Here is the complete details of 9th edition of the Bengaluru International Film Festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X