ಅಂಬಿ ನಟನೆಯ ಕೊನೆಯ ದೃಶ್ಯ 'ಅಮರ್' ಸಿನಿಮಾದಲ್ಲಿದೆ
Recommended Video
ಅಭಿಷೇಕ್ ಅಂಬರೀಶ್ ನಟನೆಯ 'ಅಮರ್' ಸಿನಿಮಾ ಇಂದು ಬಿಡುಗಡೆಯಾಗಿದೆ. ಚಿತ್ರ ನೋಡಲು ಬಂದ ಅಭಿಮಾನಿಗಳಿಗೆ ಒಂದು ಅಚ್ಚರಿ ಕಾದಿದೆ.
ನಟ ಅಂಬರೀಶ್ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ'. ಆದರೆ, ಅವರು 'ಅಮರ್' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹೌದು, 'ಅಮರ್' ಸಿನಿಮಾದಲ್ಲಿ ಅಂಬರೀಶ್ ಅವರ ಒಂದು ದೃಶ್ಯ ಇದೆ. ಸಿನಿಮಾದ ಕೊನೆಯಲ್ಲಿ ಅದು ಬರುತ್ತದೆ.
'ಒಲವಿನ ಉಡುಗೊರೆ ಕೊಡಲೇನು.. ರಕುತದೆ ಬರೆದೆನು ಇದ ನಾನು..' ಎಂದು ಹಾಡುವ ಮೂಲಕ ಅಂಬಿ ಕೊನೆಯದಾಗಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ರೀತಿಯಾಗಿ ನಿರ್ಮಾಪಕ ಹಾಗೂ ಅಂಬರೀಶ್ ಸ್ನೇಹಿತ ಸಂದೇಶ್ ನಾಗರಾಜ್ ನಮನ ಸಲ್ಲಿಸಿದ್ದಾರೆ.

ಸಿನಿಮಾ ಮುಗಿದ ತಕ್ಷಣ ಅಂಬರೀಶ್ ಅಗಲಿದ ದೃಶ್ಯಗಳು ಬರುತ್ತದೆ. ಆ ನಂತರ ಅಂಬಿ ನಟಿಸಿದ ಕೊನೆಯ ದೃಶ್ಯ ಸ್ಕ್ರೀನ್ ಬರುತ್ತದೆ. ಆಗ ಇಡೀ ಚಿತ್ರಮಂದಿರ ಒಂದು ಕ್ಷಣ ಮೌನವಾಗುತ್ತದೆ.
ಅಂದಹಾಗೆ, 'ಅಮರ್' ಒಂದು ಲವ್ ಸ್ಟೋರಿ ಸಿನಿಮಾ ಆಗಿದೆ. ಅಭಿಷೇಕ್ ಮಾಸ್ ಮತ್ತು ಕ್ಲಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ತಾನ್ಯ ಪಾತ್ರ ನಿರ್ವಹಣೆ ಚೆನ್ನಾಗಿದೆ. ಕೆಲವು ತಪ್ಪುಗಳ ಜೊತೆಗೆ ಸಿನಿಮಾದ ಕೆಲವು ಅಂಶಗಳನ್ನು ಮೆಚ್ಚಿಕೊಳ್ಳಬಹುದು.


Click it and Unblock the Notifications











