»   » ವಿಜಯ್ 'ಮೆರ್ಸಲ್' ಚಿತ್ರದ ವಿರುದ್ಧ ಮಧುರೈ ಪೊಲೀಸ್ ಠಾಣೆಗೆ ದೂರು!

ವಿಜಯ್ 'ಮೆರ್ಸಲ್' ಚಿತ್ರದ ವಿರುದ್ಧ ಮಧುರೈ ಪೊಲೀಸ್ ಠಾಣೆಗೆ ದೂರು!

Posted By:
Subscribe to Filmibeat Kannada

ಒಂದಲ್ಲ ಒಂದು ಕಾರಣಕ್ಕೆ ದೊಡ್ಡ ಸುದ್ದಿ ಮಾಡುತ್ತಿರುವ ವಿಜಯ್ ನಟನೆಯ 'ಮೆರ್ಸಲ್' ಚಿತ್ರದ ವಿರುದ್ಧ ಈಗ ಮಧುರೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಿತ್ರದಲ್ಲಿರುವ ಒಂದು ಸಂಭಾಷಣೆ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

'ನಮಗೆ ದೇಗುಲಗಳು ಬೇಕಾಗಿಲ್ಲ, ನಮಗೆ ಆಸ್ಪತ್ರೆಗಳು ಬೇಕು' ಎಂಬರ್ಥ ಬರುವ ಡೈಲಾಗ್ ಈಗ ವಿವಾದಕ್ಕೆ ಕಾರಣ ಆಗಿದೆ. ಈ ಸಂಭಾಷಣೆಯಿಂದ ಧಾರ್ಮಿಕ ಭಾವನೆಗಳಿಗೆ ತೊಂದರೆಯಾಗಿದೆ ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಧುರೈ ಪೊಲೀಸರಿಗೆ ದೂರು ನೀಡಿದ್ದಾರೆ.

A complaint filed against Vijay's 'Mersal'

ಇದಲ್ಲದೆ ಚಿತ್ರದಲ್ಲಿ ಮೋದಿ ಅವರ ಜಿ.ಎಸ್.ಟಿ, ಡಿಜಿಟಲ್ ಇಂಡಿಯಾ ಯೋಜನೆಯನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಬಿಜೆಪಿ ನಾಯಕರಾದ ರಾಜ, ತಮಿಳ್ ಇಸೈ ಸೌಂದರರಾಜನ್, ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಚಿತ್ರದ ವಿರುದ್ಧ ಕಿಡಿಕಾರಿದ್ದರು. ಜೊತೆಗೆ ಡಿ ವೈ ಎಫ್ ಐ ಸಂಘಟನೆ ಸದಸ್ಯರು ಪ್ರತಿಭಟನೆ ಕೂಡ ನಡೆಸಿದ್ದರು.

ಅಂದಹಾಗೆ, 'ಮೆರ್ಸಲ್' ಸಿನಿಮಾದಲ್ಲಿ ವಿಜಯ್, ಸಮಂತಾ, ನಿತ್ಯಾ ಮೆನನ್, ಕಾಜಲ್ ಅಗರವಾಲ್ ನಟಿಸಿದ್ದಾರೆ. ಅಕ್ಟೋಬರ್ 18ರಂದು ತೆರೆಗೆ ಬಂದಿದ್ದ ಈ ಚಿತ್ರ ಸದ್ಯ ನೂರು ಕೋಟಿ ಕಲೆಕ್ಷನ್ ಮಾಡಿದೆ.

English summary
Vijay's 'Mersal' movie in trouble, a complaint filed against film for hurting hindu sentiments.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X