KGF 2 Free Tickets : ಸಿಬ್ಬಂದಿಗೆ, ಗ್ರಾಹಕರಿಗೆ ಉಚಿತ 'ಕೆಜಿಎಫ್ 2' ಟಿಕೆಟ್ ಘೋಷಿಸಿದ ಸಂಸ್ಥೆ

'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನಗಳಾದರೂ ಚಿತ್ರಮಂದಿರಗಳಲ್ಲಿ ಜನದಟ್ಟಣೆ ಕಡಿಮೆಯಾಗಿಲ್ಲ. ಸಿನಿಮಾದ ಟಿಕೆಟ್ ದೊರಕುವುದು ಈಗಲೂ ಕಷ್ಟಕರವೇ ಆಗಿದೆ. ಇಂಥಹಾ ಸಮಯದಲ್ಲಿ ಸಂಸ್ಥೆಯೊಂದು ತನ್ನ ಸಿಬ್ಬಂದಿಗಳಿಗೆ ಹಾಗೂ ಬಳಕೆದಾರರಿಗೆ ಉಚಿತವಾಗಿ 'ಕೆಜಿಎಫ್ 2' ಟಿಕೆಟ್ ನೀಡುವುದಾಗಿ ಘೋಷಿಸಿದೆ.

ದಕ್ಷಿಣ ಭಾರತದ ಅಪ್ಲಿಕೇಶನ್ ಒಂದು ಹೀಗೊಂದು ಘೋಷಣೆ ಮಾಡಿದೆ. ತಮ್ಮ ಸಿಬ್ಬಂದಿಗಳು ಹಾಗೂ ಹೊಸದಾಗಿ ನೊಂದಣಿ ಆಗುವ ಬಳಕೆದಾರರಿಗೆ 'ಕೆಜಿಎಫ್ 2' ಸಿನಿಮಾದ ಟಿಕೆಟ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಹೊರಡಿಸಿದೆ.

''ನಾವು 'ಕೆಜಿಎಫ್ 2' ಸಿನಿಮಾ ಟಿಕೆಟ್‌ಗಳನ್ನು ಮೀಮ್‌ಚಾಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿ, ಇಂಟರ್ನ್‌ಗಳು ಹಾಗೂ ಹೊಸದಾಗಿ ನಮ್ಮ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ನೊಂದಣಿ ಆಗುವ ಬಳಕೆದಾರರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಸಿನಿಮಾ ಟಿಕೆಟ್ ಕುರಿತ ಎಲ್ಲ ಮಾಹಿತಿ ನಮ್ಮ ಅಪ್ಲಿಕೇಶನ್‌ನಲ್ಲಿ ಇದೆ'' ಎಂದು ಸಂಸ್ಥೆಯು ಹೇಳಿಕೆ ಹೊರಡಿಸಿದೆ.

A Company Giving Free Tickets Of KGF 2 Movie For Its Employees And Users

'ಕೆಜಿಎಫ್ 2' ಸಿನಿಮಾಕ್ಕೆ ಮಾತ್ರವಲ್ಲ ಈ ಹಿಂದೆ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೀಗೆ ಸಂಸ್ಥೆಗಳು ರಜೆ ನೀಡಿದ, ಉಚಿತ ಟಿಕೆಟ್ ನೀಡಿದ ಉದಾಹರಣೆಗಳು ಇವೆ. 'ಪುಷ್ಪ', 'RRR' ಸಿನಿಮಾಕ್ಕೂ ಕೆಲವು ಸಂಸ್ಥೆಗಳು ಸಿಬ್ಬಂದಿಗೆ ರಜೆ ನೀಡಿದ್ದವು. 'ಕೆಜಿಎಫ್; ಚಾಪ್ಟರ್ 1' ಸಿನಿಮಾಕ್ಕೆ ಸಹ ಕೆಲವು ಸಂಸ್ಥೆಗಳು ಉಚಿತ ಟಿಕೆಟ್ ವಿತರಿಸಿದ್ದವು.

'ಕೆಜಿಎಫ್ 2' ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದ್ದು, ಬಿಡುಗಡೆ ಆಗಿರುವ ಎಲ್ಲ ರಾಜ್ಯಗಳಲ್ಲಿಯೂ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಅಂತೂ ಸಿನಿಮಾ ಸೂಪರ್ ಹಿಟ್ ಆಗಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ 'ಕೆಜಿಎಫ್ 2' ಈಗಾಗಲೇ 200 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾದ ಒಟ್ಟು ಗಳಿಕ ನಾಲ್ಕು ದಿನಕ್ಕೆ 500 ಕೋಟಿ ದಾಟಿದ್ದು, ಕೆಲವೇ ದಿನಗಳಲ್ಲಿ 1000 ಕೋಟಿ ಗಡಿಯನ್ನು ದಾಟಿ ದಾಖಲೆ ಬರೆಯಲಿದೆ.

ಪ್ರಶಾಂತ್ ನೀಲ್ ನಿರ್ದೇಶಿಸಿ, ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ರಾಕಿಭಾಯ್ ಯಶ್ ಜೊತೆಗೆ, ನಾಯಕಿಯಾಗಿ ಶ್ರೀನಿಧಿ ಶೆಟ್ಟಿ, ವಿಲನ್ ಆಗಿ ಅಧೀರ ಹಾಗೂ ರವೀನಾ ಟಂಡನ್ ನಟಿಸಿದ್ದಾರೆ. ಜೊತೆಗೆ ಪ್ರಕಾಶ್ ರೈ, ರಾವ್ ರಮೇಶ್, ಮಾಳವಿಕ ಅವಿನಾಶ್, ನಾಗಾಭರಣ ಸೇರಿದಂತೆ ಹಲವು ಪ್ರತಿಭಾವಂತ ನಟರ ದಂಡೇ ಇದೆ. ಸಿನಿಮಾದ ಮೇಕಿಂಗ್ ಅನ್ನು ಜನ ವಿಪರೀತ ಹೊಗಳುತ್ತಿದ್ದು, ಸಿನಿಮಾದ ಕ್ಯಾಮೆರಾ ಕೆಲಸ, ಎಡಿಟಿಂಗ್ ಹಾಗೂ ರವಿ ಬಸ್ರೂರು ಸಂಗೀತಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

More from Filmibeat

English summary
A company giving free tickets of KGF 2 movie for its employees and new users who download their application and register.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X