For Quick Alerts
  ALLOW NOTIFICATIONS  
  For Daily Alerts

  'ನೂರೊಂದು ನೆನಪು'ಗಳಲ್ಲಿ ಚೇತನ್-ಮೇಘನಾ ರಾಜ್

  By ಭರತ್ ಕುಮಾರ್
  |

  'ನೂರೊಂದು ನೆನಪು' ಎದೆಯಾಳದಿಂದ, ಹಾಡಾಗಿ ಬಂತು ಆನಂದದಿಂದ'......'ಬಂಧನ' ಸಿನಿಮಾದ ಈ ಹಾಡು ಈಗ ಚಿತ್ರದ ಶೀರ್ಷಿಕೆಯಾಗಿದೆ. ಕನ್ನಡದಲ್ಲಿ 'ನೂರೊಂದು ನೆನಪು' ಅಂತ ಹೊಸ ಸಿನಿಮಾ ಮೂಡಿಬರ್ತಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

  ಇತ್ತೀಚಿಗೆ ಅಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ 'ನೂರೊಂದು ನೆನಪು' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ನಟ-ನಟಿಯರ ಜೊತೆ ನಿರ್ದೇಶಕ-ನಿರ್ಮಾಪಕರು ಭಾಗಿಯಾಗಿದ್ದರು.

  'ನೂರೊಂದು ನೆನಪು' ಚಿತ್ರದಲ್ಲಿ 'ಆ ದಿನಗಳು' ಖ್ಯಾತಿಯ ಚೇತನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚೇತನ್ ಗೆ ಜೋಡಿಯಾಗಿ ನಟಿ ಮೇಘನಾ ರಾಜ್ ಸಾಥ್ ಕೊಟ್ಟಿದ್ದಾರೆ. ಇಷ್ಟು ದಿನ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ನಟ ಚೇತನ್, 'ನೂರೊಂದು ನೆನಪು' ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.[ಮತ್ತೆ ಬಣ್ಣ ಹಚ್ಚಲು ಬಂದ್ರು 'ಮೈನಾ' ಚೇತನ್, ಇಷ್ಟು ದಿನ ಎಲ್ಲಿದ್ರು.?]

  A Dinagalu Chetan And Meghana Starrer New Movie Noorondu Nenapu

  'ಫ್ಲೈ' ಚಿತ್ರದ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿರುವ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್, 'ನೂರೊಂದು ನೆನಪು' ಚಿತ್ರದ ಮತ್ತೊಬ್ಬ ನಾಯಕ. ಚಿತ್ರದಲ್ಲಿ ರಾಜ್ ವರ್ಧನ್ ಗೆ ಸುಶ್ಮಿತಾ ಜೋಶಿ ಅರ್ಚನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.[ಯಶಸ್ಸು ಅಂದ್ರೆ 6 ತಿಂಗಳಿಗೊಂದು ಸಿನಿಮಾ ಮಾಡೋದಲ್ಲ: ಮೇಘನಾ]

  ಅಂದ್ಹಾಗೆ, 'ನೂರೊಂದು ನೆನಪು, ಸುಹಾಸ್ ಶಿವಾಲ್ಕರ್ ಅವರು ರಚಿಸಿರುವ ಮರಾಠಿಯ 'ದುನಿಯಾದ್ರಿ' ಎಂಬ ಕಾದಂಬರಿ ಆಧಾರಿತ ಸಿನಿಮಾ. 80 ರ ದಶಕದ ಕಥಾಹಂದರವನ್ನ ಈ ಚಿತ್ರ ಹೊಂದಿದ್ದು, ಅಂದಿನ ಕಾಲಘಟ್ಟದ ಕಾಲೇಜು ದಿನಗಳನ್ನ ನೆನಪಿಸುವಂತಹ ಚಿತ್ರಕಥೆ ಇರಲಿದೆಯಂತೆ.

  ಈ ಚಿತ್ರಕ್ಕೆ ಕುಮಾರೇಶ್ ಎಂಬುವರು ಆಕ್ಟನ್ ಕಟ್ ಹೇಳುತ್ತಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಸೂರಜ್ ದೇಸಾಯಿ, ಮನೀಶ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸದ್ಯ, ಚಿತ್ರದ 70 ರಷ್ಟು ಭಾಗ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ.

  English summary
  'Aa Dinagalu' fame Chetan is making his come back to silver-screen with the movie 'Noorondu Nenapu', directed by Kumaran. 'Noorondu Nenapu'also features Meghana Raj, Raj Vardhan and Chethan

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X