Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲೂಸಿಯಾ ಪವನ್ ಪತ್ನಿ ನಟನೆಯ 'ಎ ಡೇ ಇನ್ ಡಾಲರ್ಸ್‌ಪೇಟೆ' ಪೋಸ್ಟರ್ ಬಿಡುಗಡೆ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಂಬರುವ ಕನ್ನಡ ಚಿತ್ರಗಳು ಹಬ್ಬಕ್ಕೆ ಶುಭ ಕೋರಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿವೆ. ಅದೇ ರೀತಿ ನಿರ್ದೇಶಕ ಪವನ್ ಕುಮಾರ್ ಪತ್ನಿ ಸೌಮ್ಯ ಜಗನ್‌ಮೂರ್ತಿ ನಟನೆಯ ಮುಂದಿನ ಚಿತ್ರ 'ಎ ಡೇ ಇನ್ ಡಾಲರ್ಸ್‌ಪೇಟೆ' ಚಿತ್ರ ತಂಡ ಕೂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಈ ಮೂಲಕ ಭಿನ್ನ, ಆದಿ ಲಕ್ಷ್ಮಿ ಪುರಾಣ ಹಾಗೂ ಕಥಾ ಸಂಗಮ ಬಳಿಕ ಸೌಮ್ಯ ಜಗನ್‌ಮೂರ್ತಿ ಸಿನಿಮಾಗಾಗಿ ಮತ್ತೆ ಬಣ್ಣ ಹಚ್ಚಿದ್ದಾರೆ.
ಚಿತ್ರತಂಡ ನಿನ್ನೆ ( ಜನವರಿ 13 ) ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಚಿತ್ರದ ನಟಿಯನ್ನು ಪೋಸ್ಟರ್ ಹಂಚಿಕೊಳ್ಳುವುದಾಗಿ ತಿಳಿಸಿತ್ತು. ಈ ಸಲುವಾಗಿ ಇಂದು ಸೌಮ್ಯ ಜಗನ್‌ಮೂರ್ತಿ ಅವರ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರ ದುಡ್ಡಿನ ಸುತ್ತ ಸುತ್ತುವ ಕಥೆ ಎಂಬುದನ್ನು ಪೋಸ್ಟರ್ ಹೇಳುತ್ತಿದ್ದು, ಪೋಸ್ಟರ್‌ನಲ್ಲಿ ಸೌಮ್ಯ ಜಗನ್‌ಮೂರ್ತಿ ಲಕ್ಷ್ಮಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರತಿ ಮಹಿಳೆಯೊಳಗೂ ನಿವಾರಣೆಯ ಶಕ್ತಿ ಇರುತ್ತೆ, ಸಿಂಹಿಣಿ ಇರುತ್ತಾಳೆ ಹಾಗೂ ತನ್ನ ಪುರುಷನನ್ನು ಕಾಪಾಡಿಕೊಳ್ಳುವಂತ ದೇವತೆ ಇರುತ್ತಾಳೆ ಎಂದು ಸಾಲುಗಳನ್ನು ಬರೆದುಕೊಳ್ಳುವುದರ ಮೂಲಕ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ಸೌಮ್ಯ ಜಗನ್‌ಮೂರ್ತಿ ಪೂಜಾ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಹೀಗೆ ಪತ್ನಿ ನಟಿಯಾಗಿ ಚಿತ್ರವೊಂದರಲ್ಲಿ ನಟಿಸುತ್ತಿದ್ದರೆ, ಅತ್ತ ಪವನ್ ಕುಮಾರ್ ಕಳೆದ ವರ್ಷ ಗಾಳಿಪಟ 2ನಲ್ಲಿ ನಟನಾಗಿ ಕಾಣಿಸಿಕೊಂಡಿದ್ದರು ಹಾಗೂ ಇದೀಗ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಧೂಮಂ ಚಿತ್ರದ ಮೂಲಕ ಮತ್ತೆ ನಿರ್ದೇಶಕನ ಕ್ಯಾಪ್ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರ ಮಲಯಾಳಂ ಹಾಗೂ ಕನ್ನಡದ ದ್ವಿಭಾಷಾ ಚಿತ್ರವಾಗಿದ್ದು, ನಾಯಕನಾಗಿ ಮಲಯಾಳಂನ ಫಹಾದ್ ಫಾಸಿಲ್ ಹಾಗೂ ನಾಯಕಿಯಾಗಿ ಅಪರ್ಣ ಬಾಲಮುರಳಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ನಿನ್ನೆಯಷ್ಟೇ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದ ಬೆನ್ನಲ್ಲೇ ಚಿತ್ರ ತೆರೆಗೆ ಅಪ್ಪಳಿಸಲಿದೆ.