ಪುನೀತ್ ಭಾವಚಿತ್ರದ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ!

ಪುನೀತ್ ರಾಜ್‌ ಕುಮಾರ್ ನಮ್ಮನ್ನೆಲ್ಲ ಅಗಲಿ ಎರಡೂ ತಿಂಗಳುಗಳು ಕಳೆದಿದೆ. ಆದರೆ ಈಗಲೂ ಪುನೀತ್ ನಮ್ಮೊಂದಿಗೆ ಇಲ್ಲ ಅಂತ ಊಹಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈಗಲೂ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಸಮಾಧಿ ಬಳಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಅವರ ಆಸಿರ್ವಾದವನ್ನು ಪಡೆಯುತ್ತಿದ್ದಾರೆ. ಚಿಕ್ಕವರಿಂದ ಹಿಡಿದು ಹಿರಿಯರು ವಯಸ್ಸಾದವರೂ ಎಲ್ಲರೂ ಸಾಲು ಗಟ್ಟಿ ನಿಂತು ಪುನೀತ್ ಸಮಾಧಿ ಬಳಿ ಆಗಮಿಸಿಸುತ್ತಿದ್ದಾರೆ.

Recommended Video

ದಾಖಲೆ TRP, ಮತ್ತೊಂದು ಅಪ್ಪು ಕಾರ್ಯಕ್ರಮಕ್ಕೆ ಮುಂದಾದ Zee ಕನ್ನಡ

ಪುನೀತ್ ರಾಜ್‌ ಕುಮಾರ್ ಅವರ ಹೆಸರಲ್ಲಿ ಈಗಲೂ ಉತ್ತಮ ಕೆಲಸಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ರಕ್ತದಾನ, ಸೇತ್ರದಾನ, ಅನ್ನದಾನ ಸೇರಿದಂತೆ ಹಲವು ಮಹತ್ಕಾರ್ಯಗಳು ಜರುಗುತ್ತಲೇ ಇದೆ. ಅಷ್ಟೇ ಯಾಕೆ, ಪ್ರತೀ ಏರಿಯಾಗಳಲ್ಲಿ ಪುನೀತ್ ರಾಜ್‌ ಕುಮಾರ್ ಹೆಸರನ್ನು ಇಡಲಾಗುತ್ತಿದೆ. ಪುನೀತ್‌ ರಾಜ್‌ ಕುಮಾರ್ ವೃತ್ತ, ಪುನೀತ್‌ ರಾಜ್‌ ಕುಮಾರ್ ರಸ್ತೆ, ಪುನೀತ್‌ ರಾಜ್‌ ಕುಮಾರ್ ಸಭಾಂಗಣ ಎಂದೆಲ್ಲ ಹೆಸರಿಟ್ಟು ಪುನೀತ್ ಅವರನ್ನು ನೆನೆಯುವ ಕೆಲಸವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ತಮ್ಮ ನೆಚ್ಚನ ನಟನ ಸಾರಥ್ಯದಲ್ಲಿ ವಿವಾಹವಾಗಲು ಬಯಸಿದ್ದವರು ಈಗ ಪುನೀತ್ ಭಾವಚಿತ್ರದ ಮುಂದೆ ನಿಂತು, ಅಥವಾ ಸಮಾಧಿ ಮುಂದೆ ನಿಂತು ಮದುವೆ ಆಗುತ್ತಿರೋ ಬಗ್ಗೆ ನೋಡುತ್ತಿದ್ದೇವೆ. ಇದೀಗ ಇಲ್ಲೊಂದು ಜೋಡಿ ಕೂಡ ಪುನೀತ್ ಅವರ ಬ್ಯಾನರ್ ಮುಂದೆ ನಿಂತು ಹಾರ ಬದಲಾಯಿಸಿಕೊಂಡಿದ್ದಾರೆ.

ಹೌದು ಚಿಕ್ಕೋಡಿಯಲ್ಲಿ ಈ ಮದುವೆ ನಡೆದಿದ್ದು, ಪುನೀತ್‌ ರಾಜ್‌ಕುಮಾರ್ ಭಾವಚಿತ್ರದ ಮುಂದೆಯೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ವಧು ಮತ್ತು ವರ ಇಬ್ಬರು ಪುನೀತ್ ಅಭಿಮಾನಿಗಳು. ಈ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಹೇಗಾದರು ಮಾಡಿ ಪುನೀತ್ ರಾಜ್‌ಕುಮಾರ್ ಅವರಿಗೆ ತಲುಪಿಸಬೇಕು ಎಂದು ಕೊಂಡಿತ್ತಂತೆ ಈ ಜೋಡಿ. ಆದರೇ ಅದಷ್ಟರಲ್ಲಿ ಪುನೀತ್ ಎಲ್ಲರನ್ನು ಅಗಲಿ ಇಹ ಲೋಕ ತ್ಯಜಿಸಿದ್ದಾರೆ. ಇದೇ ದುಖಃದಲ್ಲಿದ್ದ ಈ ಜೋಡಿ ಇಂದು ವಿವಾಹವಾಗಿದ್ದಾರೆ. ಅದು ಕೂಡ ಪುನೀತ್ ರಾಜ್‌ಕುಮಾರ್ ಇಲ್ಲದ ನೋವಿನಲ್ಲಿ.

A couple married in front of Puneeth Rajkumar photo in chikkodi

ಇದೇ ಕಾರಣಕ್ಕೆ ಪುನೀತ್ ಅವರ ಭಾವಚಿತ್ರದ ಮುಂದೆಯೇ ಈ ಜೋಡಿ ಮದುವೆ ಆಗಲು ತೀರ್ಮಾನಿಸಿದೆ. ಅದರಂತೆ ಇಂದು ಪುನೀತ್ ಅವರ ಭಾವಚಿತ್ರದ ಮುಂದೆಯೇ ನವ ವಧು-ವರ ಹಾರವನ್ನು ಬದಲಾಯಿಸಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಾಗೇ ಪುನೀತ್ ಅವರ ಆಶೀರ್ವಾದವನ್ನು ಈ ಜೋಡಿ ಪಡೆದುಕೊಂಡಿದೆ. ನಂತರ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿರುವ ಈ ಜೋಡಿ, ಮೌನಾಚರಣೆ ಮಾಡೋ ಮೂಲಕ ಪುನೀತ್ ರಾಜ್‌ಕುಮಾರ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ನೆರೆದಿದ್ದವರು ನವ ಜೋಡಿಗೆ ಸಾಥ್ ನೀಡಿದ್ದಾರೆ.

A couple married in front of Puneeth Rajkumar photo in chikkodi

ಇನ್ನು ಮದುವೆಗೆ ನೆರೆದಿದ್ದ ಸಂಬಂಧಿಕರು, ಸ್ನೇಹಿತರು ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಮದುವೆಗೆ ಆಗಮಿಸಿದ್ದ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ನವ ಜೋಡಿಗೆ ಪುನೀತ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ಸಂದರ್ಭ ಪುನೀತ್ ಅವರನ್ನು ನೆನೆದು ಭಾವುಕರಾದ ಜೋಡಿ ಅವರ ನೆನಪನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
The new couple paid tribute to Puneeth Rajkumar at the wedding hall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X